ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಪಾಕ್ ಸರಣಿ ಆಯೋಜನೆಗೆ ಈ ದೇಶದಿಂದ ಸಿಕ್ತು ಗ್ರೀನ್ ಸಿಗ್ನಲ್, ಶೀಘ್ರದಲ್ಲೇ ಮಾತುಕತೆ

We are lucky to host India vs Pakistan matches says The Chairman of the Dubai Cricket Council

ಇತ್ತೀಚೆಗಷ್ಟೇ ಯುಎಇಯಲ್ಲಿ ಅಂತ್ಯಗೊಂಡ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ತನ್ನ ಚೊಚ್ಚಲ ಪಂದ್ಯವನ್ನು ತನ್ನ ಬದ್ಧ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಿತು. ಈ ಸಮರದಲ್ಲಿ ಪಾಕಿಸ್ತಾನ ಟೀಮ್ ಇಂಡಿಯಾ ವಿರುದ್ಧ 10 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಹೊಸ ಮೈಲಿಗಲ್ಲನ್ನು ನಿರ್ಮಿಸಿತು.

ಹೌದು, ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಶ್ವಕಪ್ ಹಣಾಹಣಿಯೊಂದರಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿದ ಸಾಧನೆಯನ್ನು ಪಾಕಿಸ್ತಾನ ಮಾಡಿತು. ಬಾಬರ್ ಅಜಂ ಮತ್ತು ಮಹಮ್ಮದ್ ರಿಜ್ವಾನ್ ಅಜೇಯ ಆಟ ಪಾಕಿಸ್ತಾನಕ್ಕೆ ಐತಿಹಾಸಿಕ ಗೆಲುವನ್ನು ತಂದು ಕೊಟ್ಟಿತು.

ಧನಶ್ರೀ ನಿರ್ದೇಶನದಲ್ಲಿ ಎಬಿಡಿ, ಕೊಹ್ಲಿ ನಟನೆ; ಹೊರಬಿತ್ತು ಎಬಿಡಿ ಆರ್‌ಸಿಬಿಯಲ್ಲೇ ಉಳಿದುಕೊಳ್ಳುವ ಸುಳಿವು!ಧನಶ್ರೀ ನಿರ್ದೇಶನದಲ್ಲಿ ಎಬಿಡಿ, ಕೊಹ್ಲಿ ನಟನೆ; ಹೊರಬಿತ್ತು ಎಬಿಡಿ ಆರ್‌ಸಿಬಿಯಲ್ಲೇ ಉಳಿದುಕೊಳ್ಳುವ ಸುಳಿವು!

2019ರ ವಿಶ್ವಕಪ್ ಟೂರ್ನಿಯ ನಂತರ ಇದೇ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳ ಹಣಾಹಣಿಯನ್ನು ಕ್ರಿಕೆಟ್ ವೀಕ್ಷಕರು ಕಣ್ತುಂಬಿಕೊಂಡರು. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ವಿಶ್ವಕಪ್ ಹಣಾಹಣಿ ನಡೆಯುತ್ತಿದೆ ಎಂದು ವಿಷಯ ತಿಳಿದ ಕೂಡಲೇ ಪ್ರೇಕ್ಷಕರು ವೇಗವಾಗಿ ಟಿಕೆಟ್ ಖರೀದಿಸಿದರು. ಅಷ್ಟೇ ಅಲ್ಲದೆ ಟಿವಿಯಲ್ಲಿ ನೇರಪ್ರಸಾರವಾದಾಗ ಹಾಗೂ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಸ್ಟ್ರೀಮಿಂಗ್ ಆದಾಗ ಲಕ್ಷಾಂತರಗಟ್ಟಲೆ ವೀಕ್ಷಕರು ಪಂದ್ಯವನ್ನು ವೀಕ್ಷಿಸಿದರು. ಹೀಗೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕ ವರ್ಗವನ್ನು ಹೊಂದಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹಣಾಹಣಿ ಐಸಿಸಿ ಟೂರ್ನಿಗಳಿಗೆ ಮಾತ್ರ ಸೀಮಿತವಾಗಿದ್ದು ಇತ್ತಂಡಗಳ ನಡುವೆ ಸರಣಿಗಳನ್ನು ಏರ್ಪಡಿಸುವುದಕ್ಕೆ ರಾಜಕೀಯ ಕಾರಣಗಳು ಅಡ್ಡಿಯಾಗಿವೆ.

ಪಾಕಿಸ್ತಾನಕ್ಕೆ ಭಾರತ ತಂಡ ಪ್ರವಾಸ ಕೈಗೊಳ್ಳುವುದಾಗಲಿ ಅಥವಾ ಭಾರತಕ್ಕೆ ಪಾಕಿಸ್ತಾನ ತಂಡ ಪ್ರವಾಸ ಕೈಗೊಳ್ಳುವುದಕ್ಕಾಗಲಿ ಅನುಮತಿಯಿಲ್ಲ. ಹೀಗಾಗಿಯೇ ಇತ್ತಂಡಗಳ ನಡುವೆ ಸಾಮಾನ್ಯ ಸರಣಿಗಳನ್ನು ವೀಕ್ಷಿಸುವುದು ಅಸಾಧ್ಯವಾಗಿದೆ. 2012ರ ನಂತರ ಇತ್ತಂಡಗಳ ನಡುವೆ ಯಾವುದೇ ಸಾಮಾನ್ಯ ಸರಣಿಗಳು ಕೂಡ ನಡೆದಿಲ್ಲ. ಭಾರತ ಮತ್ತು ಪಾಕಿಸ್ತಾನ ನಡುವೆ ಸಾಮಾನ್ಯ ಸರಣಿಗಳು ಯಾವಾಗ ನಡೆಯಲಿವೆ ಎಂಬ ಪ್ರಶ್ನೆ ಹಲವಾರು ಅಭಿಮಾನಿಗಳಲ್ಲಿ ಇದೆ. ಹೀಗಿರುವಾಗ ಈ ವಿಷಯದ ಕುರಿತಾಗಿ ದುಬೈ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಫಲಕ್ನಾಜ್ ಮಾತನಾಡಿದ್ದು ಯುಎಇಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸರಣಿಯನ್ನು ನಡೆಸಲು ಸಿದ್ಧರಿರುವುದಾಗಿ ಹೇಳಿಕೆ ನೀಡಿದ್ದಾರೆ.

ಭಾರತ ತಂಡದಲ್ಲಿ ಆತ ಇನ್ನೂ ಇರುವುದು ಆತನ ಅದೃಷ್ಟ ಎಂದ ಗೌತಮ್ ಗಂಭೀರ್ಭಾರತ ತಂಡದಲ್ಲಿ ಆತ ಇನ್ನೂ ಇರುವುದು ಆತನ ಅದೃಷ್ಟ ಎಂದ ಗೌತಮ್ ಗಂಭೀರ್

ಹಲಾಲ್' ಮಾಂಸ ಅಂದರೆ ಏನು ? | Oneindia Kannada

"ಯಾವುದೇ ರೀತಿಯ ಟೂರ್ನಿ ಮತ್ತು ಸರಣಿಗಳಿರಲಿ ಯುಎಇ ಅದರಲ್ಲಿಯೂ ದುಬೈ ಆ ಪಂದ್ಯಗಳನ್ನು ತುಂಬಾ ಅಚ್ಚುಕಟ್ಟಾಗಿ ನಡೆಸಿಕೊಡುತ್ತಿರುವುದಕ್ಕೆ ಹೆಮ್ಮೆಯಿದೆ. ಅದರಲ್ಲಿಯೂ ಇಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಒಳ್ಳೆಯ ರೀತಿಯಲ್ಲಿ ಆಯೋಜಿಸಿದ ಕಾರಣ ಯಶಸ್ವಿಯಾಗಿ ಮುಗಿದಿದೆ. ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಕೂಡಾ ನಡೆಯಿತು. ಭಾರತಕ್ಕೆ ನಾವು ಪರ್ಯಾಯ ದೇಶವಾಗಿದ್ದೇವೆ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಮುಂದಿನ ದಿನಗಳಲ್ಲಿ ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸಾಮಾನ್ಯ ಸರಣಿ ನಡೆಸುವುದಕ್ಕೆ ಇಚ್ಛಿಸುತ್ತಿದ್ದೇನೆ. ಈ ಕುರಿತಾಗಿ ಬಿಸಿಸಿಐನಲ್ಲಿರುವ ನನ್ನ ಗೆಳೆಯರ ಜತೆ ಕೂಡ ಚರ್ಚಿಸಿ, ಮನವೊಲಿಸುವ ಯತ್ನ ಮಾಡಲಿದ್ದೇನೆ. ಅವರು ಏನಾದರೂ ಒಪ್ಪಿಗೆ ಸೂಚಿಸಿದರೆ ದುಬೈನಲ್ಲಿ ಆ ಸರಣಿಯನ್ನು ನಡೆಸಲು ಇನ್ನೂ ಹೆಚ್ಚಿನ ಸಂತಸ ಪಡುತ್ತೇವೆ" ಎಂದು ದುಬೈ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಫಲಕ್ನಾಜ್ ಹೇಳಿದ್ದಾರೆ

Story first published: Wednesday, November 24, 2021, 10:02 [IST]
Other articles published on Nov 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X