ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಸರ್ಫರಾಜ್ ಅನ್ನು ಕ್ಷಮಿಸಬಹುದು, ಆದರೆ ತಪ್ಪನ್ನು ಮರೆಮಾಚಲು ಸಾಧ್ಯವಿಲ್ಲ'

‘We can forgive but cannot brush it under the table’ - Plessis

ಕೇಪ್‌ಟೌನ್, ಜನವರಿ 25: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಅವರ ಜನಾಂಗೀಯ ಟೀಕೆ ಕುರಿತು ದಕ್ಷಿಣ ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವು ಕ್ಷಮಿಸಬಹುದು, ಆದರೆ ಅವರ (ಸರ್ಫರಾಜ್) ತಪ್ಪನ್ನು ನಮ್ಮಿಂದ ಮರೆಮಾಚಲು ಸಾಧ್ಯವಿಲ್ಲ ಎಂದಿದ್ದಾರೆ.

ರೊಚ್ಚಿಗೆದ್ದ ರೋಚ್, ಬರೀ 77 ರನ್‌ಗೆ ಟೆಸ್ಟ್ ಇನ್ನಿಂಗ್ಸ್‌ ಮುಗಿಸಿದ ಇಂಗ್ಲೆಂಡ್!ರೊಚ್ಚಿಗೆದ್ದ ರೋಚ್, ಬರೀ 77 ರನ್‌ಗೆ ಟೆಸ್ಟ್ ಇನ್ನಿಂಗ್ಸ್‌ ಮುಗಿಸಿದ ಇಂಗ್ಲೆಂಡ್!

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ, ಏಕದಿನ ಸರಣಿಯನ್ನು ಆಡುತ್ತಿದೆ. ಜನವರಿ 22ರಂದು ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ ನಡೆದ ಇತ್ತಂಡಗಳ ನಡುವಿನ ದ್ವಿತೀಯ ಏಕದಿನ ಪಂದ್ಯದ ವೇಳೆ ಸರ್ಫರಾಜ್ ಅವರು ಆಫ್ರಿಕಾ ಆಲ್‌ ರೌಂಡರ್ ಆಂಡಿಲೆ ಫೆಹ್ಲುಕ್ವೇವೊ ಅವರನ್ನು ಜನಾಂಗೀಯವಾಗಿ ಟೀಕಿಸಿದ್ದರು. ಇದು ವಿವಾದವನ್ನು ಸೃಷ್ಟಿಸಿತ್ತು.

'ನಾವು ಅವರನ್ನು ಕ್ಷಮಿಸಬಹುದು. ಯಾಕೆಂದರೆ ಅವರು ಕ್ಷಮೆಯಾಚಿಸಿದ್ದಾರೆ. ಆ ಹೇಳಿಕೆಗೆ ಪಶ್ಚಾತಾಪ ವ್ಯಕ್ತಪಡಿಸಿದ್ದಾರಲ್ಲದೆ, ಅವರ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ಈಗ ಆ ವಿಚಾರ ನಮ್ಮ ಕೈಯಲ್ಲಿಲ್ಲ. ಐಸಿಸಿ ಈ ಬಗ್ಗೆ ನಿರ್ಧಾರ ತಾಳಬೇಕಿದೆ' ಎಂದು ಕ್ರಿಕ್ ಇನ್ಫೋ ಜೊತೆ ಮಾತನಾಡುತ್ತ ಪ್ಲೆಸಿಸ್ ಹೇಳಿದ್ದಾರೆ.

ಅಮಾನತು ತೆರೆವು: ತಂಡ ಸೇರಿಕೊಳ್ಳಲಿದ್ದಾರೆ ಹಾರ್ದಿಕ್, ಕೆಎಲ್ ರಾಹುಲ್ಅಮಾನತು ತೆರೆವು: ತಂಡ ಸೇರಿಕೊಳ್ಳಲಿದ್ದಾರೆ ಹಾರ್ದಿಕ್, ಕೆಎಲ್ ರಾಹುಲ್

ಪಂದ್ಯದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಆಂಡಿಲೆ ಅವರನ್ನು ಗುರಿಯಾಗಿಸಿ ಸರ್ಫರಾಜ್ ಗೇಲಿ ಮಾಡಿದ್ದರು. 'ಹೇಯ್ ಬ್ಲ್ಯಾಕ್ (ಮ್ಯಾನ್), ನಿನ್ನ ತಾಯಿ ಎಲ್ಲಿ ಕುಳಿತುಕೊಂಡಿದ್ದಾರೆ? ಅವರು ನಿನಗೆ ಇವತ್ತು ಯಾವ ಪ್ರಾರ್ಥನೆ ಮಾಡುವುದನ್ನು ಬಯಸಿದ್ದೀಯ?' ಎಂದು ಟೀಕಿಸಿದ್ದು ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿತ್ತು.

Story first published: Friday, January 25, 2019, 13:53 [IST]
Other articles published on Jan 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X