ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಸಾಮರ್ಥ್ಯದ ಬಗ್ಗೆ ಮಾತನಾಡಿದ ಹಾರ್ದಿಕ್ ಪಾಂಡ್ಯ

We can pick two more teams and win any competition in the world says Hardik Pandya

ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಏಕದಿನ ಸರಣಿ ಇತ್ತೀಚೆಗಷ್ಟೇ ಮುಗಿದಿದೆ. ಈ ಸರಣಿಯಲ್ಲಿ ಶ್ರೀಲಂಕಾ ತಂಡ ಭಾರತ ಬಿ ತಂಡದ ಎದುರು ಸೋತು ಶರಣಾಗಿದೆ.

'ಮೂರ್ಖರಿಗೆ ತಲೆಕೆಡಿಸಿಕೊಳ್ಳಬೇಡಿ'; ಭಾರತದ ವಿರುದ್ಧ ಸರಣಿ ಸೋತ ನಂತರ ಕಿಡಿಕಾರಿದ ಶ್ರೀಲಂಕಾ ಕೋಚ್!'ಮೂರ್ಖರಿಗೆ ತಲೆಕೆಡಿಸಿಕೊಳ್ಳಬೇಡಿ'; ಭಾರತದ ವಿರುದ್ಧ ಸರಣಿ ಸೋತ ನಂತರ ಕಿಡಿಕಾರಿದ ಶ್ರೀಲಂಕಾ ಕೋಚ್!

ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಕಾರಣ ತಂಡದಿಂದ ಹೊರಗುಳಿದ ಕೆಲ ಆಟಗಾರರು ಮತ್ತು ಯುವ ಆಟಗಾರರನ್ನು ಒಳಗೊಂಡಂತೆ ಹೊಸ ತಂಡವನ್ನು ರಚಿಸಿ ಶ್ರೀಲಂಕಾ ಪ್ರವಾಸಕ್ಕೆ ಕಳುಹಿಸಲಾಯಿತು. ಹೀಗೆ ಭಾರತ ಬಿ ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಕಳುಹಿಸಿದ ಸಂದರ್ಭದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಭಾರತ ಬಿ ತಂಡ ಸೋಲಲಿದೆ, ಹಲವಾರು ಅನುಭವವುಳ್ಳ ಆಟಗಾರರು ಇಲ್ಲದೇ ಇರುವ ಕಾರಣ ಲಂಕಾ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ತೋರಲಿದೆ ಎಂಬ ಮಾತುಗಳು ಹರಿದಾಡಿದ್ದವು.

 ಅದ್ಭುತ ಕ್ಯಾಚ್‌ನೊಂದಿಗೆ ರಾಜಪಕ್ಸ ವಿಕೆಟ್‌ ಮುರಿದ ಕೆ ಗೌತಮ್: ವಿಡಿಯೋ ಅದ್ಭುತ ಕ್ಯಾಚ್‌ನೊಂದಿಗೆ ರಾಜಪಕ್ಸ ವಿಕೆಟ್‌ ಮುರಿದ ಕೆ ಗೌತಮ್: ವಿಡಿಯೋ

ಆದರೆ ಈ ಎಲ್ಲಾ ಅನುಮಾನಗಳಿಗೆ ಟೀಮ್ ಇಂಡಿಯಾ ಆಟಗಾರರು ತೆರೆ ಎಳೆದಿದ್ದು ಶ್ರೀಲಂಕಾವನ್ನು 2-1 ಅಂತರದಲ್ಲಿ ಸೋಲಿಸಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. ಇನ್ನು ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ 5 ಯುವ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಟೀಮ್ ಇಂಡಿಯಾದ ಆಟಗಾರ ಹಾರ್ದಿಕ್ ಪಾಂಡ್ಯ 'ಕೇವಲ 2 ತಂಡ ಮಾತ್ರವಲ್ಲ ಭಾರತದ 4 ತಂಡಗಳನ್ನು ರಚಿಸಿ ವಿಶ್ವದ ಯಾವುದೇ ಸರಣಿಯನ್ನು ಬೇಕಾದರೂ ಗೆಲ್ಲುವಷ್ಟು ಸಾಮರ್ಥ್ಯ ಭಾರತಕ್ಕಿದೆ' ಎಂದು ಹೇಳಿದರು.

Story first published: Sunday, July 25, 2021, 6:56 [IST]
Other articles published on Jul 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X