ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಗ್ಗೆ ಬಾಯ್ತೆರೆದ ವಿರಾಟ್ ಕೊಹ್ಲಿ

We deserve to win title’ - Virat Kohli opens on up on RCB’s run in IPL

ಬೆಂಗಳೂರು, ಏಪ್ರಿಲ್ 2: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಾನು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ನಾಯಕನಾಗಿ ಮುನ್ನಡೆಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬಗ್ಗೆ ತುಟಿ ಬಿಚ್ಚಿದ್ದಾರೆ. ಸುಮಾರು 13 ವರ್ಷಗಳಿಂದಲೂ ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ. ಅಂದರೆ ಐಪಿಎಲ್ ಆರಂಭವಾಗಿ ಇದುವರೆಗೂ ಆರ್‌ಸಿಬಿ ಪ್ರಶಸ್ತಿ ಗೆದ್ದಿದ್ದಿಲ್ಲ. ಆರ್‌ಸಿಬಿ ಗೆಲುವಿನ ಬಗ್ಗೆ ಸಂದರ್ಶನದಲ್ಲಿ ವಿರಾಟ್ ಮಾತನಾಡಿದ್ದಾರೆ.

ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಆಯ್ಕೆಯನ್ನೇ ವಿರೋಧಿಸಿದ್ದ ಧೋನಿಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಆಯ್ಕೆಯನ್ನೇ ವಿರೋಧಿಸಿದ್ದ ಧೋನಿ

ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಕೀಟರ್ಸನ್ ನಡೆಸಿದ ಇನ್‌ಸ್ಟಾಗ್ರಾಮ್ ಲೈವ್‌ ಸಂದರ್ಶನದಲ್ಲಿ ಮಾತನಾಡಿರುವ ವಿರಾಟ್ ಕೊಹ್ಲಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆರ್‌ಸಿಬಿ ಮುಂದೊಂದು ದಿನ ಗೆದ್ದೇ ಗೆಲ್ಲುತ್ತದೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಿಷಭ್ ಪಂತ್ ಫುಲ್ ರೋಸ್ಟ್ ಮಾಡಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!ರಿಷಭ್ ಪಂತ್ ಫುಲ್ ರೋಸ್ಟ್ ಮಾಡಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ವಿರಾಟ್ ಕೊಹ್ಲಿ ಹಂಚಿಕೊಂಡಿರುವ ಅಭಿಪ್ರಾಯಗಳು ಕೆಳಗಿವೆ.

ಮೂರು ಬಾರಿ ಫೈನಲ್‌ಗೆ ಪ್ರವೇಶಿಸಿತ್ತು

ಮೂರು ಬಾರಿ ಫೈನಲ್‌ಗೆ ಪ್ರವೇಶಿಸಿತ್ತು

ಆರ್‌ಸಿಬಿ ತಂಡ 2016, 2011 ಮತ್ತು 2009ರಲ್ಲಿ ಐಪಿಎಲ್ ಫೈನಲ್ ಪ್ರವೇಶಿತ್ತು. ಆದರೆ ಪ್ರಶಸ್ತಿ ಗೆಲ್ಲುವಲ್ಲಿ ಎಡವಿತ್ತು. ಆ ಮೂರೂ ವರ್ಷಗಳಲ್ಲಿ ಕ್ರಮವಾಗಿ ಸನ್ ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್, ಡೆಕನ್ ಚಾರ್ಜರ್ಸ್ ತಂಡಗಳು ಚಾಂಪಿಯನ್ ಪಟ್ಟ ಅಲಂಕರಿಸಿದ್ದವು. ಇದನ್ನೇ ಕೊಹ್ಲಿ ನೆನಪಿಸಿಕೊಂಡಿದ್ದಾರೆ.

ನಮಗೆ ಆಟವನ್ನು ಆನಂದಿಸಬೇಕಿದೆ

ನಮಗೆ ಆಟವನ್ನು ಆನಂದಿಸಬೇಕಿದೆ

'ನಾವು ಮೂರು ಬಾರಿ ಫೈನಲ್‌ಗೆ ಪ್ರವೇಶಿಸಿದ್ದೆವು. ಆದರೆ ನಾವು ಗೆಲ್ಲಲಿಲ್ಲ. ನಾವು ಪ್ರಶಸ್ತಿ ಗೆಲ್ಲಲು ಅರ್ಹರು. ಆರ್‌ಸಿಬಿಯಲ್ಲಿ ನಾವು ಸ್ಟಾರ್‌ ಆಟಗಾರರು ಇದರ ಬಗ್ಗೆ ಬಹಳಷ್ಟು ಸಾರಿ ಮಾತನಾಡಿದ್ದೇವೆ. ಗೆಲುವಿನ ಬಗ್ಗೆ ನಾವು ಹೆಚ್ಚು ಯೋಚಿಸಿದಷ್ಟು ಗೆಲುವು ನಮ್ಮಿಂದ ದೂರ ಹೋಗುತ್ತದೆ. ಒತ್ತಡ ನಮ್ಮ ಮೇಲೆ ಬೀಳುತ್ತದೆ. ಒತ್ತಡ ನಮಗೆ ಬೇಕಿಲ್ಲ. ನಮಗೆ ಆಟವನ್ನು ಆನಂದಿಸುವುದು ಬೇಕಿದೆ,' ಎಂದು ಕೊಹ್ಲಿ ಹೇಳಿದ್ದಾರೆ.

ದೊಡ್ಡ ಆಟಗಾರರು ತಂಡದಲ್ಲಿದ್ದರು

ದೊಡ್ಡ ಆಟಗಾರರು ತಂಡದಲ್ಲಿದ್ದರು

ಮಾತು ಮುಂದುವರೆಸಿದ ಕೊಹ್ಲಿ, ಆರ್‌ಸಿಬಿ ತಂಡದಲ್ಲಿದ್ದ ದೊಡ್ಡ ದೊಡ್ಡ ಆಟಗಾರರ ಬಗ್ಗೆ ಮಾತನಾಡಿದ್ದಾರೆ. 'ಹೌದು 2009-10ರಲ್ಲಿ ನಮ್ಮ ತಂಡ ಅದ್ಭುತವಾಗಿತ್ತು. ಆರಂಭಿದಿಂದಲೂ ತಂಡ ಉತ್ತಮಪ್ರದರ್ಶನ ನೀಡಿತ್ತು. (ಜಾಕ್) ಕ್ಯಾಲಿಸ್, (ಮಾರ್ಕ್) ಬೌಚರ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್‌ನಂತ ಶ್ರೇಷ್ಠ ಆಟಗಾರರು ಟೀಮ್‌ನಲ್ಲಿ ಇದ್ದರು,' ಎಂದರು ಕೊಹ್ಲಿ.

ಬೆಸ್ಟ್ ಬ್ಯಾಟಿಂಗ್ ಪಾರ್ಟ್ನರ್

ನಿಮ್ಮ ಜೊತೆ ಬೆಸ್ಟ್ ಬ್ಯಾಟಿಂಗ್ ಪಾರ್ಟ್ನರ್‌ ಯಾರಾದರೆ ಚೆನ್ನ ಎಂಬ ಕೆವಿನ್ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, 'ರನ್‌ಗಾಗಿ ವೇಗವಾಗಿ ಓಡುವ ಬ್ಯಾಟ್ಸ್‌ಮನ್‌ಗಳ ಜೊತೆ ಬ್ಯಾಟಿಂಗ್ ಖುಷಿ ಎನಿಸುತ್ತೆ. ಹಾಗಾಗಿ ಎಂಎಸ್ ಧೋನಿ ಮತ್ತು ಎಬಿ ಡಿವಿಲಿಯರ್ಸ್ ಜೊತೆ ಬ್ಯಾಟಿಂಗ್ ಪಾರ್ಟ್ನರ್ ಆಗೋಕೆ ಇಷ್ಟ,' ಎಂದು ಕೊಹ್ಲಿ ಹೇಳಿದ್ದಾರೆ.

Story first published: Thursday, April 2, 2020, 23:31 [IST]
Other articles published on Apr 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X