ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬೌಲರ್‌ಗಳನ್ನು ಗುರಿಯಾಗಿಸಿ ದಾಳಿ ಮಾಡಿದೆವು: ಮನೀಶ್ ಪಾಂಡೆ

We Had A Plan To Take On The Leggies And Indian Bowlers And It Paid Off: Manish Pandey

ದುಬೈ ಇಂಟರ್‌ನ್ಯಾಷ್‌ನಲ್‌ ಸ್ಟೇಡಿಯಂನಲ್ಲಿ ಭರ್ಜರಿ ಆಟವಾಡುವ ಮೂಲಕ ಎಲ್ಲರ ಗಮನ ಸೆಳೆದ ಮನೀಷ್ ಪಾಂಡೆ ಸನ್‌ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದರು.

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ನಿಗದಿತ 20 ಓವರ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು 154 ರನ್‌ಗಳನ್ನು ದಾಖಲಿಸಿತು. ಬಳಿಕ ಗುರಿ ಹಿಂಬಾಲಿಸಿದ ಸನ್‌ರೈಸರ್ಸ್ ಹೈದರಾಬಾದ್‌, ಮನೀಶ್‌ ಪಾಂಡೆ (83*) ಹಾಗೂ ವಿಜಯ್‌ ಶಂಕರ್‌(52*) ಅವರ ಅದ್ಭುತ ಬ್ಯಾಟಿಂಗ್‌ ನೆರವಿನಿಂದ ಇನ್ನೂ 11 ಎಸೆತಗಳು ಬಾಕಿ ಇರುವಾಗಲೇ ಎಂಟು ವಿಕೆಟ್‌ಗಳ ಗೆಲುವು ಸಾಧಿಸಿತು.

IPL 2020: 2018ರ ಬಳಿಕ ಮೊದಲ ಅರ್ಧಶತಕ ದಾಖಲಿಸಿದ ವಿಜಯ್ ಶಂಕರ್IPL 2020: 2018ರ ಬಳಿಕ ಮೊದಲ ಅರ್ಧಶತಕ ದಾಖಲಿಸಿದ ವಿಜಯ್ ಶಂಕರ್

ಪಂದ್ಯ ಮುಗಿದ ಬಳಿಕ ಮಾತನಾಡಿದ ಮನೀಶ್ ಪಾಂಡೆ '' ಜೊಫ್ರಾ ಆರ್ಚರ್ ಅವರ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸುವುದು ಅವರ ಯೋಜನೆಯಾಗಿತ್ತು. ಏಕೆಂದರೆ ಅವರ ನಾಲ್ಕು ಓವರ್‌ಗಳಲ್ಲಿ ಪಂದ್ಯದ ದಿಕ್ಕನ್ನು ಬದಲಾಯಿಸುವ ಸಾಮರ್ಥ್ಯ ಅವರಲ್ಲಿದೆ. ಈ ಹಿಂದೆ ಸಾಕಷ್ಟು ಬಾರಿ ನೋಡಿದ್ದೇವೆ. ಹಾಗಾಗಿ ಆ ಒಬ್ಬ ಬೌಲರ್‌ಗೆ ಎಚ್ಚರದಿಂದ ಆಡಿ, ಇನ್ನುಳಿದ ಬೌಲರ್‌ಗಳನ್ನು ಟಾರ್ಗೆಟ್ ಮಾಡುವುದು ನಮ್ಮ ಉದ್ದೇಶವಾಗಿತ್ತು'' ಎಂದು ಹೇಳಿದ್ದಾರೆ.

ಇದರ ಜೊತೆಗೆ ಜೋಫ್ರಾ ಆರ್ಚರ್‌ ಹೊರತುಪಡಿಸಿ, ಲೆಗ್‌ ಸ್ಪಿನ್ನರ್‌ಗಳು ಹಾಗೂ ಭಾರತೀಯ ಬೌಲರ್‌ಗಳ ಮೇಲೆ ದಾಳಿ ನಡೆಸಲು ನಾವು ಯೋಜನೆ ರೂಪಿಸಿದ್ದೆವು, ಅಂತೆಯೇ ಇದು ಸಾಧ್ಯವಾಯಿತು. ಆಡಿದ ಮೊದಲನೇ ಎಸೆತದಲ್ಲಿ ಕವರ್ಸ್‌ ಮೇಲೆ ಹೊಡೆದಾಗ, ನನ್ನಲ್ಲಿ ಆತ್ಮ ವಿಶ್ವಾಸ ಉಂಟಾಯಿತು. ಅದನ್ನೇ ಪಂದ್ಯವೀಡಿ ಮುಂದುವರಿಸಿಕೊಂಡು ಹೋದೆ ಎಂದು ಗೆಲುವಿನ ಇನ್ನಿಂಗ್ಸ್ ಆಡಿದ ಮನೀಶ್ ಹೇಳಿದ್ದಾರೆ.

47 ಎಸೆತಗಳಲ್ಲಿ ಅಜೇಯ 83 ರನ್ ದಾಖಲಿಸಿದ ಮನೀಶ್ ಪಾಂಡೆ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್‌ಗಳಿದ್ದವು.

Story first published: Friday, October 23, 2020, 10:11 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X