ಇಂಗ್ಲೆಂಡ್‌ನ ಚಾರ್ಲ್‌ ಡೀನ್ ವಿವಾದಾತ್ಮಕ ರನೌಟ್‌ ಬಗ್ಗೆ ದೀಪ್ತಿ ಶರ್ಮಾ ಸ್ಪಷ್ಟನೆ: ವಾರ್ನಿಂಗ್ ಕೊಟ್ರೂ ಮತ್ತದೇ ತಪ್ಪು!

ಇಂಗ್ಲೆಂಡ್‌ ಪ್ರವಾಸದಲ್ಲಿ ಭಾರತದ ವನಿತೆಯರು ಇತಿಹಾಸವನ್ನ ಸೃಷ್ಟಿಸಿ ತವರಿಗೆ ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಯಿಂದ ಗೆದ್ದ ಹರ್ಮನ್‌ಪ್ರೀತ್ ಕೌರ್ ಪಡೆ ಹಿಂದೆಂದೂ ಮಾಡಲಾಗದ ಸಾಧನೆ ಮಾಡಿದೆ. ಇದೇ ವೇಳೆಯಲ್ಲಿ ಲೆಜೆಂಡರಿ ಆಟಗಾರ್ತಿ ಜೂಲನ್ ಗೋಸ್ವಾಮಿಗೆ ಬೀಳ್ಕೊಡುಗೆ ನೀಡಲಾಗಿದೆ.

ಇಂಗ್ಲೆಂಡ್ ವನಿತೆಯರನ್ನ ಅವರದ್ದೇ ನೆಲದಲ್ಲಿ ವೈಟ್‌ವಾಶ್‌ ಮಾಡಿದ ಭಾರತದ ವನಿತೆಯರ ಸಾಧನೆಗೆ ಕ್ರಿಕೆಟ್ ಜಗತ್ತು ಬೇಷ್ ಎಂದಿದೆ. ಇದೇ ವೇಳೆಯಲ್ಲಿ ಅಂತಿಮ ಪಂದ್ಯದಲ್ಲಿ ಕೊನೆಯ ವಿಕೆಟ್ ಪಡೆದ ಬಗ್ಗೆ ಸಾಕಷ್ಟು ವಿವಾದಗಳಿವೆ. ಹಲವು ಕ್ರಿಕೆಟಿಗರು ದೀಪ್ತಿ ಶರ್ಮಾ ಅವರನ್ನು ಗುರಿಯಾಗಿಸಿಕೊಂಡು, ಎದುರಾಳಿ ಆಟಗಾರ್ತಿಯನ್ನು ಅವರು ಮಂಕಡಿಂಗ್ ಮೂಲಕ ವಜಾಗೊಳಿಸಿರುವುದು ಆಟದ ಸ್ಪೂರ್ತಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ. ಆದ್ರೆ ತವರಿಗೆ ಮರಳಿದ ಬೆನ್ನಲ್ಲೇ ದೀಪ್ತಿ ಶರ್ಮಾ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ವಾರ್ನಿಂಗ್ ಕೊಟ್ಟ ಬಳಿಕ ಔಟ್ ಮಾಡಿದೆವು!

ವಾರ್ನಿಂಗ್ ಕೊಟ್ಟ ಬಳಿಕ ಔಟ್ ಮಾಡಿದೆವು!

ಇಂಗ್ಲೆಂಡ್ ತಂಡವನ್ನು ಸೋಲಿಸಿ ಭಾರತ ಮಹಿಳಾ ತಂಡ ತವರಿಗೆ ಮರಳಿದ್ದು, ವಿಮಾನ ನಿಲ್ದಾಣದಲ್ಲಿ ಮಂಕಂಡಿಂಗ್ ಘಟನೆ ಕುರಿತು ದೀಪ್ತಿ ಶರ್ಮಾ ಅವರನ್ನು ಕೇಳಿದಾಗ, ನಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದರು.

ನಾವು ಯೋಜನೆ ರೂಪಿಸಿ ಬ್ಯಾಟ್ಸ್‌ಮನ್‌ನನ್ನು ಔಟ್ ಮಾಡಿದೆವು. ಈ ಹಿಂದೆ, ಬ್ಯಾಟ್ಸ್‌ಮನ್‌ಗಳು ಬೌಲಿಂಗ್ ಮಾಡುವ ಮೊದಲು ಕ್ರೀಸ್ ತೊರೆಯುತ್ತಿದ್ದಾರೆ ಎಂದು ನಾವು ಅಂಪೈರ್‌ಗೆ ಹಲವು ಬಾರಿ ಹೇಳಿದ್ದೆವು. ಎಚ್ಚರಿಕೆ ನೀಡಿದ ನಂತರವೂ ಆಕೆ ಒಪ್ಪದಿದ್ದಾಗ ಆಕೆಯನ್ನು ಔಟ್ ಮಾಡಿ ಪೆವಿಲಿಯನ್‌ಗೆ ಅಟ್ಟಿದೆವು ಎಂದು ದೀಪ್ತಿ ಶರ್ಮಾ ತನ್ನ ನಿರ್ಧಾರವನ್ನ ಸರಿಯೆಂದು ತಿಳಿಸಿದ್ರು.

Ind vs SA 1st T20: ಮೊಹಮ್ಮದ್ ಶಮಿ ಅಲಭ್ಯ? ಉಮ್ರಾನ್ ಮಲಿಕ್‌ಗೆ ಅವಕಾಶ!

ಚಾರ್ಲಿ ಡೀನ್‌ಗೆ ಮೊದಲೇ ಎಚ್ಚರಿಕೆ ನೀಡಿದ್ದರು!

ದೀಪ್ತಿ ಪ್ರಕಾರ, ಅವರು ಬ್ಯಾಟ್ಸ್‌ಮನ್ ಚಾರ್ಲಿ ಡೀನ್‌ ಚೆಂಡು ಎಸೆತಕ್ಕೆ ಮೊದಲೇ ಕ್ರೀಸ್‌ ಬಿಡುತ್ತಿದ್ದಾರೆ ಎಂದು ಅಂಪೈರ್‌ಗೆ ದೂರಿದ್ದರು. ಆಕೆ ಪದೇ ಪದೇ ಕ್ರೀಸ್‌ನಿಂದ ಹೊರಗೆ ಹೋಗುತ್ತಿದ್ದಾರೆ ಎಂದು ಅಂಪೈರ್‌ಗೆ ತಿಳಿಸಿದ್ದರು. ವಾಸ್ತವವಾಗಿ, ಡೀನ್ ಮತ್ತು ಫ್ರೇಯಾ ಡೇವಿಸ್ ಕೊನೆಯ ವಿಕೆಟ್‌ಗೆ 35 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಈ ಇಬ್ಬರೂ ಬ್ಯಾಟ್ಸ್ ಮನ್ ಗಳು ಇಂಗ್ಲೆಂಡ್ ತಂಡಕ್ಕೆ ಗೆಲುವು ತಂದುಕೊಡುವಂತಿತ್ತು. 44ನೇ ಓವರ್‌ನಲ್ಲಿ ದೀಪ್ತಿ ಶರ್ಮಾ ಮತ್ತೆ ಬಂದು ಚಾರ್ಲಿ ಡೀನ್ ಅವರನ್ನು ರನ್ ಔಟ್ ಮಾಡುವ ಮೂಲಕ ಪೆವಿಲಿಯನ್‌ಗೆ ಕಳುಹಿಸಿದರು.

Ind vs SA 1st T20: ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11, ಸವಾಲುಗಳು

ವೃತ್ತಿಜೀವನದ ಕೊನೆಯ ODI ಪಂದ್ಯವನ್ನಾಡಿದ ಜೂಲನ್ ಗೋಸ್ವಾಮಿ

ವೃತ್ತಿಜೀವನದ ಕೊನೆಯ ODI ಪಂದ್ಯವನ್ನಾಡಿದ ಜೂಲನ್ ಗೋಸ್ವಾಮಿ

ಭಾರತ ಮತ್ತು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಡುವಿನ ಮೂರನೇ ಏಕದಿನ ಪಂದ್ಯವು ಭಾರತದ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರಿಗೆ ಕೊನೆಯ ಏಕದಿನ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ ಕೇವಲ 30 ರನ್ ನೀಡಿ ಎರಡು ವಿಕೆಟ್ ಪಡೆದರು.

ಜೂಲನ್ ಗೋಸ್ವಾಮಿಗೆ ಅಂತಿಮ ಪಂದ್ಯಕ್ಕೆ ಸಂಬಂಧಿಸಿದಂತೆ ದೀಪ್ತಿ ಶರ್ಮಾ, ನಾವು ಜೂಲನ್ ದೀದಿಗೆ ಗೆಲುವಿನೊಂದಿಗೆ ವಿದಾಯ ಹೇಳಲು ಬಯಸಿದ್ದೇವೆ ಎಂದು ಹೇಳಿದ್ದಾರೆ. ನಾವು ಈ ಗೆಲುವಿನೊಂದಿಗೆ ತುಂಬಾ ಸಂತೋಷವಾಗಿದ್ದೇವೆ ಎಂದು ತಿಳಿಸಿದ್ರು. ಜೂಲನ್ ಗೋಸ್ವಾಮಿ ದೀದಿ ಅವರಿಂದ ಕಲಿಯಲು ಬಹಳಷ್ಟು ಇದೆ, ಅವರು ಹೇಳಿಕೊಟ್ಟಿದ್ದನ್ನ ನಾವೆಲ್ಲರೂ ಮೈದಾನದಲ್ಲಿ ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ. ಜೂಲನ್ ಗೋಸ್ವಾಮಿಗೆ ಸ್ಮರಣೀಯ ಬೀಳ್ಕೊಡುಗೆ ಸಿಕ್ಕಿದೆ.

For Quick Alerts
ALLOW NOTIFICATIONS
For Daily Alerts
Story first published: Monday, September 26, 2022, 19:06 [IST]
Other articles published on Sep 26, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X