ಯುಎಇನಲ್ಲಿ ಐಪಿಎಲ್ ಆಯೋಜಿಸಲು ಸರ್ಕಾರದಿಂದ ಅಧಿಕೃತ ಒಪ್ಪಿಗೆ ಪಡೆದ ಬಿಸಿಸಿಐ

ಈ ಬಾರಿಯ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲು ಕೇಂದ್ರ ಸರ್ಕಾರ ಮೌಖಿಕ ಅನುಮತಿಯನ್ನು ನೀಡಿದ ಬಳಿಕ ಟೂರ್ನಿ ಆಯೋಜನೆಗೆ ಸಿದ್ಧತೆಗಳು ನಡೆದಿವೆ. ಇಂದು ಈ ಬಗ್ಗೆ ಬಿಸಿಸಿಐ ಸರ್ಕಾರದಿಂದ ಅಧಿಕೃತ ಆದೇಶವನ್ನು ಕೂಡ ಪಡೆದುಕೊಂಡಿದೆ. ಈ ಮೂಲಕ ಟೂರ್ನಿ ಆಯೋಜನೆಗೆ ಸಿದ್ಧತೆ ಮತ್ತಷ್ಟು ಚುರುಕು ಪಡೆದುಕೊಂಡಿದೆ.

ಸರ್ಕಾರದಿಂದ ಅಧಿಕೃತ ಆದೇಶ ಪ್ರತಿ ಬಂದಿರುವುದನ್ನು ಐಪಿಎಲ್‌ನ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಬಹಿರಂಗಪಡಿಸಿದ್ದಾರೆ. ನಾವು ಇಂದು ಕೇಂದ್ರ ಸರ್ಕಾರದಿಂದ ಅಧಿಕೃತ ಆದೇಶವನ್ನು ಪಡೆದುಕೊಂಡಿದ್ದೇವೆ. ಈ ಮೂಲಕ ಸರ್ಕಾರ ತಾತ್ವಿಕ ಒಪ್ಪಿಗೆಯನ್ನು ನೀಡಿದೆ ಎಂದು ಐಪಿಎಲ್ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಐಪಿಎಲ್ ಟೈಟಲ್ ಪ್ರಾಯೋಜಕತ್ವದ ಬಿಡ್ಡಿಂಗ್‌ಗೆ 'ಪತಂಜಲಿ' ಆಸಕ್ತಿ

ಐಪಿಎಲ್ ವಿದೇಶದಲ್ಲಿ ಆಯೋಜನೆಯಾಗುತ್ತಿರುವ ಕಾರಣ ಅದಕ್ಕಾಗಿ ಕೇಂದ್ರ ಗೃಹಸಚಿವಾಲಯ ಹಾಗೂ ವಿದೇಶಾಂಗ ಇಲಾಖೆಯಿಂದ ಒಪ್ಪಿಗೆಯನ್ನು ಪಡೆಯಬೇಕಾಗಿತ್ತು. ಎರಡೂ ಇಲಾಖೆಯ ಇಲಾಕೆಯ ಒಪ್ಪಿಗೆ ಪತ್ರ ಆಯೋಜಕರಿಗೆ ಲಭ್ಯವಾಗಿರುವ ಮಾಹಿತಿಯನ್ನು ಬ್ರಿಜೇಶ್ ಪಟೇಲ್ ಪಿಟಿಐ ಜೊತೆಗೆ ಮಾತನಾಡುತ್ತಾ ತಿಳಿಸಿದ್ದಾರೆ.

ಈ ಹಿಂದೆ ನಾವು ವಿದೇಶದಲ್ಲಿ ಟೂರ್ನಿಯನ್ನು ಆಯೋಜನೆ ಮಾಡಲು ಮೌಖಿಕ ಒಪ್ಪಿಗೆಯನ್ನು ಪಡೆದುಕೊಂಡಿದ್ದೆವು. ಅದನ್ನು ನಾವು ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ ಜೊತೆಗೆ ಹಂಚಿಕೊಂಡಿದ್ದೆವು. ಆದರೆ ಇಂದು ಅದರ ಒಪ್ಪಿಗೆ ಪತ್ರವನ್ನು ಲಿಖಿತ ರೂಪದಲ್ಲಿ ಪಡೆದುಕೊಂಡಿದ್ದೇವೆ. ಹೀಗಾಗಿ ಈಗಾಗಲೇ ನಿಗದಿ ಪಡಿಸಿರುವಂತೆ ಎಲ್ಲವೂ ಮುಂದುವರಿಯಲಿದೆ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

2021ರ ಐಪಿಎಲ್ ಆಟಗಾರರ ಹರಾಜು ಮುಂದೂಡಲು ಸಿದ್ಧತೆ: ವರದಿ

ಆಗಸ್ಟ್‌ 20ರ ನಂತರವೇ ಹೆಚ್ಚಿನ ಎಲ್ಲಾ ಐಪಿಎಲ್ ತಂಡಗಳು ಕೂಡ ಯುಎಇಗೆ ಪ್ರಯಾಣ ಬೆಳೆಸಲಿದೆ. ಪ್ರವಾಸ ತೆರಳುವುದಕ್ಕೂ 24 ಗಂಟೆಗಳ ಅಂತರದಲ್ಲಿ ಪ್ರತಿಯೊಬ್ಬರು ಕೂಡ ಎರಡು ಕೊವೀಡ್19 ಪರೀಕ್ಷೆಯನ್ನು ನಡೆಸಿ ನೆಗೆಟಿವ್ ವರದಿಯನ್ನು ಹೊಂದಿರಬೇಕಾಗುತ್ತದೆ. ಬಳಿಕ ವಿಮಾನ ಏರಲು ಅನುಮತಿ ದೊರೆಯಲಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, August 10, 2020, 19:21 [IST]
Other articles published on Aug 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X