ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೇಗದ ಬೌಲಿಂಗ್ ಎದುರಿಸಲು ಸಮರ್ಥವಾಗಿದ್ದು ಕನ್ನಡಿಗನಿಂದ: ಕೊಹ್ಲಿ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿ

We Have Improved Against Fast Bowling Due To Raghu, Says Virat Kohli

ಭಾರತೀಯ ಬ್ಯಾಟ್ಸ್‌ಮನ್‌ಗಳು ವೇಗದ ಪಿಚ್‌ನಲ್ಲಿ ಆಡಲು ತಿಣುಕಾಡುತ್ತಾರೆ ಎಂಬುದು ಸಾಕಷ್ಟು ವರ್ಷಗಳಿಂದ ಕೇಳಿ ಬರುತ್ತಿರುವ ಆಪಾದನೆ. ಆದರೆ ಈಗ ಆಸ್ಟ್ರೇಲಿಯಾದ ವೇಗಿಗಳಿಗೆ ಪೂರಕವಾದ ಪಿಚ್‌ನಲ್ಲೂ ಭಾರತೀಯ ಬ್ಯಾಟ್ಸ್‌ಮನ್‌ಗಳು ಸೈ ಎನಿಸಿಕೊಂಡಿದ್ದರು.

ಭಾರತೀಯ ಬ್ಯಾಟ್ಸ್‌ಮನ್‌ಗಳು ವೇಗಿಗಳನ್ನು ಸಮರ್ಥವಾಗಿ ಎದುರಿಸಲು ಕಾರಣ ಏನು ಎನೆಂಬುದನ್ನು ಟೀಮ್ ಇಂಡಿಯಾ ನಾಯಕ ಬಿಚ್ಚಿಟ್ಟಿದ್ದಾರೆ. ಬ್ಯಾಟಿಂಗ್‌ನಲ್ಲಿ ಈ ಅತಿ ಅಮೂಲ್ಯ ಬದಲಾವಣೆಗೆ ಕಾರಣ ಯಾರು ಎಂಬುದನ್ನು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣರಾದ ವ್ಯಕ್ತಿಯೋರ್ವನನ್ನು ವಿರಾಟ್ ಹೆಸರಿಸಿದ್ದಾರೆ.

ವಿರಾಟ್ ಕೊಹ್ಲಿ ಜೊತೆಗೆ ಹೋಲಿಸಿದ್ದಕ್ಕೆ ಪ್ರತಿಕ್ರಿಯಿಸಿದ ಬಾಬರ್ ಅಝಾಮ್ವಿರಾಟ್ ಕೊಹ್ಲಿ ಜೊತೆಗೆ ಹೋಲಿಸಿದ್ದಕ್ಕೆ ಪ್ರತಿಕ್ರಿಯಿಸಿದ ಬಾಬರ್ ಅಝಾಮ್

ಹೆಮ್ಮೆಯ ಸಂಗತಿಯೇನೆಂದರೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆ ಹೆಸರು ಕನ್ನಡಿಗನದ್ದು. ಕರ್ನಾಟಕ ಮೂಲದ ಆ ವ್ಯಕ್ತಿ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳ ಈ ಬದಲಾವಣೆಗೆ ಕಾರಣ ಎಂದು ಸ್ವತಃ ಕೊಹ್ಲಿ ಬಹಿರಂಗ ಪಡಿಸಿದ್ದಾರೆ.

ಥ್ರೋಡೌನ್ ಸ್ಪೆಶಲಿಸ್ಟ್ ಕಾರಣ ಎಂದ ಕೊಹ್ಲಿ

ಥ್ರೋಡೌನ್ ಸ್ಪೆಶಲಿಸ್ಟ್ ಕಾರಣ ಎಂದ ಕೊಹ್ಲಿ

ಬ್ಯಾಟಿಂಗ್ ಅಭ್ಯಾಸದ ವೇಳೆ ವೇಗದ ಬೌಲಿಂಗ್ ಎದುರಿಸಲು ಸಹಾಯಕವಾಗುವಂತೆ ತಂಡಗಳು ಥ್ರೋಡೌನ್ ಸ್ಪೆಶಲಸ್ಟ್‌ಗಳನ್ನು ಹೊಂದಿರುತ್ತದೆ. ಇದೇ ಭಾರತ ತಂಡಕ್ಕೆ ಸಹಕಾರಿಯಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ. ಅದರಲ್ಲೂ ಭಾರತ ತಂಡದ ಥ್ರೋ ಡೌನ್ ಸ್ಪೆಶಲಿಸ್ಟ್ ಸಾಮರ್ಥ್ಯವನ್ನು ಕೊಹ್ಲಿ ಮನಸಾರೆ ಹೊಗಳಿದ್ದಾರೆ.

ರಘು ಥ್ರೋಡೌನ್ ಬೌಲಿಂಗ್ ಕಾರಣ

ರಘು ಥ್ರೋಡೌನ್ ಬೌಲಿಂಗ್ ಕಾರಣ

ಟೀಮ್ ಇಂಡಿಯಾದ ಬ್ಯಾಟಿಂಗ್ ವೇಗದ ಬೌಲಿಂಗ್ ಎದುರು ಸುಧಾರಿಸಲು ರಘು ಅವರ ಥ್ರೋಡೌನ್ ಬೌಲಿಂಗ್ ಕಾರಣ ಎಂದು ಕೊಹ್ಲಿ ಹೇಳಿದ್ದಾರೆ. 2013ರ ಬಳಿಕ ಟೀಮ್ ಇಂಡಿಯಾ ಆಟಗಾರರು ವೇಗದ ಬೌಲಿಂಗ್ ಎದುರಿಸುವುದರಲ್ಲಿ ಸುಧಾರಿಸಿದ್ದರೆ ಅದಕ್ಕೆ ಕಾರಣ ರಘು ಅವರ ಪರಿಶ್ರಮ ಎಂದು ಕೊಹ್ಲಿ ಕನ್ನಡಿಗನನ್ನು ನೆನಪಿಸಿಕೊಂಡಿದ್ದಾರೆ.

150-155 ಕಿ.ಮೀ ವೇಗದಲ್ಲಿ ಬೌಲಿಂಗ್

150-155 ಕಿ.ಮೀ ವೇಗದಲ್ಲಿ ಬೌಲಿಂಗ್

ಥ್ರೋ ಡೌನ್ ಬೌಲಿಂಗ್ ವೇಳೆ ರಘು 150-155 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ರಘು ಅವರ ಅಪರೂಪದ ಪ್ರತಿಭೆಯ ನೆರವಿನಿಂದ ಟೀಮ್ ಇಂಡಿಯಾ ಆಟಗಾರರು ವೃಗಿಗಳ ಎದುರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಟೀಮ್ ಇಂಡಿಯಾಗೆ ರಘು ಕೊಡುಗೆ ಅಪಾರ ಎಂದು ವಿರಾಟ್ ಕೊಹ್ಲಿ ಬಾಂಗ್ಲಾದೇಶದ ಕ್ರಿಕೆಟಿಗ ತಮೀಮ್ ಇಕ್ಬಾಲ್ ಜೊತೆಗೆ ಫೇಸ್‌ಬುಕ್ ಸಂವಾದದ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಸೈಡ್‌ ಆರ್ಮ್ ಬೌಲಿಂಗ್‌ನಲ್ಲಿ ಎಕ್ಸ್‌ಪರ್ಟ್

ಸೈಡ್‌ ಆರ್ಮ್ ಬೌಲಿಂಗ್‌ನಲ್ಲಿ ಎಕ್ಸ್‌ಪರ್ಟ್

ರಘು ಸೈಡ್ ಆರ್ಮ್ ಬೌಲಿಂಗ್‌ನಲ್ಲಿ ಎಕ್ಸ್‌ಪರ್ಟ್ ಎನಿಸಿದ್ದಾರೆ. ಬ್ಯಾಟ್ಸ್‌ಮನ್‌ಗಳ ಕಾಲಿನ ಚಲನೆಯನ್ನು ಗಮನಿಸಿಕೊಂಡು ಬೌಲಿಂಗ್ ಮಾಡುತ್ತಾರೆ. ಇದು ಆಟಗಾರರಿಗೆ ನೈಜ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡುವಾಗ ಸಾಕಷ್ಟು ಸಹಕಾರಿಯಾಗುತ್ತದೆ ಎಂದು ಕೊಹ್ಲಿ ಈ ಸಂವಾದದಲ್ಲಿ ಹೇಳಿದ್ದಾರೆ

Story first published: Tuesday, May 19, 2020, 19:15 [IST]
Other articles published on May 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X