ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಮಗೆ ಇಯಾನ್ ಮಾರ್ಗನ್‌ರಿಂದ ಹೆಚ್ಚು ರನ್‌ಗಳು ಬೇಕಿವೆ: ಬ್ರೆಂಡನ್ ಮೆಕಲಮ್

We need more runs from Eoin Morgan: KKR coach Brendon McCullum

ದುಬೈ: ಪಂಜಾಬ್ ಕಿಂಗ್ಸ್‌ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಅನುಭವಿಸಿದ 5 ವಿಕೆಟ್‌ ಸೋಲಿನ ಬಳಿಕ ಕೆಕೆಆರ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಮಾತನಾಡಿದ್ದಾರೆ. ಪಂಜಾಬ್‌ ಆ ಗೆಲುವಿಗೆ ಅರ್ಹ ರೀತಿಯ ಪ್ರದರ್ಶನ ನೀಡಿತ್ತು ಎಂದು ಮೆಕಲಮ್ ಹೇಳಿದ್ದಾರೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಸೋತ ಕೆಕೆಆರ್ ಪ್ಲೇ ಆಫ್ಸ್ ಅವಕಾಶವನ್ನು ಕಠಿಣವಾಗಿಸಿಕೊಂಡಿದೆ.

ಆರ್‌ಸಿಬಿ, ಕೆಕೆಆರ್, ಪಂಜಾಬ್ ಪ್ಲೇ ಆಫ್ಸ್‌ ಅವಕಾಶ ಹೇಗಿದೆ? ಇಲ್ಲಿದೆ ವಿವರಣೆ!ಆರ್‌ಸಿಬಿ, ಕೆಕೆಆರ್, ಪಂಜಾಬ್ ಪ್ಲೇ ಆಫ್ಸ್‌ ಅವಕಾಶ ಹೇಗಿದೆ? ಇಲ್ಲಿದೆ ವಿವರಣೆ!

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್‌ 1) ನಡೆದ ಐಪಿಎಲ್ 45ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 5 ವಿಕೆಟ್‌ ಜಯ ಗಳಿಸಿತ್ತು. ನಾಯಕ ಕೆಎಲ್ ರಾಹುಲ್ 67 ರನ್ ಮತ್ತು ಮಯಾಂಕ್ ಅಗರ್ವಾಲ್ 40 ರನ್ ಕೊಡುಗೆ ಮತ್ತು ಅರ್ಷ್‌ದೀಪ್ ಸಿಂಗ್ ಬೌಲಿಂಗ್ ಬಲದಿಂದ ಪಂಜಾಬ್ ಪ್ಲೇ ಆಫ್ಸ್ ಆಸೆ ಜೀವಂತವಾಗಿರಿಸಿಕೊಂಡಿದೆ.

ಪ್ರಮುಖ ಸಂದರ್ಭಗಳನ್ನು ಪಂಜಾಬ್ ಗೆದ್ದಿತು
ಪಂಜಾಬ್ ಕಿಂಗ್ಸ್‌ ವಿರುದ್ಧದ ಸೋಲಿನ ಬಳಿಕ ಬ್ರೆಂಡನ್ ಮೆಕಲಮ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. "ಈ ರಾತ್ರಿ (ಅಕ್ಟೋಬರ್ 1) ನಾವು ಕ್ರಿಕೆಟ್‌ನ ಒಂದೊಳ್ಳೆ ಆಟ ನೀಡಿದ್ದೇವೆ ಎಂದು ನನಗನ್ನಿಸುತ್ತದೆ. ಆದರೆ ಪಂಜಾಬ್ ಆಟದ ಪ್ರಮುಖ ಸಂದರ್ಭಗಳಲ್ಲಿ ಮೇಲುಗೈ ಸಾಧಿಸಿತು. ಆದರೆ ನಾವೂ ಕೂಡ ಅಷ್ಟೇ ಒಳ್ಳೆಯ ಆಟ ನೀಡಿದ್ದೇವೆ. ಇಯಾನ್ ಮಾರ್ಗನ್ ನಮ್ಮ ತಂಡದಲ್ಲಿ ಅನುಭವಿ ಆಟಗಾರ. ಅವರೊಬ್ಬರು ಅಂತಾರಾಷ್ಟ್ರೀಯ ಬ್ಯಾಟ್ಸ್‌ಮನ್‌. ನಾಯಕತ್ವದ ಜವಾಬ್ದಾರಿಯೂ ಅವರ ಮೇಲಿದೆ. ಅವರೂ ತಂಡಕ್ಕೆ ರನ್ ಕೊಡುಗೆ ನೀಡಲು ಬಯಸುತ್ತಿದ್ದಾರೆ. ರನ್‌ ವಿಚಾರದಲ್ಲಿ ಮಾರ್ಗನ್ ಕೊಂಚ ವಿಫಲರಾಗಿದ್ದಾರೆ. ಆದರೆ ನಾಯಕತ್ವದ ವಿಚಾರದಲ್ಲಿ ಅವರು ಬಹಳ ತಂತ್ರಗಾರಿಕೆ ಹೊಂದಿದ್ದಾರೆ. ನಾವೂ ಕೂಡ ಮಾರ್ಗನ್ ಅವರಿಂದ ಹೆಚ್ಚು ರನ್ ಬಯಸುತ್ತಿದ್ದೇವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ," ಎಂದು ಮೆಕಲಮ್ ವಿವರಿಸಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್, ಮೀಮ್ಸ್ ತಮಾಷೆ ನೋಡಿ!ಕೋಲ್ಕತ್ತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್, ಮೀಮ್ಸ್ ತಮಾಷೆ ನೋಡಿ!

ಇಯಾನ್ ಮಾರ್ಗನ್ ಕಳಪೆ ಬ್ಯಾಟಿಂಗ್‌
ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಈ ಮೊದಲು ದಿನೇಶ್ ಕಾರ್ತಿಕ್ ನಾಯರಾಗಿದ್ದರು. ಡಿಕೆ ನಾಯಕರಾಗಿದ್ದಾಗ ಕೆಕೆಆರ್ ಪರ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿದ್ದರು. ಈ ಕಾರಣಕ್ಕಾಗಿ ಡಿಕೆ ತಾನೇ ನಾಯಕತ್ವವನ್ನು ಇಯಾನ್ ಮಾರ್ಗನ್‌ಗೆ ಬಿಟ್ಟುಕೊಟ್ಟು ಬ್ಯಾಟಿಂಗ್‌ ಕಡೆಗೆ ಗಮನ ಹರಿಸಿದ್ದರು. ಈಗ ದಿನೇಶ್ ಸ್ವಲ್ಪ ಬ್ಯಾಟಿಂಗ್‌ ವಿಚಾರದಲ್ಲಿ ಚೇತರಿಕೆ ಕಂಡಿದ್ದಾರೆ. ಆದರೆ ಮಾರ್ಗನ್ ಬ್ಯಾಟಿಂಗ್‌ ವಿಚಾರದಲ್ಲಿ ಕಳೆಗುಂದಿದ್ದಾರೆ. ಐಪಿಎಲ್ ಈ ಸೀಸನ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿ ಗಮನಿಸಿದರೆ ಅದರಲ್ಲಿ ಟಾಪ್ 15ರೊಳಗೂ ಮಾರ್ಗನ್ ಕಾಣಿಸಿಕೊಂಡಿಲ್ಲ. ಹೆಚ್ಚಿನ ಪಂದ್ಯಗಳಲ್ಲಿ ಮಾರ್ಗನ್ ಬೆರಳೆಣಿಕೆಯ ರನ್ ಗಳಿಸಿದ್ದಾರೆ. ಮುಂದಿನ ಎರಡು ಪಂದ್ಯಗಳಲ್ಲಾದರೂ ಮಾರ್ಗನ್ ಉತ್ತಮ ಬ್ಯಾಟಿಂಗ್‌ ನೀಡಬೇಕಿದೆ.

PBKS vs KKR ಪಂದ್ಯದ ಬಳಿಕ ಆರೆಂಜ್, ಪರ್ಪಲ್ ಕ್ಯಾಪ್ ಮತ್ತು ಅಂಕಪಟ್ಟಿಯಲ್ಲಾದ ಬದಲಾವಣೆ ಹೀಗಿದೆPBKS vs KKR ಪಂದ್ಯದ ಬಳಿಕ ಆರೆಂಜ್, ಪರ್ಪಲ್ ಕ್ಯಾಪ್ ಮತ್ತು ಅಂಕಪಟ್ಟಿಯಲ್ಲಾದ ಬದಲಾವಣೆ ಹೀಗಿದೆ

ಪಂಜಾಬ್ vs ಕೋಲ್ಕತ್ತಾ ಪಂದ್ಯದ ಸ್ಕೋರ್‌
ಟಾಸ್ ಸೋತು ಬೌಲಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್ ವೆಂಕಟೇಶ್ ಐಯ್ಯರ್ 67, ಶುಬ್ಮನ್ ಗಿಲ್ 7, ರಾಹುಲ್ ತ್ರಿಪಾಠಿ 34, ನಿರೀಶ್ ರಾಣಾ 31, ಇಯಾನ್ ಮಾರ್ಗನ್ 2, ದಿನೇಶ್ ಕಾರ್ತಿಕ್ 11, ಟಿಮ್ ಸೀಫರ್ಟ್ 2, ಸುನಿಲ್ ನರೈನ್ 3 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್‌ ಕಳೆದು 165 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, ಕೆಎಲ್ ರಾಹುಲ್ 67 (55 ಎಸೆತ), ಮಯಾಂಕ್ ಅಗರ್ವಾಲ್ 40, ನಿಕೋಲಸ್ ಪೂರನ್ 12, ಐಡನ್ ಮಾರ್ಕ್ರಮ್ 18, ದೀಪಕ್ ಹೂಡ 3, ಶಾರುಖ್ ಖಾನ್ ಅಜೇಯ 22 ರನ್‌ನೊಂದಿಗೆ 19.3 ಓವರ್‌ಗೆ 3 ವಿಕೆಟ್ ಕಳೆದು 168 ರನ್ ಗಳಿಸಿತು. ಪಂಜಾಬ್ ತಂಡ ಕೆಕೆಆರ್ ಎದುರು ಗೆಲ್ಲುತ್ತಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇ ಆಫ್ಸ್‌ಗೆ ಪ್ರವೇಶಿಸಿದೆ. ಈ ಸೀಸನ್‌ನಲ್ಲಿ ಪ್ಲೇ ಆಫ್ಸ್‌ಗೆ ಪ್ರವೇಶಿಸಿದ ಎರಡನೇ ತಂಡವಾಗಿ ಡೆಲ್ಲಿ ಗುರುತಿಸಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ಸ್‌ಗೆ ಮೊದಲು ಪ್ರವೇಶಿಸಿತ್ತು.

Story first published: Saturday, October 2, 2021, 13:47 [IST]
Other articles published on Oct 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X