ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರಮುಖ ಸಂದರ್ಭಗಳಲ್ಲಿ ನಾವು ಗೆಲ್ಲೋದು ಅಗತ್ಯವಿದೆ: ಕ್ರಿಸ್ ಮೋರಿಸ್

We need to win big moments in the game: RRs Chris Morris

ದುಬೈ: ಪಂದ್ಯದ ಪ್ರಮುಖ ಸಂದರ್ಭಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗೆಲ್ಲಬೇಕಿದೆ ಎಂದು ರಾಜಸ್ಥಾನ್ ರಾಯಲ್ಸ್‌ನ ಪ್ರಮುಖ ಆಲ್ ರೌಂಡರ್ ಕ್ರಿಸ್ ಮೋರಿಸ್ ಹೇಳಿದ್ದಾರೆ. ಸೋಮವಾರ (ಸೆಪ್ಟೆಂಬರ್ 27) ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 40ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ಸೋತ ಬಳಿಕ ಮೋರಿಸ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಪಿಎಲ್: ಮುಂಬೈ vs ಪಂಜಾಬ್, ದಾಖಲೆಗಳು, ಕುತೂಹಲಕಾರಿ ಅಂಕಿ-ಅಂಶಗಳುಐಪಿಎಲ್: ಮುಂಬೈ vs ಪಂಜಾಬ್, ದಾಖಲೆಗಳು, ಕುತೂಹಲಕಾರಿ ಅಂಕಿ-ಅಂಶಗಳು

ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಹೈದರಾಬಾದ್ ತಂಡ 7 ವಿಕೆಟ್ ಗೆಲುವನ್ನಾಚರಿಸಿತ್ತು. ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ಬದಲು ಇಂಗ್ಲೆಂಡ್‌ನ ಜೇಸನ್ ರಾಯ್ ಆಡಿದ್ದರು. ಅರ್ಧ ಶತಕದ ಕೊಡುಗೆಯೂ ನೀಡಿದ್ದರು.

"ನೋಡಿ, ಈ ಸಂದರ್ಭದಲ್ಲಿ ನಾವು ಪಂದ್ಯದ ಕೆಲವೊಂದು ಪ್ರಮುಖ ದೊಡ್ಡ ಸಂದರ್ಭಗಳನ್ನು ಗೆಲ್ಲುವಂಥ ಪ್ರದರ್ಶನ ನೀಡುತ್ತಿಲ್ಲ. ಅದು ಬ್ಯಾಟಿಂಗ್‌ ಮಾಡುತ್ತಿರಲಿ, ಇಲ್ಲ ಬೌಲಿಂಗ್ ಮಾಡುತ್ತಿರಲಿ, ಒಂದು ದೊಡ್ಡ ಕ್ಷಣ ಎದುರಾದಾಗ ನಾವದನ್ನು ಗೆಲ್ಲುತ್ತೇವೆ ಎಂದು ನನಗೆ ಅನ್ನಿಸುತ್ತಿಲ್ಲ," ಎಂದು ಪಂದ್ಯದ ಬಳಿಕ ಮಾತನಾಡಿದ ಮೋರಿಸ್ ಹೇಳಿದ್ದಾರೆ.

ಇನ್ಜಮಾಮ್ ಉಲ್ ಹಕ್‌ಗೆ ಲಘು ಹೃದಯಾಘಾತ, ಆಸ್ಪತ್ರೆಯಲ್ಲಿ ಚೇತರಿಕೆಇನ್ಜಮಾಮ್ ಉಲ್ ಹಕ್‌ಗೆ ಲಘು ಹೃದಯಾಘಾತ, ಆಸ್ಪತ್ರೆಯಲ್ಲಿ ಚೇತರಿಕೆ

'ಮೊದಲ ಪಂದ್ಯದಲ್ಲಿ ಪಂದ್ಯ ತಿರುವು ಪಡೆದುಕೊಳ್ಳಲು ದೊಡ್ಡ ಸಂದರ್ಭ ಎದುರಾಗಿತ್ತು. ನಾವು ಆ ಪಂದ್ಯವನ್ನು ಕೊನೇ ಓವರ್‌ನಲ್ಲಿ ಗೆದ್ದೆವು. ಅದನ್ನು ಹೊರತುಪಡಿಸಿ ಬೇರೆ ಯಾವ ಪಂದ್ಯದಲ್ಲೂ ನಾವು ಅಂಥ ಸಂದರ್ಭದಲ್ಲಿ ಪಂದ್ಯ ಗೆದ್ದಿಲ್ಲ. ಹಾಗಂತ ನಮ್ಮ ಬೆಸ್ಟ್ ಆಟ ನಾವು ಆಡಿದ್ದೇವೆ. ಕಳೆದ ಪಂದ್ಯದಲ್ಲಿ ನಾವು ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿದೆವು," ಎಂದು ಕ್ರಿಸ್ ವಿವರಿಸಿದ್ದಾರೆ.

ಎಸ್‌ಆರ್‌ಎಚ್ ತಂಡ ಈ ಸೀಸನ್‌ನಲ್ಲಿ ಅತೀ ಕೆಟ್ಟ ಪ್ರದರ್ಶನ ನೀಡಿತ್ತು. ಒಟ್ಟು 10 ಪಂದ್ಯಗಳನ್ನಾಡಿದ್ದ ಎಸ್‌ಆರ್‌ಎಚ್ ಸೋಮವಾರದ ಪಂದ್ಯವೂ ಸೇರಿ ಕೇವಲ 2 ಪಂದ್ಯಗಳನ್ನು ಗೆದ್ದಿದೆ. ರಾಜಸ್ಥಾನ್ ರಾಯಲ್ಸ್ ತಂಡ 10ರಲ್ಲಿ 4 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

Story first published: Tuesday, September 28, 2021, 16:28 [IST]
Other articles published on Sep 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X