ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾವು ಆಡೋದು ಗೆಲ್ಲಲು, ಆಟವನ್ನು 5 ದಿನಗಳ ಕಾಲ ತೆಗೆದುಕೊಂಡು ಹೋಗಲು ಅಲ್ಲ: ವಿರಾಟ್ ಕೊಹ್ಲಿ

We play to win and not to take the game till 5th day - Virat Kohli

ಪಿಚ್ ಬಗೆಗೆ ಎದ್ದಿರುವ ವಿವಾದಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೀಕ್ಷ್ಣ ಪ್ರತ್ಯುತ್ತರವನ್ನು ನೀಡಿದ್ದಾರೆ. ಪಂದ್ಯ ಎರಡನೇ ದಿನಕ್ಕೆ ಅಂತ್ಯವಾದ ಬಗ್ಗೆ ಕೇಳು ಬಂದಿರುವ ಟೀಕೆಗಳಿಗೆ ವಿರಾಟ್ ಕೊಹ್ಲಿ ನಾವು ಪಂದ್ಯವನ್ನು ಗೆಲ್ಲುವುದಕ್ಕಾಗಿ ಆಡುತ್ತೇವೆ. ದಿನವನ್ನು ಎಣಿಸಿಕೊಂಡು ಆಡುವುದಿಲ್ಲ ಎಂದಿದ್ದಾರೆ.

ಪಿಚ್ ವಿಚಾರವಾಗಿ ಈ ಹಿಂದೆಯೂ ಮಾತನಾಡಿದ್ದ ವಿರಾಟ್ ಕೊಹ್ಲಿ ಪಿಚ್‌ನಲ್ಲಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಆದರೆ ಆಟದ ಕೌಶಲ್ಯದಲ್ಲಿ ಸಮಸ್ಯೆಗಳು ಇತ್ತು ಎಂದು ಹೇಳಿದ್ದರು. ಕೇವಲ ಒಂದು ಪಂದ್ಯದ ಆಧಾರದಲ್ಲಿ ಜನರು ಅಳೆಯುವುದು ಸರಿಯಲ್ಲ ಎಂದು ಅವರು ಹೇಳಿಕೆಯನ್ನು ನೀಡಿದ್ದಾರೆ.

ಪಿಚ್ ಬಗ್ಗೆ ಟೀಕಿಸುವವರಿಗೆ ಕಠಿಣ ಮಾತುಗಳ ಪ್ರತ್ಯುತ್ತರ ನೀಡಿದ ಅಜಿಂಕ್ಯ ರಹಾನೆಪಿಚ್ ಬಗ್ಗೆ ಟೀಕಿಸುವವರಿಗೆ ಕಠಿಣ ಮಾತುಗಳ ಪ್ರತ್ಯುತ್ತರ ನೀಡಿದ ಅಜಿಂಕ್ಯ ರಹಾನೆ

"ಕ್ರಿಕೆಟ್‌ನಲ್ಲಿ ಬಾಲ್ ಹಾಗೂ ಪಿಚ್ ಇಷ್ಟು ಪ್ರಮಾಣದಲ್ಲಿ ಗಮನಸೆಳೆಯುವುದು ವಿಚಿತ್ರಕಾರಿ. ಅದು ಪಿಚ್‌ನಲ್ಲಿ ಬ್ಯಾಟ್ಸ್‌ಮನ್ ಸಾಕಷ್ಟು ಕೌಶಲ್ಯವನ್ನು ಹೊಂದಿಲ್ಲದಿರುವ ಬಗ್ಗೆ ಚರ್ಚೆಯಾಗಬೇಕಿತ್ತು. ಅದು ಎರಡೂ ತಂಡಗಳ ವಿಲಕ್ಷಣ ಬ್ಯಾಟಿಂಗ್ ಪ್ರದರ್ಶನವಾಗಿತ್ತು. ಮೈದಾನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಾನು ಸಾಕಷ್ಟು ಕ್ರಿಕೆಟ್ ಆಡಿದ್ದೇನೆ" ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದಾಗ ತವರು ಅಂಗಳದ ಅನುಕೂಲಗಳ ಬಗ್ಗೆ ಕೇಳಿದ್ದರೆ ಚೆನ್ನಾಗಿರುತ್ತದೆ. ಕೇವಲ ಎರಡು ಟ್ರ್ಯಾಕ್‌ಗಳೂ ತಿರುವು ಪಡೆದುಕೊಂಡಾಗ ಅಲ್ಲ" ಎಮದು ವಿರಾಟ್ ಕೊಹ್ಲಿ ಮಂಗಳವಾರ ನಡೆದ ವರ್ಚುವಲ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಹೇಳಿದ್ದಾರೆ.

ಶಸ್ತ್ರ ಚಿಕಿತ್ಸೆಯ ಬಳಿಕ ಮೈದಾನಕ್ಕಿಳಿದ ರವೀಂದ್ರ ಜಡೇಜಾ: ವಿಡಿಯೋಶಸ್ತ್ರ ಚಿಕಿತ್ಸೆಯ ಬಳಿಕ ಮೈದಾನಕ್ಕಿಳಿದ ರವೀಂದ್ರ ಜಡೇಜಾ: ವಿಡಿಯೋ

ಇನ್ನು ಇದೇ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶ್ನೆಯನ್ನು ಕೇಳಿದರು. "ನಾನು ನಿಮ್ಮ ಬಳಿ ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ನೀವು ಗೆಲುವನ್ನು ಸಾಧಿಸಲು ಆಡುತ್ತೀರೋ ಅಥವಾ ಐದು ದಿನಗಳವರೆಗೆ ಆಡು ಮನರಂಜಿಸಲು ಬಯಸುತ್ತೀರಾ? ನಾವು ಗೆಲುವಿಗಾಗಿ ಆಡುತ್ತೇವೆ. ಎಲ್ಲರೂ ರನ್‌ಗಳಿಸಲಿ ಎಮದು ನಾವು ಆಡುವುದಿಲ್ಲ. ಜನರು ಭಾರತ ಗೆಲುವನ್ನು ಸಾಧಿಸಿದಾಗ ಸಂಭ್ರಮಿಸುತ್ತಾರೆ. ಎಷ್ಟು ದಿನಗಳಲ್ಲಿ ಪಂದ್ಯ ಅಂತ್ಯವಾಯಿತು ಎಂಬುದು ಮುಖ್ಯವಲ್ಲ" ಎಂದು ವಿರಾಟ್ ಕೊಹ್ಲಿ ಹೇಳಿಕೆಯನ್ನು ನೀಡಿದ್ದಾರೆ.

Story first published: Wednesday, March 3, 2021, 16:06 [IST]
Other articles published on Mar 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X