ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನಾವು ಜೋಫ್ರಾ ಆರ್ಚರ್‌ನನ್ನು ಇನ್ನೊಬ್ಬ ಇಂಗ್ಲಿಷ್‌ಮ್ಯಾನ್‌ನಂತೆ ನೋಡುತ್ತೇವೆ'

We see Archer as just another Englishman: Jason Holder

ಲಂಡನ್, ಜೂನ್ 17: ಸೌತಾಂಪ್ಟನ್‌ನಲ್ಲಿ ಜುಲೈ 8ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಿಂದಲೂ ನಾವು ಬಾರ್ಬಡೋಸ್‌ನಲ್ಲಿ ಜನಿಸಿದ ವೇಗಿ ಜೋಫ್ರಾ ಆರ್ಚರ್‌ನನ್ನು ಇನ್ನೊಬ್ಬ ಇಂಗ್ಲಿಷ್‌ಮ್ಯಾನ್‌ನಂತೆ ನೋಡುತ್ತೇವೆ ಎಂದು ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್ ಹೇಳಿದ್ದಾರೆ (ಚಿತ್ರಕೃಪೆ: ಐಸಿಸಿ).

ಪಾಕಿಸ್ತಾನಕ್ಕೆ ಭಾರತ ಸತತ 7ನೇ ವಿಶ್ವಕಪ್‌ ಸೋಲುಣಿಸಿದ್ದು ಇದೇ ದಿನಪಾಕಿಸ್ತಾನಕ್ಕೆ ಭಾರತ ಸತತ 7ನೇ ವಿಶ್ವಕಪ್‌ ಸೋಲುಣಿಸಿದ್ದು ಇದೇ ದಿನ

2018ರಲ್ಲಿ ಜೋಫ್ರಾ ಆರ್ಚರ್ ಇಂಗ್ಲೆಂಡ್ ಪ್ರತಿನಿಧಿಸುವ ಅರ್ಹತೆ ಗಿಟ್ಟಿಸಿಕೊಂಡಿದ್ದರು. 2014ರಲ್ಲಿ ಆರ್ಚರ್ ವೆಸ್ಟ್ ಇಂಡೀಸ್ ಪರ ಅಂಡರ್-19 ತಂಡದಲ್ಲಿ ಆಡಿದ್ದರು. ಆದರೆ ಭಾನುವಾರ (ಜೂನ್ 14) ವಿಂಡೀಸ್ ವೇಗಿ ಕೆಮರ್ ರೋಚ್, ಆರ್ಚರ್‌ಗೆ ಎಚ್ಚರಿಕೆ ರವಾಗಿಸಿದ್ದರು. ಈ ಸರಣಿ ವೇಳೆ 'ಫ್ರೆಂಡ್ಶಿಪ್ ಇಲ್ಲ' ಎಂದಿದ್ದರು.

ಐಪಿಎಲ್‌ಗೆ ದಿನಾಂಕ ನಿಗದಿ, ಸೆಪ್ಟೆಂಬರ್ 26 ರಿಂದ ನವೆಂಬರ್ 8ರವರೆಗೆ ನಡೆಯಲಿದೆ ಟೂರ್ನಿಐಪಿಎಲ್‌ಗೆ ದಿನಾಂಕ ನಿಗದಿ, ಸೆಪ್ಟೆಂಬರ್ 26 ರಿಂದ ನವೆಂಬರ್ 8ರವರೆಗೆ ನಡೆಯಲಿದೆ ಟೂರ್ನಿ

ಇದೇ ರೀತಿಯ ಹೇಳಿಕೆ ಜೇಸನ್ ಹೋಲ್ಡರ್ ಕೂಡ ನೀಡಿದ್ದಾರೆ. ಆರ್ಚರ್ ಜೊತೆಗಿನ ಫ್ರೆಂಡ್ಶಿಪ್ ಏನಿದ್ದರೂ ಮೂರು ಪಂದ್ಯಗಳ ಟೆಸ್ಟ್ ಸರಣಿ ಮುಗಿದ ಬಳಿಕ ಎಂದವರು ಹೇಳಿದ್ದಾರೆ. 'ಆರ್ಚರ್ ಈಗ ಇಂಗ್ಲೆಂಡ್‌ನವನು. ನೆನ್ನೆ ಸಂದರ್ಶನ ನಡೆಸುವಾಗ ಕೆಮರ್‌ ರೋಚ್‌ ಕೂಡ ಇದನ್ನೇ ಹೇಳಿದ್ದಾರೆ ಅಂತ ನಾನು ಭಾವಿಸುತ್ತೇನೆ,' ಎಂದು ಹೋಲ್ಡರ್ ನುಡಿದ್ದಾರೆ.

ಕೊಹ್ಲಿಗಿರುವ ಈ ಸಾಮರ್ಥ್ಯ ರೋಹಿತ್, ಗೇಲ್, ಎಬಿಡಿಗೂ ಇಲ್ಲ!: ಗಂಭೀರ್ಕೊಹ್ಲಿಗಿರುವ ಈ ಸಾಮರ್ಥ್ಯ ರೋಹಿತ್, ಗೇಲ್, ಎಬಿಡಿಗೂ ಇಲ್ಲ!: ಗಂಭೀರ್

'ನೋಡಿ, ಮೈದಾನದ ಹೊರಗಿದ್ದಾಗ ನಾವು ಗೆಳೆಯರು. ಯಾವಾಗ ಮೈದಾನದ ಈ ಗೆರೆ ದಾಟುತ್ತೇವೋ ಆಗ ನಾವಾತನನ್ನು (ಆರ್ಚರ್‌ನನ್ನು) ಇನ್ನೊಬ್ಬ ಇಂಗ್ಲೆಂಡ್ ಆಟಗಾರನಂತೆ ನೋಡುತ್ತೇವೆ. ಈ ವಿಚಾರದಲ್ಲಿ ಆರ್ಚರ್‌ ಕೂಡ ನಮ್ಮನ್ನು ಎದುರಾಳಿಯಾಗಿ ನೋಡುತ್ತಾನೆ ಎಂದು ನಾನು ಭಾವಿಸುತ್ತೇನೆ,' ಎಂದು ಹೋಲ್ಡರ್ ವಿವರಿಸಿದರು.

Story first published: Wednesday, June 17, 2020, 8:17 [IST]
Other articles published on Jun 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X