ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾವು ಜೊತೆಗಿದ್ದೇವೆ, ಗ್ಲೌಸ್ ತೆಗೆಯಬೇಡಿ: ಧೋನಿ ಬೆಂಬಲಕ್ಕೆ ಸಾವಿರ ಟ್ವೀಟ್!

Dhoni Keep The Glove ಎಂದು ಧೋನಿ ಬೆಂಬಲಕ್ಕೆ ನಿಂತ ಭಾರತ..? | Oneindia Kannada
We stand by our player: BCCI on ICC asking Dhoni to remove balidan insignia from gloves

ಸೌತಾಂಪ್ಟನ್, ಜೂನ್ 7: ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರು ಭಾರತೀಯ ಆರ್ಮಿ ಚಿಹ್ನೆಯಿದ್ದ ಗ್ಲೌಸ್ ಧರಿಸಿದ್ದರು. ಈ ಚಿಹ್ನೆಯಿರುವ ಗ್ಲೌಸ್ ಧರಿಸದಂತೆ ಧೋನಿಗೆ ಸೂಚಿಸಲು ಐಸಿಸಿಯು ಬಿಸಿಸಿಐಗೆ ಹೇಳಿತ್ತು. ಆದರೆ ಧೋನಿಗೆ ಬೆಂಬಲ ಸೂಚಿಸಿ ಅಪಾರ ಟ್ವೀಟ್‌ಗಳು ಬಂದಿವೆ.

ಎಂಎಸ್ ಧೋನಿ ಗ್ಲೌಸಿನಲ್ಲಿದ್ದ ಸೇನೆಯ ಮುದ್ರೆ ತೆಗೆಯುವಂತೆ ಹೇಳಿದ ಐಸಿಸಿಎಂಎಸ್ ಧೋನಿ ಗ್ಲೌಸಿನಲ್ಲಿದ್ದ ಸೇನೆಯ ಮುದ್ರೆ ತೆಗೆಯುವಂತೆ ಹೇಳಿದ ಐಸಿಸಿ

ಸೌತಾಂಪ್ಟನ್ ನಲ್ಲಿ ಬುಧವಾರ (ಜೂನ್ 5) ನಡೆದಿದ್ದ ದಕ್ಷಿಣ ಆಫ್ರಿಕಾ vs ಭಾರತ ಪಂದ್ಯದಲ್ಲಿ ವಿಕೆಟ್ ಕೀಪರ್ ಧೋನಿ ಅವರು ವಿಶೇಷ ಗ್ಲೌಸ್ ಧರಿಸಿದ್ದರು. ಭಾರತೀಯ ವಿಶೇಷ ಪ್ಯಾರಾ ಸೇನಾಪಡೆಯ 'ಬಲಿದಾನ್' ಮುದ್ರೆ ಈ ಗ್ಲೌಸಿನಲ್ಲಿತ್ತು. ವಿಶ್ವಕಪ್ ವೇಳೆ ಇಂಥ ಗ್ಲೌಸ್ ಧರಿಸಲು ಅವಕಾಶವಿಲ್ಲ. ಇದು ನಿಯಮ ಉಲ್ಲಂಘನೆಯಾಗುತ್ತದೆ. ಧೋನಿ ಗ್ಲೌಸ್‌ನಿಂದ ಈ ಮುದ್ರೆ ತೆಗೆಯಬೇಕು ಎಂದು ಐಸಿಸಿ ಹೇಳಿತ್ತು.

ಎಂ.ಎಸ್‌ ಧೋನಿ ಬಗ್ಗೆ ಅಚ್ಚರಿಯ ಹೇಳಿಕೆ ನಿಡಿದ ಶೊಯೇಬ್‌ ಅಖ್ತರ್‌!ಎಂ.ಎಸ್‌ ಧೋನಿ ಬಗ್ಗೆ ಅಚ್ಚರಿಯ ಹೇಳಿಕೆ ನಿಡಿದ ಶೊಯೇಬ್‌ ಅಖ್ತರ್‌!

ಐಸಿಸಿ ಹೇಳಿಕೆಗೆ ಬಿಸಿಸಿಐ ಒಪ್ಪಿಗೆ ಸೂಚಿಸಿಲ್ಲ. ಬದಲಿಗೆ ಐಸಿಸಿಗೆ ಮತ್ತೆ ಪತ್ರ ಬರೆಯುವುದಾಗಿ ಹೇಳಿರುವ ಬಿಸಿಸಿಐ, ಧೋನಿಯ ಬೆಂಬಲಕ್ಕೆ ನಿಂತಿದೆ. ಬಿಸಿಸಿಐ ಕೋರಿಕೆಗೆ ಐಸಿಸಿ ಸ್ಪಂದಿಸುವ ನಿರೀಕ್ಷೆಯಿದೆ. ಇತ್ತ ಸಾವಿರಾರು ಭಾರತೀಯ ಕ್ರಿಕೆಟ್ ಅಭಿಮಾನಿಗಳೂ ತಮ್ಮ ನೆಚ್ಚಿನ ಆಟಗಾರ ಧೋನಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ಗ್ಲೌಸ್ ತೆಗೆಯಬೇಡಿ

ನೀವೊಬ್ಬರು ಪ್ಯಾರಾ ರೆಜಿಮೆಂಟ್ ಅಧಿಕಾರಿ. ಆ ಗ್ಲೌಸನ್ನು ತೆಗೆಯಬೇಡಿ. 'ಬಲಿದಾನ' ನಮ್ಮ ಗೌರವದ ಚಿಹ್ನೆ. ಅದು ನಮ್ಮ ಭಾರತೀಯ ಸೇನೆಯ ಹೆಮ್ಮೆಯ ದ್ಯೋತಕವೂ ಹೌದು. ದೇಶವೇ ನಿಮ್ಮ ಬೆಂಬಲಕ್ಕಿದೆ ಎಂದು ಧೋನಿ ಬೆಂಬಲಿಸಿ ನಿವೃತ್ತ ಮೇಜರ್ ಗೌರವ್ ಆರ್ಯ ಟ್ವೀಟ್ ಮಾಡಿದ್ದಾರೆ.

ಪತ್ರ ಬರೆದಿದ್ದೇವೆ

ಐಸಿಸಿ ನಿಯಮದ ಪ್ರಕಾರ ಆಟಗಾರನೊಬ್ಬ ಧಾರ್ಮಿಕ, ಸೇನೆ ಮತ್ತು ಉದ್ಯಮಕ್ಕೆ ಮಹತ್ವ ನೀಡುವಂತಿಲ್ಲ. ಧೋನಿ ಈ ಗ್ಲೌಸ್ ಧರಿಸೋದರಿಂದ ಐಸಿಸಿಯ ಈ ಯಾವುದೇ ನಿಯಮ ಮೀರಿದಂತಾಗಲ್ಲ.ಹೀಗಾಗಿ ಭಾರತೀಯ ಸೈನ್ಯದ 'ಬಲಿದಾನ್' ಮುದ್ರೆಯಿರುವ ಗ್ಲೌಸ್ ಧರಿಸಲು ಧೋನಿಗೆ ಅನುಮತಿ ನೀಡಬೇಕೆಂದು ನಾವು ಈಗಾಗಲೇ ಐಸಿಸಿಗೆ ಪತ್ರ ಬರೆದಿದ್ದೇವೆ. ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ (ಸಿಒಎ) ಸಭೆಯ ಬಳಿಕ ಈ ಬಗ್ಗೆ ಹೆಚ್ಚಿನದ್ದು ಮಾತನಾಡೋಣ ಎಂದು ಸಿಒಎ ಮುಖ್ಯಸ್ಥ ವಿನೋದ್ ರಾಯ್ ತಿಳಿಸಿದ್ದಾರೆ.

ಇನ್ನಷ್ಟೇ ಪರಿಗಣಿಸಲ್ಪಡಬೇಕು

ಧೋನಿ ಅವರು 'ಬಲಿದಾನ್' ಮುದ್ರೆಯಿರುವ ಗ್ಲೌಸ್ ಧರಿಸಲು ಅನುಮತಿ ಕೋರಿರುವುದಾಗಿ ಬಿಸಿಸಿಐ ಹೇಳಿದೆ. ಇದು ನನಗೆ ಗೊತ್ತಿರಲಿಲ್ಲ. ಧೋನಿಗೆ ಅನುಮತಿ ನೀಡಬೇಕೋ ಬೇಡವೋ ಎಂಬುದು ಇನ್ನಷ್ಟೇ ಪರಿಗಣಿಸಲ್ಪಡಬೇಕಿದೆ ಎಂದು ಐಸಿಸಿ ಕಾರ್ಯತಂತ್ರ ಸಂವಹನದ ಪ್ರಧಾನ ವ್ಯವಸ್ಥಾಪಕಿ ಕ್ಲೇರ್ ಫರ್ಲಾಂಗ್ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಉರಿ!

ಭಾರತದ ಶ್ರೇಷ್ಠ ಸೈನ್ಯದ 'ಬಲಿದಾನ್' ಮುದ್ರೆಯಿರುವ ಗ್ಲೌಸ್ ಧರಿಸಿದ್ದಕ್ಕೆ ಪಾಕಿಸ್ತಾನಕ್ಕೆ ಉರಿದಿರಬೇಕು. ಇಡೀ ದೇಶವೇ ನಿಮ್ಮ ಜೊತೆಗಿದೆ ಧೋನಿ. ನಮಗೆ ನಿಮ್ಮ ಬಗ್ಗೆ ಹೆಮ್ಮೆಯಿದೆ ಎಂದು ಮನ್‌ಜೀಂದರ್ ಎಂಬವರು ಟ್ವೀಟ್ ಮಾಡಿದ್ದಾರೆ.

ಇದೇನು ಪ್ಯೂರ್ ಕ್ರಿಕೆಟ್ಟ?

ಪಾಕ್ ಮಿನಿಸ್ಟರ್ ಫಾವದ್ ಚೌಧರಿಗೆ ಲೆಫ್ಟಿನೆಂಟ್ ಕರ್ನಲ್ ಎಂಎಸ್ ಧೋನಿ ಅವರು ತಮ್ಮ ಗ್ಲೌಸಿನಲ್ಲಿ ಬಲಿದಾನ್ ಮುದ್ರೆ ಬಳಸಿದ್ದು ಇಷ್ಟವಾಗಿಲ್ಲ. ಧೋನಿ ಅವರು ಇಂಗ್ಲೆಂಡ್‌ಗೆ ಹೋಗುತ್ತಿರುವುದು ಕ್ರಿಕೆಟ್ ಆಡೋದಕ್ಕೆ ಹೊರತು ಮಹಾ ಭಾರತಕ್ಕಲ್ಲ ಎಂದು ಫಾವದ್ ಹೇಳಿದ್ದಾರೆ. ಈ ಚಿತ್ರದಲ್ಲಿ ಪಾಕಿಸ್ತಾನ ಆಟಗಾರರು ಶುದ್ಧ ಕ್ರಿಕೆಟ್ ಆಡುತ್ತಿದ್ದಾರಾ? ಎಂದು ಮತ್ತೊಂದು ಟ್ವೀಟ್ ಮಾಡಿರುವ ನಿವೃತ್ತ ಮೇಜರ್ ಗೌರವ್ ಆರ್ಯ, ಮೊಹಾಲಿ ಸ್ಟೇಡಿಯಂನಲ್ಲಿ ಪಾಕ್ ಆಟಗಾರರು ಪ್ರಾರ್ಥನೆ ಮಾಡುತ್ತಿರುವ ಚಿತ್ರವನ್ನು ಹಾಕಿಕೊಂಡಿದ್ದಾರೆ.

Story first published: Friday, June 7, 2019, 18:17 [IST]
Other articles published on Jun 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X