ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಆಯೋಜನೆಗೆ ಭಾರತವೇ ಮೊದಲ ಪ್ರಾಶಸ್ತ್ಯ: ಅರುಣ್ ಧುಮಲ್

We’ve To Consider India First And Then Think Of Overseas: Bcci Treasurer

ದೇಶದಲ್ಲಿ ಕೊರೊನಾ ವೈರಸ್ ಅಬ್ಬರ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಈ ಮಧ್ಯೆ ಐಪಿಎಲ್ 13ನೇ ಆವೃತ್ತಿ ಈ ಬಾರಿ ನಡೆಸಲು ಬಿಸಿಸಿಐ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಐಪಿಎಲ್ ಆಯೋಜಿಸುವ ಸ್ಥಳದ ಕುರಿತಾಗಿ ದಿನಕ್ಕೊಂದು ಸುದ್ದಿಗಳು ಹೊರಬೀಳುತ್ತಿದೆ.

ಐಪಿಎಲ್‌ನ ಈ ವರ್ಷದ ಆವೃತ್ತಿಯನ್ನು ಶ್ರೀಲಂಕಾ ಹಾಗೂ ಯುಎಇ ಕ್ರಿಕೆಟ್ ಸಂಸ್ಥೆಗಳು ತಮ್ಮ ದೇಶದಲ್ಲಿ ಆಯೋಜಿಸಿ ಎಂದು ಈ ಹಿಂದೆಯೇ ಮನವಿ ಮಾಡಿಕೊಂಡಿತ್ತು. ಇದೀಗ ನ್ಯೂಜಿಲೆಂಡ್ ಕೂಡ ಐಪಿಎಲ್ ಆಯೋಜಿಸಲು ಆಸಕ್ತಿವಹಿಸಿದ್ದು ಮನವಿ ಸಲ್ಲಿಸಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಎಂಎಸ್ ಧೋನಿ ಹುಟ್ಟುಹಬ್ಬ: ಮಿಸ್ಟರ್ ಕೂಲ್ ವೃತ್ತಿಬದುಕಿನ ಐದು ಶ್ರೇಷ್ಠ ಇನ್ನಿಂಗ್ಸ್‌ಗಳುಎಂಎಸ್ ಧೋನಿ ಹುಟ್ಟುಹಬ್ಬ: ಮಿಸ್ಟರ್ ಕೂಲ್ ವೃತ್ತಿಬದುಕಿನ ಐದು ಶ್ರೇಷ್ಠ ಇನ್ನಿಂಗ್ಸ್‌ಗಳು

ಈ ಬೆಳವಣಿಗೆಯ ನಂತರ ಬಿಸಿಸಿಐ ಖಜಾಂಚಿ ಅರುಣ್ ಧುಮಲ್ ಮತ್ತೊಂದು ಹೇಳಿಕೆಯನ್ನು ನೀಡಿದ್ದಾರೆ. ಐಪಿಎಲ್ ಆಯೋಜನೆಗೆ ಭಾರತವೇ ನಮ್ಮ ಮೊದಲ ಪ್ರಾಶಸ್ತ್ಯ ಎಂದು ಅರುಣ್ ಧುಮಲ್ ಹೇಳಿದ್ದಾರೆ. ವಿದೇಶ ಆಯೋಜನೆ ಮಾಡುವ ಕುರಿತು ಮನವಿ ಬಂದಿವೆಯಾದರೂ ಆ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಜೊತೆಗೆ ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂದಿದ್ದಾರೆ.

12 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಕೇವಲ ಎರಡು ಬಾರಿ ಮಾತ್ರವೇ ಐಪಿಎಲ್‌ಅನ್ನು ವಿದೇಶದಲ್ಲಿ ಆಯೋಜಿಸಲಾಗಿದೆ. ಲೋಕಸಭಾ ಚುನಾವಣೆಯ ಸಂದರ್ಭವಾದ ಕಾರಣದಿಂದ 2009ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸಂಪೂರ್ಣ ಆವೃತ್ತಿಯನ್ನು ಏರ್ಪಡಿಸಲಾಗಿತ್ತು. ನಂತರ 2014ರ ಚುನಾವಣೆಯ ಸಂದರ್ಭದಲ್ಲಿ ಮೊದಲಾರ್ಧದ ಕೆಲ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು.

39ನೇ ವರ್ಷಕ್ಕೆ ಕಾಲಿಟ್ಟ ಮಿಸ್ಟರ್ ಕೂಲ್‌ಗೆ ವಿಶೇಷ ಉಡುಗೊರೆ ನೀಡಿದ ಬ್ರಾವೋ39ನೇ ವರ್ಷಕ್ಕೆ ಕಾಲಿಟ್ಟ ಮಿಸ್ಟರ್ ಕೂಲ್‌ಗೆ ವಿಶೇಷ ಉಡುಗೊರೆ ನೀಡಿದ ಬ್ರಾವೋ

ಇದೇ ಸಂದರ್ಭದಲ್ಲಿ ಅರುಣ್ ಧುಮಲ್ ವಿಶ್ವಕಪ್ ಆಯೋಜನೆಯ ಬಗ್ಗೆ ಐಸಿಸಿ ತನ್ನ ನಿರ್ಧಾರವನ್ನು ಪ್ರಕಟಿಸದಿರುವುದು ನಮಗೆ ವೇಳಾಪಟ್ಟಿ ತಯಾರಿಸಲು ತಲೆನೋವಾಗಿದೆ. ಈ ಅಸ್ಥಿರತೆಯ ಕಾರಣದಿಂದಾಗಿ ಎಲ್ಲರೂ ಒತ್ತಡದಲ್ಲಿದ್ದಾರೆ ಎಂದು ಹೇಳಿದ್ದಾರೆ. ಈ ವರ್ಷದ ಐಪಿಎಲ್ ಆವೃತ್ತಿ ಆಯೋಜನೆಯಾಗದಿದ್ದರೆ ಬಿಸಿಸಿಐ 4000 ಕೋಟಿ ರೂಪಾಯಿಯಷ್ಟು ನಷ್ಟಕ್ಕೆ ಒಳಗಾಗಲಿದೆ ಎಂದು ಅಂದಾಜಿಸಲಾಗಿದೆ.

Story first published: Wednesday, July 8, 2020, 9:57 [IST]
Other articles published on Jul 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X