ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

5-6 ದಿನ ನಮ್ಮನ್ನು ಕೋಣೆಯಲ್ಲಿ ಬಂಧಿಸಿದ್ದರು: ಮುಸ್ತಾಫಿಝುರ್

‘We were locked in one room for nearly 5-6 days’: Mustafizur Rahman

ನವದೆಹಲಿ: ಬಾಂಗ್ಲಾದೇಶದ ವೇಗಿ ಮುಸ್ತಾಫಿಝುರ್ ರಹಮಾನ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಯ ವೇಳೆ ಬಯೋಬಬಲ್ ಒಳಗೆ ಕಳೆಯುವಾಗಿನ ಗೋಳನ್ನು ಹೇಳಿಕೊಂಡಿದ್ದಾರೆ. ಸುಮಾರು 5-6 ದಿನಗಳ ಕಾಲ ನಮ್ಮನ್ನು ಒಂದು ಕೋಣೆಯಲ್ಲಿ ಬಂಧಿಸಲಾಗಿತ್ತು ಎಂದು ಮುಸ್ತಾಫಿಝುರ್ ಹೇಳಿಕೊಂಡಿದ್ದಾರೆ.

ಐಪಿಎಲ್‌ಗಾಗಿ ನಾನು ಮತ್ತೆ ಭಾರತಕ್ಕೆ ಬರಲು ಸಿದ್ಧನಿದ್ದೇನೆ: ನೀಶಮ್ಐಪಿಎಲ್‌ಗಾಗಿ ನಾನು ಮತ್ತೆ ಭಾರತಕ್ಕೆ ಬರಲು ಸಿದ್ಧನಿದ್ದೇನೆ: ನೀಶಮ್

25ರ ಹರೆಯದ ಮುಷ್ತಾಫಿಝುರ್ ರಹಮಾನ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. 7 ಪಂದ್ಯಗಳಲ್ಲಿ ಆಡಿದ್ದ ರಹಮಾನ್ 8 ವಿಕೆಟ್‌ಗಳೊಂದಿಗೆ ಗಮನ ಸೆಳೆದಿದ್ದರು. ಆದರೆ 2021ರ ಐಪಿಎಲ್ ಆವೃತ್ತಿ ಕೋವಿಡ್-19 ಭೀತಿಯಿಂದಾಗಿ ಅಮಾನತಾಗಿತ್ತು.

ಮುಖ್ಯವಾಗಿ ಐಪಿಎಲ್ ಬಯೋಬಬಲ್ ಒಳಗೆ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಐಪಿಎಲ್ ನಿಲ್ಲಿಸುವ ಅನಿವಾರ್ಯತೆಗೆ ಬಿಸಿಸಿಐ ಸಿಲುಕಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಚೆನ್ನೈ ಸೂಪರ್‌ ಕಿಂಗ್ಸ್‌ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ, ಡೆಲ್ಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾ, ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹ ಅವರಲ್ಲಿ ಕೋವಿಡ್ ಸೋಂಕು ಬಂದಿದ್ದರಿಂದ ಐಪಿಎಲ್ ಅಮಾನತುಗೊಳಿಸಲಾಯ್ತು.

ಎಬಿಡಿಗಿಂತ ಕ್ರಿಸ್ ಗೇಲ್, ಕೊಹ್ಲಿ ಸಖತ್ ಡೇಂಜರಸ್ ಎನ್ನುತ್ತಿವೆ ಈ ಅಂಕಿಅಂಶಗಳು!ಎಬಿಡಿಗಿಂತ ಕ್ರಿಸ್ ಗೇಲ್, ಕೊಹ್ಲಿ ಸಖತ್ ಡೇಂಜರಸ್ ಎನ್ನುತ್ತಿವೆ ಈ ಅಂಕಿಅಂಶಗಳು!

'ಬಯೋಬಬಲ್‌ನಲ್ಲಿ ನಿರಂತರವಾಗಿ ಕಳೆಯೋದು ಬಹಳ ಆಯಾಸದ ಸಂಗತಿ. ದಿನದಿಂದ ದಿನಕ್ಕೆ ಅದು ಕಷ್ಟವಾಗುತ್ತಿತ್ತು. ಹೋಟೆಲ್ ರೂಮ್, ತಾಣ ಎಷ್ಟೂಂತ ಬರೀ ಇಷ್ಟನ್ನೇ ಎಂಜಾಯ್ ಮಾಡೋಕೆ ಸಾಧ್ಯ? ಅದು ಐಪಿಎಲ್ ಆಗಿರ್ಲಿ ಇಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಗಿರ್ಲಿ, ಎರಡಕ್ಕೂ ಒಂದೇ ಪ್ರೋಟೋಕಾಲ್. ನಮ್ಮನ್ನು 5-6 ದಿನಗಳ ಮಟ್ಟಿಗಂತೂ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ ಅನ್ನಿಸಿತ್ತು,' ಎಂದು ಮುಸ್ತಾಫಿಜುರ್ ಹೇಳಿದ್ದಾರೆ.

Story first published: Monday, May 10, 2021, 23:17 [IST]
Other articles published on May 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X