ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧದ ಹೀನಾಯ ಸೋಲಿನ ಬಳಿಕ ಫಿಂಚ್‌ ಹೇಳಿದ್ದೇನು?

ICC World Cup 2019 : ಎಲ್ಲವನ್ನೂ ಒಪ್ಪಿಕೊಂಡ ಫಿಂಚ್..! | Oneindia Kannada
We were outplayed, admits Aaron Finch after India drubbing

ಲಂಡನ್‌, ಜೂನ್‌ 10: ಕ್ರಿಕೆಟ್‌ನ ಎಲ್ಲಾ ವಿಭಾಗಗಳಲ್ಲಿಯೂ ಭಾರತ ತಂಡ ತಮ್ಮೆದುರು ಪ್ರಾಬಲ್ಯ ಮೆರೆಯಿತು ಎಂದು ಆಸ್ಟ್ರೇಲಿಯಾ ತಂಡದ ನಾಯಕ ಆರೊನ್‌ ಫಿಂಚ್‌ ಒಪ್ಪಿಕೊಂಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮಿಂಚಿದ ಟೀಮ್‌ ಇಂಡಿಯಾ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ 36 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ, ವಿಶ್ವಕಪ್‌ ಅಖಾಡದಲ್ಲಿ ಆಸ್ಟ್ರೇಲಿಯಾ ವಿರುದ್ಧ ಉಳಿದೆಲ್ಲಾ ತಂಡಗಳಿಗಿಂತಲೂ ಗರಿಷ್ಠ ಮೊತ್ತ ದಾಖಲಿಸಿ ಅಬ್ಬರಿಸಿತ್ತು.

ಒಡಿಐ ಕ್ರಿಕೆಟ್‌ನಲ್ಲಿ ಯುವರಾಜ್‌ಗೆ ಕೀರ್ತಿ ತಂದ 5 ಪಂದ್ಯಗಳಿವು!ಒಡಿಐ ಕ್ರಿಕೆಟ್‌ನಲ್ಲಿ ಯುವರಾಜ್‌ಗೆ ಕೀರ್ತಿ ತಂದ 5 ಪಂದ್ಯಗಳಿವು!

ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ (117) ಅಮೋಘ ಶತಕ ದಾಖಲಿಸಿದರೆ, ಮತ್ತೊಬ್ಬ ಆರಂಭಕಾರ ರೋಹಿತ್‌ ಶರ್ಮಾ (57) ಮತ್ತು ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ (82) ಅರ್ಧಶತಕಗಳನ್ನು ದಾಖಲಿಸಿ ತಂಡಕ್ಕೆ 50 ಓವರ್‌ಗಳಲ್ಲಿ 352/5 ರನ್‌ಗಳ ಬೃಹತ್‌ ಮೊತ್ತ ತಂದುಕೊಟ್ಟರು.

ದಾದಾ, ತೆಂಡೂಲ್ಕರ್‌ ಸಾಲಿಗೆ ಸೇರಿದ ಶತಕ ವೀರ ಶಿಖರ್‌ ಧವನ್‌!ದಾದಾ, ತೆಂಡೂಲ್ಕರ್‌ ಸಾಲಿಗೆ ಸೇರಿದ ಶತಕ ವೀರ ಶಿಖರ್‌ ಧವನ್‌!

ಬಳಿಕ ಬೌಲಿಂಗ್‌ನಲ್ಲೂ ಅಷ್ಟೇ ಗಮನಾರ್ಹ ಪ್ರದರ್ಶನ ನೀಡಿದ ಟೀಮ್‌ ಇಂಡಿಯಾ, ಆಸ್ಟ್ರೇಲಿಯಾ ತಂಡವನ್ನು 50 ಓವರ್‌ಗಳಲ್ಲಿ 316 ರನ್‌ಗಳಿಗೆ ಆಲ್‌ಔಟ್‌ ಮಾಡಿತು. ವೇಗಿಗಳಾದ ಜಸ್‌ಪ್ರೀತ್‌ ಬುಮ್ರಾ ಮತ್ತು ಭುವನೇಶ್ವರ್‌ ಕುಮಾರ್‌ ತಲಾ ಮೂರು ವಿಕೆಟ್‌ ಪಡೆದು ಆಸೀಸ್‌ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡಿದರು. ಇದರೊಂದಿಗೆ ಪ್ರಸಕ್ತ ವಿಶ್ವಕಪ್‌ನಲ್ಲಿ ಭಾರತ ಸತತ ಎರಡು ಪಂದ್ಯಗಳನ್ನು ಗೆದ್ದರೆ ಆಸ್ಟ್ರೇಲಿಯಾ ಮೊದಲ ಸೋಲಿನ ಆಘಾತಕ್ಕೊಳಗಾಗಿದೆ.

ಆಸೀಸ್‌ ವಿರುದ್ಧ ವಿಶ್ವ ದಾಖಲೆ ಬರೆದ ಗಬ್ಬರ್‌-ಹಿಟ್‌ಮ್ಯಾನ್‌ ಜೋಡಿ!ಆಸೀಸ್‌ ವಿರುದ್ಧ ವಿಶ್ವ ದಾಖಲೆ ಬರೆದ ಗಬ್ಬರ್‌-ಹಿಟ್‌ಮ್ಯಾನ್‌ ಜೋಡಿ!

"ಭಾರತ ನಮ್ಮನ್ನು ಎಲ್ಲಾ ವಿಭಾಗಗಳಿಂದಲೂ ಸೋಲಿಸಿದ ಪಂದ್ಯವಿದು. ಕೊನೆಯ 10 ಓವರ್‌ಗಳಲ್ಲಿ ಅವರು 120 ರನ್‌ಗಳನ್ನು ಗಳಿಸಿದರು. ಇದು ಅತ್ಯಧಿಕ. ನಮ್ಮ ಬೌಲಿಂಗ್‌ ಉತ್ತಮವಾಗಿರಲಿಲ್ಲ. ಭಾರತ ತಂಡದ ಬ್ಯಾಟಿಂಗ್‌ ಬಲ ಹೆಚ್ಚಿದ್ದು, ಅವರನ್ನ ತಡೆದು ನಿಲ್ಲಿಸಲು ಸಾಧ್ಯವಾಗಲಿಲ್ಲ. ನಮ್ಮ ಬೌಲರ್‌ಗಳು ನೇರ ಮತ್ತು ನಿಖರವಾಗಿ ಬೌಲಿಂಗ್‌ ಮಾಡಬೇಕಿತ್ತು. ಭಾರತ ತಂಡ ಕೆಳ ಕ್ರಮಾಂಕದ ವರೆಗೂ ಬ್ಯಾಟಿಂಗ್‌ ನಡೆಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ವಿಕೆಟ್‌ಗಳನ್ನು ಪಡೆಯುವ ಕಡೆಗೆ ಹೆಚ್ಚು ಗಮನ ನೀಡಬೇಕಿತ್ತು,'' ಎಂದು ಪಂದ್ಯದ ಬಳಿಕ ಮಾತನಾಡಿದ ಫಿಂಚ್‌ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಧೋನಿ ಬೆಂಬಲಿಸಿ 'ಬಲಿದಾನ್‌ ಬ್ಯಾಡ್ಜ್‌' ಪ್ರದರ್ಶಿಸಿದ ಅಭಿಮಾನಿಗಳು!ಧೋನಿ ಬೆಂಬಲಿಸಿ 'ಬಲಿದಾನ್‌ ಬ್ಯಾಡ್ಜ್‌' ಪ್ರದರ್ಶಿಸಿದ ಅಭಿಮಾನಿಗಳು!

ಆಸ್ಟ್ರೇಲಿಯಾ ತಂಡ ತನ್ನ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬುಧವಾರ ಪೈಪೋಟಿ ನಡೆಸಲಿದೆ.

Story first published: Monday, June 10, 2019, 18:39 [IST]
Other articles published on Jun 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X