ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್‌ ತಂಡವನ್ನು "ಗ್ರೇಟ್‌" ಎಂದ ಕಿವೀಸ್‌ ನಾಯಕ ವಿಲಿಯಮ್ಸನ್‌!

We were outplayed by a great Pakistan side: Kane Williamson

ಬರ್ಮಿಂಗ್‌ಹ್ಯಾಮ್‌, ಜೂನ್‌ 27: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಕಳೆದ ಬಾರಿಯ ರನ್ನರ್ಸ್‌ಅಪ್‌ ನ್ಯೂಜಿಲೆಂಡ್‌ ತಂಡದ ಅಜೇಯ ಗೆಲುವಿನ ಓಟಕ್ಕೆ ಬುಧವಾರ ಇಲ್ಲಿನ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಪಾಕಿಸ್ತಾನ ತಂಡ ಬ್ರೇಕ್‌ ಹಾಕುವಲ್ಲಿ ಯಶಸ್ವಿಯಾಯಿತು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಟೂರ್ನಿಯಲ್ಲಿ ಪ್ರಶಸ್ತಿ ಗೆಲುವಿನ ಫೇವರಿಟ್ಸ್‌ಗಳಲ್ಲಿ ಒಂದಾಗಿರುವ ನ್ಯೂಜಿಲೆಂಡ್‌ ವಿರುದ್ಧ ಪಾಕಿಸ್ತಾನ ತಂಡ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿ ತನ್ನ ಸೆಮಿಫೈನಲ್‌ ಕನಸನ್ನು ಜೀವಂತವಾಗಿ ಉಳಿಸಿಕೊಂಡಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್‌, "ಗ್ರೇಟ್‌" ಪಾಕಿಸ್ತಾನ ತಂಡ ಎಲ್ಲಾ ವಿಭಾಗಗಳಲ್ಲಿಯೂ ತಮ್ಮ ತಂಡವನ್ನು ಧೂಳೀಪಟ ಮಾಡಿತು ಎಂದು ಹೇಳಿದ್ದಾರೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಬೃಹತ್‌ ಮೊತ್ತ ದಾಖಲಿಸುವ ಲೆಕ್ಕಾಚಾರದಲ್ಲಿ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಬ್ಲ್ಯಾಕ್‌ ಕ್ಯಾಪ್ಸ್‌ ಪಾಕಿಸ್ತಾನದ ಶಿಸ್ತಿನ ಬೌಲಿಂಗ್ ದಾಳಿ ಎದುರು ಆರಂಭಿಕ ಆಘಾತ ಅನುಭವಿಸಿ ಕೊನೆಗೆ 237/6 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಪಾಕ್‌, ಬಾಬರ್‌ ಆಝಮ್‌ (ಔಟಾಗದೆ 101) ಅವರ ಅಜೇಯ ಶತಕದ ನೆರವಿನಿಂದ 49.1 ಓವರ್‌ಗಳಲ್ಲಿ 241/4 ರನ್‌ ದಾಖಲಿಸಿ ಸ್ಮರಣೀಯ ಜಯ ತನ್ನದಾಗಿಸಿಕೊಂಡಿತು.

ವಿಶ್ವಕಪ್‌ 2019: 'ಯೂನಿವರ್ಸ್‌ ಬಾಸ್‌' ಕ್ರಿಸ್‌ ಗೇಲ್‌ ಅಪ್ರತಿಮ ಆಟಗಾರವಿಶ್ವಕಪ್‌ 2019: 'ಯೂನಿವರ್ಸ್‌ ಬಾಸ್‌' ಕ್ರಿಸ್‌ ಗೇಲ್‌ ಅಪ್ರತಿಮ ಆಟಗಾರ

"ಕಳೆದ ಮೂರು ಪಂದ್ಯಗಳಲ್ಲಿ ಪಿಚ್‌ ಬೌಲರ್‌ಗಳಿಗೆ ನೆರವಾಗುತ್ತಿರುವುದನ್ನು ಗಮನಿಸಿದ್ದೇವೆ. ಕೆಲ ಪಂದ್ಯಗಳಂತೂ ಕೊನೆಯ ಓವರ್‌ಗಳ ವರೆಗೆ ಜಿದ್ದಾಜಿದ್ದಿನ ಹೋರಾಟ ಕಂಡಿವೆ. ಇಂತಹ ಕಠಿಣ ಪಿಚ್‌ನಲ್ಲಿ ಗ್ರೇಟ್‌ ಪಾಕಿಸ್ತಾನ ತಂಡ ನಮ್ಮೆದುರು ಎಲ್ಲಾ ವಿಭಾಗಗಳಲ್ಲಿ ಪ್ರಾಬಲ್ಯ ಮೆರದಿದೆ,'' ಎಂದು ಪಂದ್ಯದ ಬಳಿಕ ಮಾತನಾಡಿದ ವಿಲಿಯಮ್ಸನ್‌ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

"ಹಿಂದಿನ ಪಂದ್ಯಕ್ಕಿಂತಲೂ ಈ ಬಾರಿ ಇಲ್ಲಿನ ಪಿಚ್‌ನಲ್ಲಿ ಚೆಂಡು ಹೆಚ್ಚು ಪುಟಿದೇಳುತ್ತಿತ್ತು. ಪಾಕಿಸ್ತಾನದ ಬೌಲರ್‌ಗಳು ನಿಖರವಾಗಿ ಬೌಲಿಂಗ್‌ ದಾಳಿ ಸಂಘಟಿಸಿದ ಪರಿಣಾಮ ನಮಗೆ ಬ್ಯಾಟಿಂಗ್‌ ಕಷ್ಟವಾಯಿತು. ಆದರೂ, ಮಧ್ಯಮ ಕ್ರಮಾಂಕದಲ್ಲಿ ನಮ್ಮ ತಂಡ ತೋರಿದ ದಿಟ್ಟತನ ನಿಜಕ್ಕೂ ಪ್ರಶಂಸಾರ್ಹ. ನೀಶಮ್‌ ಮತ್ತು ಗ್ರ್ಯಾಂಡ್‌ಹೋಮ್‌ ಅದ್ಭುತವಾಗಿ ಆಡಿ ತಂಡಕ್ಕೆ ಸವಾಲಿನ ಮೊತ್ತ ತಂದುಕೊಟ್ಟರು,'' ಎಂದಿದ್ದಾರೆ.

ಟೀಮ್‌ ಇಂಡಿಯಾ ವಿರುದ್ದದ ಸರಣಿ ಬಳಿಕ ಕ್ರಿಸ್‌ ಗೇಲ್‌ ನಿವೃತ್ತಿ!ಟೀಮ್‌ ಇಂಡಿಯಾ ವಿರುದ್ದದ ಸರಣಿ ಬಳಿಕ ಕ್ರಿಸ್‌ ಗೇಲ್‌ ನಿವೃತ್ತಿ!

ನೂರರ ಗಡಿಯೊಳಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಕಿವೀಸ್‌ಗೆ ಆಸರೆಯಾದ ಆಲ್‌ರೌಂಡರ್‌ಗಳಾದ ಜಿಮ್ಮಿ ನೀಶಮ್‌ (ಔಟಾಗದೆ 97) ಮತ್ತು ಕಾಲಿನ್‌ ಡಿ'ಗ್ರ್ಯಾಂಡ್‌ಹೋಮ್‌ (64) 6ನೇ ವಿಕೆಟ್‌ಗೆ 132 ರನ್‌ಗಳ ಅಮೋಘ ಜೊತೆಯಾಟವಾಡಿದರು.

ನ್ಯೂಜಿಲೆಂಡ್‌ ತಂಡ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದು ಒಟ್ಟು 11 ಅಂಕಗಳನ್ನು ಗಳಿಸಿದೆ. ಇನ್ನೊಂದು ಪಂದ್ಯದಲ್ಲಿ ಗೆಲುವು ಸಾಧ್ಯವಾದರೂ ನ್ಯೂಜಿಲೆಂಡ್‌ಗೆ ಸೆಮಿಫೈನಲ್‌ ಸ್ಥಾನ ಖಾತ್ರಿಯಾಗಲಿದೆ. ನ್ಯೂಜಿಲೆಂಡ್‌ ಇದೇ ಶನಿವಾರ ಅಂಕಪಟ್ಟಿಯ ಅಗ್ರಸ್ಥಾನಿ ಆಸ್ಟ್ರೇಲಿಯಾ ವಿರುದ್ಧವೂ ಮತ್ತು ಜುಲೈ 3ರಂದು ಆತಿಥೇಯ ಇಂಗ್ಲೆಂಡ್‌ ವಿರುದ್ಧವೂ ಪೈಪೋಟಿ ನಡೆಸಲಿದೆ.

Story first published: Thursday, June 27, 2019, 16:31 [IST]
Other articles published on Jun 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X