ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಯೋ-ಬಬಲ್ ಒಳಗೆ ವೈರಸ್ ಪ್ರವೇಶಿಸಿದ್ದು ಅಚ್ಚರಿ ತಂದಿದೆ: ಖಲೀಲ್

We were religiously following protocol, surprised virus entered the team bio-bubble: Khaleel Ahmed

ನವದೆಹಲಿ: ಕಳೆದ ವರ್ಷ ವಕ್ಕರಿಸಿಕೊಂಡಿದ್ದ ಕೊರೊನಾ ಕಾಟ ಇನ್ನೂ ಸಂಪೂರ್ಣವಾಗಿ ಬಿಟ್ಟು ಹೋಗಿರಲೇಯಿಲ್ಲ. ಈ ಮಧ್ಯೆಯೇ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 14ನೇ ಆವೃತ್ತಿಯ ಐಪಿಎಲ್ ಅನ್ನು ಭಾರತದಲ್ಲಿ ನಡೆಸಲು ಮುಂದಾಗಿತ್ತು.

ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಸಹೋದರಿ ಕೋವಿಡ್‌-19ಗೆ ಬಲಿಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಸಹೋದರಿ ಕೋವಿಡ್‌-19ಗೆ ಬಲಿ

ಆಟಗಾರರು ಬಯೋ ಬಬಲ್ ಒಳಗಿದ್ದು ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದರಿಂದ ದೇಶದಲ್ಲಿ ಪ್ರಕರಣಗಳು ಎಷ್ಟೇ ಹೆಚ್ಚಾದರೂ ಟೂರ್ನಿಗೇನೂ ಪರಿಣಾಮ ಬೀರೋದಿಲ್ಲ ಎಂದು ಬಿಸಿಸಿಐ ಹೇಳಿತ್ತು. ಅದರಂತೆ ಟೂರ್ನಿ ಶುರುವಾಗಿತ್ತು ಕೂಡ. ಆದರೆ ಟೂರ್ನಿ ಮುಂದುವರೆಯಲು ಕೊರೊನಾ ಅವಕಾಶ ನೀಡಲಿಲ್ಲ. 29 ಪಂದ್ಯಗಳ ಬಳಿಕ 14ನೇ ಆವೃತ್ತಿಯ ಐಪಿಎಲ್ ಅಮಾನತುಗೊಂಡಿತು.

ಆರಂಭದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್‌ಗೆ ಕೋವಿಡ್ ಸೋಂಕು ತಗುಲಿತ್ತು. ಆ ಬಳಿಕ ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್‌ ಕೋಚ್ ಲಕ್ಷ್ಮೀಪತಿ ಬಾಲಾಜಿ ಅವರಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಮುಂದೆ ಡೆಲ್ಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾ ಮತ್ತು ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹಗೆ ಸೋಂಕಿರುವುದು ಕಂಡುಬಂದಿತ್ತು.

ಆರ್‌ಸಿಬಿ ಯುವ ಆಟಗಾರನ ಪ್ರದರ್ಶನಕ್ಕೆ ಪಾರ್ಥಿವ್ ಪಟೇಲ್ ಮೆಚ್ಚುಗೆಆರ್‌ಸಿಬಿ ಯುವ ಆಟಗಾರನ ಪ್ರದರ್ಶನಕ್ಕೆ ಪಾರ್ಥಿವ್ ಪಟೇಲ್ ಮೆಚ್ಚುಗೆ

ಐಪಿಎಲ್ ಅಮಾನತಿನ ಬಗ್ಗೆ ಮಾತನಾಡಿದ ಎಸ್‌ಆರ್‌ಎಚ್ ಖಲೀಲ್ ಅಹ್ಮದ್, 'ನಾವೆಲ್ಲರೂ ಬಯೋ ಬಬಲ್ ಒಳಗಿದ್ದು ಎಲ್ಲಾ ಸೂಚನೆಗಳನ್ನು ಪಾಲಿಸಿದ್ದೆವು. ಅಲ್ಲಿ ಹೊರಗಿನವರಿಗೆ ಸಂಪರ್ಕಿಸಲು ಯಾರಿಗೂ ಅವಕಾಶ ಇರಲಿಲ್ಲ. ಹೀಗಾಗಿ ಬಯೋ ಬಬಲ್‌ ಒಳಗೆ ವೈರಸ್ ಬಂದಿದ್ದು ಕೇಳಿ ನನಗೆ ನಿಜಕ್ಕೂ ಅಚ್ಚರಿಯಾಯ್ತು,' ಎಂದಿದ್ದಾರೆ.

Story first published: Thursday, May 6, 2021, 15:11 [IST]
Other articles published on May 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X