ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಹ ಸಂದರ್ಭ ಎದುರಾದ್ರೆ ಭವಿಷ್ಯದಲ್ಲಿ 2 ಭಾರತೀಯ ತಂಡಗಳು ಕಣಕ್ಕಿಳಿಯಲಿವೆ: ಜಯ್ ಶಾ

Team india

ಕಳೆದ ವರ್ಷ ಟೀಂ ಇಂಡಿಯಾ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಆಡಿದ ಅವಧಿಯಲ್ಲೇ, ಶಿಖರ್ ಧವನ್ ನಾಯಕತ್ವದ ಮತ್ತೊಂದು ತಂಡವು ಶ್ರೀಲಂಕಾದಲ್ಲಿ ಲಿಮಿಟೆಡ್ ಓವರ್‌ ಸರಣಿಯಲ್ಲಿ ಭಾಗಿಯಾಗಿತ್ತು. ಭವಿಷ್ಯದಲ್ಲಿ ಇಂತಹ ಸಮಯ ಮತ್ತೆ ಎದುರಾದ್ರೆ ಎರಡು ಭಾರತೀಯ ತಂಡಗಳನ್ನ ಕಣಕ್ಕಿಳಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ಇದೇ ವೇಳೆಯಲ್ಲಿ ಬಿಸಿಸಿಐ ವಿಶ್ವದ ಇತರೆ ಕ್ರಿಕೆಟ್ ಬೋರ್ಡ್‌ಗಳ ಜೊತೆ ಹಾಗೂ ಐಸಿಸಿ ಜೊತೆಯಲ್ಲಿ ಮಾತುಕತೆ ನಡೆಸುತ್ತಿದ್ದು, ಐಪಿಎಲ್ 2023ರ ಸೀಸನ್‌ ವೇಳೆಯಲ್ಲಿ ಇತರೆ ಯಾವುದೇ ಸರಣಿಗಳು ನಡೆಯದಂತೆ ಪ್ರತ್ಯೇಕ ಸಮಯವನ್ನು ಕೇಳಲಾಗಿದೆ.

ಐರ್ಲೆಂಡ್ ವಿರುದ್ಧದ ಸರಣಿಗೆ ವಿಭಿನ್ನ ತಂಡ

ಐರ್ಲೆಂಡ್ ವಿರುದ್ಧದ ಸರಣಿಗೆ ವಿಭಿನ್ನ ತಂಡ

ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿರುವ ಟೀಂ ಇಂಡಿಯಾ ಜೂನ್ 19ರಂದು ಟಿ20 ಸರಣಿ ಮುಗಿದ ಬಳಿಕ ಐರ್ಲೆಂಡ್‌ಗೆ ಪ್ರವಾಸ ಬೆಳೆಸಲಿದೆ. ಜೂನ್ 26 ಮತ್ತು 28ರಂದು ಐರ್ಲೆಂಡ್‌ನಲ್ಲಿ ಚುಟುಕು ಸರಣಿಯಲ್ಲಿ ಭಾಗವಹಿಸಲಿದೆ. ಈ ತಂಡಕ್ಕೆ ಎನ್‌ಸಿಎ ಕೋಚ್ ವಿವಿಎಸ್ ಲಕ್ಷ್ಮಣ್ ಸೇರಿದಂತೆ ಎನ್‌ಸಿಎ ಕೋಚಿಂಗ್ ಸಿಬ್ಬಂದಿ ಜೊತೆಗೆ ಪ್ರಯಾಣ ಬೆಳೆಸಲಿದ್ದಾರೆ.

ಕಳೆದ ವರ್ಷ ಕೋವಿಡ್ ಕಾರಣಗಳಿಂದಾಗಿ ಇಂಗ್ಲೆಂಡ್ ಪ್ರವಾಸವನ್ನ ಮೊಟಕುಗೊಳಿಸಿ ಟೀಂ ಇಂಡಿಯಾ ವಾಪಸ್ ಬಂದಿತ್ತು. ಹೀಗಾಗಿ ಜುಲೈ 1ರಂದು ಉಳಿದ ಏಕೈಕ ಟೆಸ್ಟ್ ಪಂದ್ಯವನ್ನು ಭಾರತ ಆಡಲಿದೆ. ಹೀಗಾಗಿ ಬಿಸಿಸಿಐ ಐರ್ಲೆಂಡ್ ಮತ್ತು ಇಂಗ್ಲೆಂಡ್‌ಗೆ ಎರಡು ವಿಭಿನ್ನ ತಂಡಗಳನ್ನು ಕಳುಹಿಸಿಕೊಡಲಿದೆ.

ಮುಂದಿನ IPL ಸೀಸನ್‌ನಲ್ಲಿ ಧೋನಿ ಬದಲು CSK ತಂಡದ ನಾಯಕರಾಗಬಲ್ಲ ಐವರು ಆಟಗಾರರು

ಟೀಂ ಇಂಡಿಯಾದ 50 ಆಟಗಾರರು ಸಿದ್ಧರಿರಲಿದ್ದಾರೆ

ಟೀಂ ಇಂಡಿಯಾದ 50 ಆಟಗಾರರು ಸಿದ್ಧರಿರಲಿದ್ದಾರೆ

ಸಮಯಕ್ಕೆ ಅನುಗುಣವಾಗಿ ಭವಿಷ್ಯದಲ್ಲಿ ಅಂತಹ ಸಂದರ್ಭಗಳು ಎದುರಾದ್ರೆ, ಎರಡು ತಂಡಗಳು ಒಂದೇ ಬಾರಿ ಕಣಕ್ಕಿಳಿಯಲಿದ್ದು, ಒಟ್ಟು 50 ಆಟಗಾರರ ತಂಡವನ್ನ ಬಿಸಿಸಿಐ ಸಿದ್ಧಪಡಿಸಲು ಮುಂದಾಲೋಚನೆ ಹೊಂದಿದೆ.

"ನಾನು ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಮತ್ತು ನಮ್ಮ ರೋಸ್ಟರ್‌ನಲ್ಲಿ ನಾವು ಯಾವಾಗಲೂ 50 ಆಟಗಾರರನ್ನು ಹೊಂದಿರುತ್ತೇವೆ. ಭವಿಷ್ಯದಲ್ಲಿ, ಭಾರತೀಯ ಟೆಸ್ಟ್ ತಂಡವು ಒಂದು ದೇಶದಲ್ಲಿ ಸರಣಿಯನ್ನು ಆಡುವ ಸಮಯದಲ್ಲಿಯೇ, ವೈಟ್-ಬಾಲ್ ತಂಡವು ಬೇರೆ ದೇಶದಲ್ಲಿ ಸರಣಿಯಲ್ಲಿ ತೊಡಗಿಸಿಕೊಳ್ಳುತ್ತದೆ. ನಾವು ಆ ದಿಕ್ಕಿನಲ್ಲಿ ಹೋಗುತ್ತಿದ್ದೇವೆ, ಅಲ್ಲಿ ನಾವು ಒಂದೇ ಸಮಯದಲ್ಲಿ ಎರಡು ರಾಷ್ಟ್ರೀಯ ತಂಡಗಳನ್ನು ಸಿದ್ಧಪಡಿಸುತ್ತೇವೆ "ಎಂದು ಜಯ್ ಶಾ ಹೇಳಿದ್ದಾರೆ.

ಮುಂದಿನ ವರ್ಷದಿಂದ ಅಭಿಮಾನಿಗಳ ಸಮ್ಮುಖದಲ್ಲಿ ವಿಭಿನ್ನ ಐಪಿಎಲ್ ಆಯೋಜನೆ; ಸೌರವ್ ಗಂಗೂಲಿ

ವಿರಾಟ್ ಕೊಹ್ಲಿ ಮನಸ್ಸನ್ನು ಗೆದ್ರೆ ಟೀಂ ಇಂಡಿಯಾ ಹಾಗೂ RCB ತಂಡದಲ್ಲಿ ಸ್ಥಾನ ಸಿಗುತ್ತೆ! | Oneindia Kannada
ಐಪಿಎಲ್‌ಗೆ ಪ್ರತ್ಯೇಕ ವಿಂಡೋ ನೀಡಲು ಐಸಿಸಿಯೊಂದಿಗೆ ಚರ್ಚೆ

ಐಪಿಎಲ್‌ಗೆ ಪ್ರತ್ಯೇಕ ವಿಂಡೋ ನೀಡಲು ಐಸಿಸಿಯೊಂದಿಗೆ ಚರ್ಚೆ

ಐಪಿಎಲ್ 2022ರ ಅವಧಿಯಲ್ಲಿ ಕೆಲವು ಅಂತರಾಷ್ಟ್ರೀಯ ಆಟಗಾರರು ತಮ್ಮ ರಾಷ್ಟ್ರೀಯ ತಂಡದ ಪರ ಆಡುವ ಸಲುವಾಗಿ ಟಿ20 ಲೀಗ್‌ನಲ್ಲಿ ಭಾಗವಹಿಸಲು ಹಿಂದೆ ಸರಿದರು. ಹೀಗಾಗಿ ಐಪಿಎಲ್ ಅವಧಿಯಲ್ಲಿ ಯಾವುದೇ ತೊಂದರೆ ಎದುರಾಗದಂತೆ ನೋಡಲು ಬಿಸಿಸಿಐ ಯೋಜನೆ ರೂಪಿಸಿದ್ದು, ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಜೊತೆಗೆ ಮಾತುಕತೆ ನಡೆಸುತ್ತಿದೆ.

ಕ್ಯಾಲೆಂಡರ್ ಇಯರ್‌ನಲ್ಲಿ ಐಪಿಎಲ್‌ಗೆ ಪ್ರತ್ಯೇಕವಾದ ವಿಂಡೋವನ್ನು ನೀಡಲು ಹಾಗೂ ಅಂತರಾಷ್ಟ್ರೀಯ ಕ್ಯಾಲೆಂಡರ್‌ನಲ್ಲಿ ಪ್ರತ್ಯೇಕ ಸಮಯ ಮೀಸಲಿಡಲು ಕೇಳಲಾಗಿದೆ.

"ಇದು ನಾವು ಕೆಲಸ ಮಾಡಿದ ಒಂದು ಅಂಶವಾಗಿದೆ. ಮುಂದಿನ ಐಸಿಸಿ ಎಫ್‌ಟಿಪಿ ಕ್ಯಾಲೆಂಡರ್‌ನಿಂದ, ಐಪಿಎಲ್ ಅಧಿಕೃತ ಎರಡೂವರೆ ತಿಂಗಳ ಅವಧಿಯನ್ನು ಹೊಂದಿರುತ್ತದೆ, ಇದರಿಂದಾಗಿ ಎಲ್ಲಾ ಉನ್ನತ ಅಂತರರಾಷ್ಟ್ರೀಯ ಕ್ರಿಕೆಟಿಗರು ಭಾಗವಹಿಸಬಹುದು. ನಾವು ವಿವಿಧ ಮಂಡಳಿಗಳು ಮತ್ತು ಐಸಿಸಿಯೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದೇವೆ, "ಎಂದು ಜಯ್ ಶಾ ಹೇಳಿದರು.

Story first published: Wednesday, June 15, 2022, 16:14 [IST]
Other articles published on Jun 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X