ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ವಿರುದ್ಧ ನಾವು 500 ರನ್ ಬಾರಿಸುತ್ತೇವೆ: ಸರ್ಫರಾಜ್ ಅಹ್ಮದ್

We will try to score 500 runs against Bangladesh: Sarfaraz Ahmed

ಲಂಡನ್, ಜುಲೈ 5: ಐಸಿಸಿ ವಿಶ್ವಕಪ್ 2019ರಲ್ಲಿ ಪಾಕಿಸ್ತಾನ ತಂಡದ ಸೆಮಿಫೈನಲ್ ಹಾದಿ ಬಹುತೇಕ ಮುಚ್ಚಿದೆ. ಬಾಂಗ್ಲಾದೇಶ ವಿರುದ್ಧ ಇನ್ನೊಂದೇ ಪಂದ್ಯ ಬಾಕಿ ಉಳಿದಿದೆಯಾದರೂ ಈ ಪಂದ್ಯ ಗೆದ್ದರೂ ಪಾಕ್‌ಗೆ ಸೆಮಿಫೈನಲ್ ಪ್ರವೇಶಿಸುವುದು ಪವಾಡದ ಮಾತು ಎಂಬಂತಿದೆ. ಆದರೆ ತಂಡದ ನಾಯಕ ಸರ್ಫರಾಜ್ ಅಹ್ಮದ್ ಅವರು ಬಾಂಗ್ಲಾ ವಿರುದ್ಧ ನಾವು 500 ರನ್ ಗಳಿಸುತ್ತೇವೆ ಎಂದಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಆರಂಭಿಕ ಪಂದ್ಯಗಳನ್ನು ಹೀನಾಯವಾಗಿ ಸೋಲುತ್ತಾ ಸಾಗಿದ್ದರಿಂದ ನೆಟ್ ರನ್ ರೇಟ್ ಕಡಿಮೆಗೊಳಿಸಿಕೊಂಡಿರುವ ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್ ಪ್ರವೇಶ ಕೈಗಿದ್ದರೂ ಬಾಯಿಗಿಲ್ಲ ಎಂಬಂತಾಗಿದೆ. ಸೆಮಿಫೈನಲ್ ಪ್ರವೇಶಿಸಬೇಕಾದರೆ ಪಾಕ್ ತಂಡ ಬಾಂಗ್ಲಾ ವಿರುದ್ಧ ದಾಖಲೆಯ ರನ್‌ನಲ್ಲಿ ಗೆಲುವು ಗಳಿಸಬೇಕಿದೆ. ಆದರೆ ಈಗಲೂ ಅಹ್ಮದ್, ತಂಡದ ಗೆಲುವಿನ ಬಗ್ಗೆ ಅದಮ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶ vs ಪಾಕಿಸ್ತಾನ, ಜೂನ್ 5, Live ಸ್ಕೋರ್‌ಕಾರ್ಡ್

1
43686

ಬಾಂಗ್ಲಾ ವಿರುದ್ಧ ಪಾಕಿಸ್ತಾನ ನಿಜಕ್ಕೂ 500 ರನ್ ಗಳಿಸಬಲ್ಲದಾ? ಹಿಂದೆ ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದು ಬಾರಿಸಿದ ಅತ್ಯಧಿಕ ರನ್ ಎಷ್ಟು? ಯಾವ ತಂಡ? ಎಂಬಿತ್ಯಾದಿ ಸಂಗತಿಗಳಿಗೆ ಸಂಬಂಧಿಸಿ ಇಲ್ಲೊಂದಿಷ್ಟು ಮಾಹಿತಿಯಿದೆ.

ಬಾಂಗ್ಲಾ 50 ರನ್‌ಗೆ ಆಲ್‌ಔಟ್!?

ಬಾಂಗ್ಲಾ 50 ರನ್‌ಗೆ ಆಲ್‌ಔಟ್!?

'ವಾಸ್ತವತೆ ಬಗ್ಗೆ ನಮಗೆ ಅರಿವಿದೆ. ಆದರೆ ನಾವು ಬಾಂಗ್ಲಾ ವಿರುದ್ಧ 500 ರನ್ ಗಳಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ. 500 ರನ್ ಗಳಿಸಿ ನಾವು ಬಾಂಗ್ಲಾವನ್ನು 50 ರನ್ ಒಳಗೆ ಆಲ್ ಔಟ್ ಮಾಡುತ್ತೇವೆ. ಇದರರ್ಥವೇನಂದರೆ ನಾವು ಬಾಂಗ್ಲಾ ವಿರುದ್ಧ 316 ರನ್ ಜಯವಂತೂ ಗಳಿಸುತ್ತೇವೆ' ಎಂದು ಅಹ್ಮದ್ ಹೇಳಿದ್ದಾರೆ. ಹಾಗಂತ ಪಾಕಿಸ್ತಾನವನ್ನು ತೀರಾ ಕಡೆಗಣಿಸುವಂತೆಯೂ ಇಲ್ಲ. ಯಾಕೆಂದರೆ ಪಾಕ್ ಇದೇ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 348 ರನ್ ಬಾರಿಸಿ 14 ರನ್‌ ಗಳ ಅಚ್ಚರಿಯ ಗೆಲುವು ಗಳಿಸಿತ್ತು.

ನೆಟ್ ರನ್ ರೇಟ್ ಬೇಕೇಬೇಕು

ನೆಟ್ ರನ್ ರೇಟ್ ಬೇಕೇಬೇಕು

ವಿಶ್ವಕಪ್ ಅಂಕಪಟ್ಟಿಯಲ್ಲಿ ಈಗ ಪಾಕಿಸ್ತಾನ 5ನೇ ಸ್ಥಾನದಲ್ಲಿದ್ದು, 9 ಪಾಯಿಂಟ್ ಕಲೆ ಹಾಕಿದೆ. 4ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ 11 ಅಂಕ ಗಳಿಸಿದೆ. ನ್ಯೂಜಿಲೆಂಡ್‌ಗೆ ಇನ್ನು ಪಂದ್ಯಗಳಿಲ್ಲ. ಬಾಂಗ್ಲಾ ವಿರುದ್ಧ ಪಾಕ್ ಗೆದ್ದರೆ ಕಿವೀಸ್‌ಗೆ ಸಮವಾದ 11 ಅಂಕವೇನೋ ಸಿಗಲಿದೆ. ಆದರೆ ನ್ಯೂಜಿಲೆಂಡ್ +0.175 ನೆಟ್ ರನ್ ರೇಟ್ ಹೊಂದಿರುವುದರಿಂದ ನ್ಯೂಜಿಲೆಂಡ್ ಹಿಂದಿಕ್ಕಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಪಾಕಿಸ್ಥಾನ ರನ್ ರೇಟ್ ಹೆಚ್ಚಿಸಿಕೊಳ್ಳಲೇಬೇಕು.

ಫಲಿತಾಂಶ ಹೀಗೆ ಬಂದೀತಾ?!

ಫಲಿತಾಂಶ ಹೀಗೆ ಬಂದೀತಾ?!

ಸದ್ಯದ ಸ್ಥಿತಿಯಲ್ಲಿ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಬೇಕಾದರೆ ಫಲಿತಾಂಶ ಹೀಗೆ ಬರಲೇಬೇಕು. ಉದಾಹರಣೆಗೆ ಪಾಕಿಸ್ತಾನ 350 ಸ್ಕೋರ್ ಮಾಡಿದರೆ, ಅದು ಬಾಂಗ್ಲಾ ಎದುರು 311 ರನ್‌ಗಳಿಂದ ಜಯಗಳಿಸಬೇಕು. ಪಾಕ್ 400 ಸ್ಕೋರ್ ಮಾಡಿದರೆ, 316 ರನ್‌ಗಳಿಂದ ಗೆಲ್ಲಬೇಕು. ಪಾಕಿಸ್ತಾನ 450 ಸ್ಕೋರ್ ಮಾಡಿದರೆ, 321 ರನ್‌ಗಳಿಂದ ಜಯಗಳಿಸಲೇಬೇಕು. ಪಾಕ್ ಹೀಗೆ ದಾಖಲೆ ರನ್ ಅಂತರದಲ್ಲಿ ಗೆಲುವು ಸಾಧಿಸಿದರೆ ಮಾತ್ರ ಕಿವೀಸ್ ಅನ್ನು ರನ್‌ ರೇಟ್‌ನಿಂದ ಹಿಂದಿಕ್ಕಬಲ್ಲದು.

ಏಕದಿನ ಹಿಂದಿನ ದಾಖಲೆಗಳು

ಏಕದಿನ ಹಿಂದಿನ ದಾಖಲೆಗಳು

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಅತೀ ಹೆಚ್ಚು ರನ್ ಗಳಿಸಿದ್ದೆಂದರೆ ಅದು ಇಂಗ್ಲೆಂಡ್. ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ 481 ರನ್ ಸಿಡಿಸಿತ್ತು. ಏಕದಿನದಲ್ಲಿ ಪಾಕಿಸ್ತಾನ ತಂಡ ಜಿಂಬಾಬ್ವೆ ವಿರುದ್ಧ 399 ರನ್ ಬಾರಿಸಿದ್ದ ದಾಖಲೆ ಹೊಂದಿದೆ. ಬಾಂಗ್ಲಾ ವಿರುದ್ಧ ಪಾಕಿಸ್ತಾನವೇನಾದರೂ 500 ರನ್ ಗಳಿಸಿದರೆ ಈ ಸಾಧನೆ ಮೆರೆದ ವಿಶ್ವದ ಮೊದಲ ತಂಡವಾಗಿ ಪಾಕ್ ಇತಿಹಾಸ ನಿರ್ಮಿಸಲಿದೆ. ಟಾಸ್ ವಿನ್ನಾದರೆ ಪಾಕ್ ತಂಡ ಬ್ಯಾಟಿಂಗ್ ಆಯ್ದು 500 ರನ್ ಬಾರಿಸುತ್ತೆ ಅನ್ನೋಣ; ಆದ್ರೆ ಬಾಂಗ್ಲಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರೆ?! ಪಾಕ್ ಸೆಮಿಫೈನಲ್ ಆಸೆ ಮಟ್ಯಾಶ್!

Story first published: Friday, July 5, 2019, 12:44 [IST]
Other articles published on Jul 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X