ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲುಬೇಕಾದ ಅಂಶವನ್ನು ಹೇಳಿದ ಹರ್ಭಜನ್ ಸಿಂಗ್

ಭಾರತೀಯ ಕ್ರಿಕೆಟ್‌ನ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಟೀಮ್ ಇಂಡಿಯಾದಲ್ಲಿ ಮ್ಯಾಚ್‌ವಿನ್ನರ್‌ಗಳ ಸಂಖ್ಯೆ ಕಡಿಮೆಯಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೊಹಿತ್ ಶರ್ಮಾ ಅವರನ್ನು ಹೊರತುಪಡಿಸಿ ಮತ್ತಷ್ಟು ಮ್ಯಾಚ್‌ವಿನ್ನರ್‌ಗಳು ತಂಡಕ್ಕೆ ಅಗತ್ಯವಿದ್ದಾರೆ. ಕೆಎಲ್ ರಾಹುಲ್ ಅವರಂತೆ ಮತ್ತಷ್ಟು ಮ್ಯಾಚ್‌ವಿನ್ನರ್‌ಗಳನ್ನು ತಂಡ ರೂಪಿಸಬೇಕಿದೆ ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

"ನಾವು ಇಬ್ಬರು ಅಥವಾ ಮೂವರು ಆಟಗಾರರನ್ನು ನಂಬಿಕೊಂಡು ಆಟಕ್ಕಿಳಿಯುವುದನ್ನು ನಿಲ್ಲಿಸಬೇಕು. ಕಳೆದ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಕೀ ಆಟಗಾರನಾಗಿದ್ದರು. ವಿರಾಟ್ ಕೊಹ್ಲಿ ಯಾವಾಗಲೂ ಇರುತ್ತಾರೆ. ಆದರೆ ನೀವು ವಿಶ್ವಕಪ್‌ನಂತಾ ಟೂರ್ನಿಯನ್ನು ಗೆಲ್ಲಬೇಕಾದರೆ ಮತ್ತಷ್ಟು ಮ್ಯಾಚ್‌ ವಿನ್ನರ್‌ಗಳನ್ನು ತಂಡದಲ್ಲಿ ಹೊಂದಿರಬೇಕಾಗುತ್ತದೆ" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಭಾರತ vs ಆಸೀಸ್: ಗಾಯ ಗುಣವಾಗುತ್ತಿದೆ, ಹೋರಾಟಕ್ಕೆ ಸಿದ್ಧ-ರೋಹಿತ್

ಒತ್ತಡ ನಿಭಾಯಿಸಬಲ್ಲ ಆಟಗಾರರು

ಒತ್ತಡ ನಿಭಾಯಿಸಬಲ್ಲ ಆಟಗಾರರು

"ಒತ್ತಡದ ಪಂದ್ಯಗಳಲ್ಲಿ ಇಬ್ಬರು ಆಟಗಾರರು ಬೇಗನೆ ವಿಕೆಟ್ ಒಪ್ಪಿಸಿದರೆ ಅಂತಾ ಆಟಗಾರರ ಸ್ಥಾನವನ್ನು ತುಂಬಲು ಇತರ ಆಟಗಾರರು ಸಿದ್ದರಿರಬೇಕಾಗುತ್ತದೆ ಹಾಗೂ ತಂಡಕ್ಕಾಗಿ ನೀವು ಕೂಡ ಆ ಜವಾಬ್ಧಾರಿಯನ್ನು ನಿರ್ವಹಿಸಲು ಸಾಧ್ಯವಿದೆ ಎಂದು ನಂಬಿಕೆ ಬರುವಂತೆ ಮಾಡಬೇಕು" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಮತ್ತಷ್ಟು ಮ್ಯಾಚ್ ವಿನ್ನರ್‌ಗಳು ಬೇಕು

ಮತ್ತಷ್ಟು ಮ್ಯಾಚ್ ವಿನ್ನರ್‌ಗಳು ಬೇಕು

ಭಾರತೀಯ ಕ್ರಿಕೆಟ್‌ನ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಟೀಮ್ ಇಂಡಿಯಾದಲ್ಲಿ ಮ್ಯಾಚ್‌ವಿನ್ನರ್‌ಗಳ ಸಂಖ್ಯೆ ಕಡಿಮೆಯಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೊಹಿತ್ ಶರ್ಮಾ ಅವರನ್ನು ಹೊರತುಪಡಿಸಿ ಮತ್ತಷ್ಟು ಮ್ಯಾಚ್‌ವಿನ್ನರ್‌ಗಳು ತಂಡಕ್ಕೆ ಅಗತ್ಯವಿದ್ದಾರೆ. ಕೆಎಲ್ ರಾಹುಲ್ ಅವರಂತೆ ಮತ್ತಷ್ಟು ಮ್ಯಾಚ್‌ವಿನ್ನರ್‌ಗಳನ್ನು ತಂಡ ರೂಪಿಸಬೇಕಿದೆ ಎಂದು ಹರ್ಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಕೆಲವೇ ಆಟಗಾರರನ್ನು ನೆಚ್ಚಿಕೊಂಡು ಇರಬಾರದು

ಕೆಲವೇ ಆಟಗಾರರನ್ನು ನೆಚ್ಚಿಕೊಂಡು ಇರಬಾರದು

ಇನ್ನು ಇದೇ ಸಂದರ್ಭದಲ್ಲಿ 2011ರ ವಿಶ್ವಕಪ್‌ನಲ್ಲಿ ಭಾರತ ತಂಡ ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದ ಸಂಗತಿಯನ್ನು ಹೇಳಿದರು. ಅಂದು ಭಾರತ ತಂಡದಲ್ಲಿ ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಮತ್ತು ಎಂಎಸ್ ಧೋನಿ ಸಹಿತ ಅನೇಕ ಸ್ಟಾರ್ ಆಟಗಾರರು ಇದ್ದರು. ಇವರೆಲ್ಲಾ ಯಾವುದೇ ದಿನದಲ್ಲಾದರೂ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲಂತಾ ಕ್ಷಮತೆಯನ್ನು ಹೊಂದಿದ್ದರು.

2011ರ ವ ವಿಶ್ವಕಪ್ ಘಟನೆ ನೆನಪಿಸಿದ ಭಜ್ಜಿ

2011ರ ವ ವಿಶ್ವಕಪ್ ಘಟನೆ ನೆನಪಿಸಿದ ಭಜ್ಜಿ

2011ರ ವಿಶ್ವಕಪ್‌ನಲ್ಲಿ ಅದೇ ಆಗಿತ್ತು. ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಶೀಘ್ರವಾಗಿ ವಿಕೆಟ್ ಒಪ್ಪಿಸಿದ್ದರು. ಆದರೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತಿದ್ದ ನಮಗೆ ಗೌತಮ್ ಗಂಭೀರ್ ಈ ಜವಾಬ್ಧಾರಿಯನ್ನು ನಿರ್ವಹಿಸಬಲ್ಲರು, ಎಂಎಸ್ ಧೋನಿ ಈ ಜವಾಬ್ಧಾರಿಯನ್ನು ನಿರ್ವಹಿಸಬಲ್ಲರು ಅಥವಾ ಯುವರಾಜ್ ಸಿಂಗ್ ಖಂಡಿತಾ ಈ ಕರ್ತವ್ಯ ನಿರ್ವಹಿಸಲಿದ್ದಾರೆ. ಇವರೆಲ್ಲರಿಂದಲೂ ಸಾಧ್ಯವಾಗದಿದ್ದರೆ ನಾನು ಅದನ್ನು ಮಾಡುತ್ತೇನೆ. ಈ ನಂಬಿಕೆ ಪ್ರತಿಯೊಬ್ಬ ಆಟಗಾರನಲ್ಲೂ ಬಂದಿತ್ತು ಎಂದು ಹರ್ಭಜನ್ ಸಿಂಗ್ ವಿವರಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, November 22, 2020, 16:47 [IST]
Other articles published on Nov 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X