ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ, ಡ್ರೆಸ್ಸಿಂಗ್ ರೂಮ್‌ಗೆ ತೆರಳಿ ಅತ್ತಿದ್ದೆ: ಶ್ರೇಯಸ್ ಐಯ್ಯರ್

Went into dressing room and cried: Iyer revealed his state of mind after picking up the injuryy

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಪ್ರತಿಭಾನ್ವಿತ ಆಟಗಾರ ಶ್ರೇಯಸ್ ಐಯ್ಯರ್ ಸುದೀರ್ಘ ಆರು ತಿಂಗಳ ಬಳಿಕ ಕ್ರಿಕೆಟ್ ಚಟುವಟಿಕೆಗೆ ಮರಳಲು ಸಜ್ಜಾಗಿದೆ. ಗಾಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಐಯ್ಯರ್ ಈಗ ಸಂಪೂರ್ಣ ಚೇತರಿಕೆ ಕಂಡಿದ್ದು ಐಪಿಎಲ್‌ನ ಎರಡನೇ ಚರಣದ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಮುಂಬೈ ಮೂಲದ ಆಟಗಾರ ಐಯ್ಯರ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಸಂದರ್ಭದಲ್ಲಿ ಫೀಲ್ಡಿಂಗ್ ವೇಳೆ ಭುಜದ ನೋವಿಗೆ ಒಳಗಾಗಿದ್ದರು. ಭುಜದ ಮೂಳೆಯಲ್ಲಿ ಸ್ಥಳಾಂತರವಾಗಿದ್ದ ಕಾರಣ ಅವರು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಸುದೀರ್ಘ ವಿಶ್ರಾಂತಿ ಪಡೆದಿದ್ದಾರೆ.

ಈಗ ಸುಮಾರು ಆರು ತಿಂಗಳ ಬಳಿಕ ಶ್ರೇಯಸ್ ಐಯ್ಯರ್ ಮತ್ತೆ ಕ್ರಿಕೆಟ್‌ ಆಡಲು ಸಜ್ಜಾಗಿದ್ದಾರೆ. ಇದಕ್ಕೂ ಮುನ್ನ ಐಯ್ಯರ್ ಮಾಧ್ಯಮವೊಂದಕ್ಕೆ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಬಿದ್ದ ಸಂದರ್ಭದಲ್ಲಿ ತಮ್ಮ ಮನದ್ಥಿತಿ ಯಾವ ರೀತಿ ಇತ್ತು ಎಂಬುದನ್ನು ಶ್ರೇಯಸ್ ಐಯ್ಯರ್ ವಿವರಿಸಿದ್ದಾರೆ.

"ಈಗ ನಾನು ತುಂಬಾ ಅದ್ಭುತವಾಗಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಪಯಣ ತುಂಬಾ ಅದ್ಭುತವಾಗಿತ್ತು. ಈ ಕ್ಷಣದಲ್ಲಿ ನನಗೆ ಯಾವುದೇ ಹಿಂಜರಿಕೆಯಿಲ್ಲ. ಆದರೆ ಗಾಯಗಿಂಡ ತಕ್ಷಣ ನಾನು ಆಘಾತಗೊಂಡಿದ್ದೆ. ನನಗೆ ಆ ಕ್ಷಣದಲ್ಲಿ ನಾನು ಏನು ಮಾಡಬೇಕೆಂದು ತೋಚಲಿಲ್ಲ. ನಾನು ಡ್ರೆಸ್ಸಿಂಗ್ ರೂಮ್‌ಗೆ ತೆರಳಿ ಅತ್ಯಬಿಟ್ಟಿದ್ದೆ. ಇದನ್ನು ಅರಗಿಸಿಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿದಿತ್ತು. ಆದರೆ ಅಂತಿಮವಾಗಿ ಇದೆಲ್ಲವನ್ನು ನೀವು ದಾಟಿಕೊಂಡೇ ಸಾಗಬೇಕಿದೆ" ಎಂದು ತಮ್ಮ ಭಾವನೆಯನ್ನು ವಿವರಿಸಿದ್ದಾರೆ ಶ್ರೇಯಸ್ ಐಯ್ಯರ್.

ಫ್ಯಾರಾಲಿಂಪಿಕ್ಸ್: ಪದಕ ಗೆದ್ದ ನಿಶಾದ್, ವಿನೋದ್ ಹಿಂದಿನ ಸ್ಪೂರ್ತಿಯ ಕಥೆ!ಫ್ಯಾರಾಲಿಂಪಿಕ್ಸ್: ಪದಕ ಗೆದ್ದ ನಿಶಾದ್, ವಿನೋದ್ ಹಿಂದಿನ ಸ್ಪೂರ್ತಿಯ ಕಥೆ!

"ಅದು ನಿಜವಾಗಿಯೂ ಹಿನ್ನಡೆ, ಆಗ ನೀವು ಸ್ಪೂರ್ತಿಯನ್ನು ಪಡೆದುಕೊಳ್ಳಬೇಕು ಮತ್ತು ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಬೇಕು. ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದಾಗ ಅದನ್ನು ಅರಗಿಸಿಕೊಳ್ಳುವುದು ಕೂಡ ಕಷ್ಟವಾಗಿತ್ತು. ಗಾಯಗೊಳ್ಳುವ ಮೊದಲು ನಾನು ಉತ್ತಮವಾಗು ತರಬೇತಿಯನ್ನು ಪಡೆಯುತ್ತಾ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದೆ. ನಾನಾಗ ಉತ್ತುಂಗದಲ್ಲಿದ್ದೆ. ಆದರೆ ಇದ್ದಕ್ಕಿದ್ದಂತೆಯೇ ಈ ಸಂದರ್ಭದಲ್ಲಿ ನನಗೆ ವಿಚಿತ್ರವಾದ ಗಾಯ ಉಂಟಾಯಿತು" ಎಂದು ಶ್ರೇಯಸ್ ಐಯ್ಯರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಶ್ರೇಯಸ್ ಐಯ್ಯರ್ ತಮ್ಮ ಮುಂದಿನ ಗುರಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಸಂಪಾದಿಡುವುದಾಗಿದೆ ಎಂದಿದ್ದಾರೆ. "ವೈಯಕ್ತಿಕವಾಗಿ ನಾನು ಹೇಳಬೇಕೆಂದರೆ ನನಗೆ ಈಗ ಅತ್ಯುತ್ತಮ ಅವಕಾಶಗಳು ಇದೆ. ಗಾಯದಿಂದ ಗುಣಮುಖನಾಗಿ ಹಿರಬರುತ್ತಿದ್ದಂತೆಯೇ ಐಪಿಎಲ್ ಟೂರ್ನಿ ನಡೆಯಲಿದೆ. ಅದಾದ ಬಳಿಕ ಟಿ20 ವಿಶ್ವಕಪ್ ನಡೆಯಲಿದೆ. ಇದು ಎರಡು ಕೂಡ ಭಾರತೀಯ ಕ್ರಿಕೆಟಿಗರಿಗೆ ಅತ್ಯುನ್ನತವಾದ ವೇದಿಕೆ. ಇಂತಾ ಸಂದರ್ಭದಲ್ಲಿ ತಂಡದ ಭಾಗವಾಗಬೇಕೆಂದು ಪ್ರತಿಯೊಬ್ಬರು ಕೂಡ ಕನಸು ಕಾಣುತ್ತಿರುತ್ತಾರೆ" ಎಂದು ಶ್ರೇಯಸ್ ಐಯ್ಯರ್ ಹೇಳಿದ್ದಾರೆ.

ಈ ಎಲ್ಲಾ ಕಾರಣಗಳು ಕಳೆದ ನಾಲ್ಕು ತಿಂಗಳಲ್ಲಿ ನನಗೆ ಹೆಚ್ಚಿನ ಶಕ್ತಿ ತುಂಬಲು ಸಹಾಯ ಮಾಡಿವೆ. ಈ ಅವಧಿಯಲ್ಲಿ ನಾನು ಹೆಚ್ಚು ವಿಶ್ರಾಂತಿಯ ದಿನಗಳನ್ನು ಪಡೆಯದೆ ಶ್ರಮವಹಿಸಿ, ಚುರುಕಾಗಿ ಕೆಲಸ ಮಾಡಲು ನನ್ನ ಮನಸ್ಥಿತಿಯನ್ನು ಸಿದ್ಧಪಡಿಸಿಕೊಂಡಿದ್ದೆ. ಈಗ ನಾನು ಆಡಲಿರುವ ಪಂದ್ಯಗಳಿಗಾಗಿ ನಿಜವಾಗಿಯೂ ಎದುರು ನೋಡುತ್ತಿದ್ದೇನೆ. ಇದು ನಿಜವಾಗಿಯೂ ಅದ್ಭುತವಾಗಿ ಇರಲಿದೆ ಎಂಬ ವಿಶ್ವಾಸ ನನಗಿದೆ" ಎಂದು ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಐಯ್ಯರ್ ಪ್ರತಿಕ್ರಿಯೆ ನೀಡಿದ್ದಾರೆ.

ಇಂಜುರಿಯಿಂದ ಚೇತರಿಸಿಕೊಂಡ ಶ್ರೇಯಸ್ ! | Oneindia Kannada

ಈ ಬಾರಿಯ ಐಪಿಎಲ್‌ಗಾಗಿ ಈಗ ಶ್ರೇಯಸ್ ಐಯ್ಯರ್ ಸಂಪೂರ್ಣವಾಗಿ ಸಜ್ಜಾಗಿದ್ದಾರೆ. ಸೆಪ್ಟೆಂಬರ್ 19ರಿಮದ ಐಪಿಎಲ್‌ನ ಉಉಳಿದ ಪಂದ್ಯಗಳು ಯುಎಇನಲ್ಲಿ ನಡೆಯಲಿದೆ. ಈ ಬಾರಿಯ ಆವೃತ್ತಿಯ ಮೊದಲ ಚರಣದ ಪಂದ್ಯಗಳಲ್ಲಿ ಶ್ರೇಯಸ್ ಐಯ್ಯರ್ ಗಾಯಗೊಂಡಿದ್ದ ಕಾರಣದಿಂದಾಗಿ ರಿಷಭ್ ಪಂತ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ನೀಡಲಾಗಿತ್ತು. ಪಂತ್ ನಾಯಕತ್ವದಲ್ಲಿ ಡೆಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿದೆ. ಈಗ ಶ್ರೇಯಸ್ ಐಯ್ಯರ್ ಕೂಡ ಐಪಿಎಲ್‌ನ ಉಳಿದ ಪಂದ್ಯಗಳಿಗೆ ಲಭ್ಯವಾಗಿದ್ದು ನಾಯಕತ್ವದ ಜವಾಬ್ಧಾರಿಯನ್ನು ಯಾರು ಹೊತ್ತುಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Story first published: Monday, August 30, 2021, 17:36 [IST]
Other articles published on Aug 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X