ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಪ್ರವಾಸಕ್ಕೆ ವೆಸ್ಟ್ ಇಂಡೀಸ್ ಮಂಡಳಿಯಿಂದ ಅಧಿಕೃತ ಮುದ್ರೆ

West Indies Approve Bio-secure Test Tour Of England

ಇಂಗ್ಲೆಂಡ್‌ಗೆ ಪ್ರವಾಸ ತೆರಳಿ ಸರಣಿಯಲ್ಲಿ ಪಾಲ್ಗೊಳ್ಳುವ ಪ್ರಸ್ತಾಪಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧಿಕೃತ ಮುದ್ರೆಯನ್ನು ಒತ್ತಿದೆ. ಹೀಗಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಜೀವ ಸುರಕ್ಷತಾ ಪರಿಸರದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವುದು ಖಚಿತವಾಗಿದೆ.

ಈ ಹಿಂದೆ ನಿಗದಿಯಾಗಿದ್ದಂತೆ ಜೂನ್ ತಿಂಗಳಲ್ಲಿ ಈ ಸರಣಿ ಆಯೋಜನೆಯಾಗಬೇಕಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಪ್ರವಾಸವನ್ನು ಜುಲೈನಲ್ಲಿ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಪ್ರಕಟಣೆಯ ಮೂಲಕ ಈ ಪ್ರವಾಸಕ್ಕೆ ಅನುಮೋದನೆ ನೀಡಿರುವ ವಿಚಾರವನ್ನು ಅಧಿಕೃತವಾಗಿ ತಿಳಿಸಿದೆ.

ಸಾರ್ವಕಾಲಿಕ ಶ್ರೇಷ್ಠ ಆರ್‌ಸಿಬಿ ತಂಡದಲ್ಲಿ ನಾಲ್ವರು ಕನ್ನಡಿಗರಿಗೆ ಸ್ಥಾನಸಾರ್ವಕಾಲಿಕ ಶ್ರೇಷ್ಠ ಆರ್‌ಸಿಬಿ ತಂಡದಲ್ಲಿ ನಾಲ್ವರು ಕನ್ನಡಿಗರಿಗೆ ಸ್ಥಾನ

ಈ ಪ್ರಕಟಣೆಯಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ "ಪ್ರವಾಸದ ಅವಧಿಯವರೆಗೂ ಆಟಗಾರರು ಮತ್ತು ಸಿಬ್ಬಂದಿಯನ್ನು ಜೈವಿಕ ಸುರಕ್ಷಿತ ವಾತಾವರಣದಲ್ಲಿ ಇರಿಸಲು ವಿವರವಾದ ಯೋಜನೆಗಳನ್ನು ಸಿಡಬ್ಲ್ಯುಐ ಸ್ವೀಕರಿಸಿದೆ ಮತ್ತು ಪರಿಶೀಲಿಸಿದೆ. ಎಲ್ಲಾ ಪಂದ್ಯಗಳನ್ನು ಪ್ರೇಕ್ಷಕರಿಲ್ಲದೆಯೇ ಆಡಲಾಗುತ್ತದೆ." ಎಂದು ತಿಳಿಸಿದೆ.

ಮೂರು ಟೆಸ್ಟ್ ಪಂದ್ಯಗಳ ಈ ಸರಣಿಯನ್ನು ಜುಲೈ 8, 16 ಮತ್ತು 24 ರಂದು ಮೂರು ಕ್ರೀಡಾಂಗಣದಲ್ಲಿ ನಡೆಸುವ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಪ್ರಸ್ತಾಪವನ್ನು ಸಲ್ಲಿಸಿದೆ. ಹ್ಯಾಂಪ್‌ಶೈರ್‌ನ ಏಗಾಸ್ ಬೌಲ್ ಮತ್ತು ಲಂಕಾಷೈರ್‌ನ ಓಲ್ಡ್ ಟ್ರಾಫೋರ್ಡ್‌ನಲ್ಲಿ ಟೆಸ್ಟ್ ಪ್ರಾರಂಭವಾಗಲಿದೆ ನಡೆಯಲಿದೆ.

ಜೆಪಿ ಡುಮಿನಿಯ ಆಲ್ ಟೈಮ್ ಐಪಿಎಲ್ ತಂಡದಲ್ಲಿ ಇಬ್ಬರೇ ಭಾರತೀಯರು!ಜೆಪಿ ಡುಮಿನಿಯ ಆಲ್ ಟೈಮ್ ಐಪಿಎಲ್ ತಂಡದಲ್ಲಿ ಇಬ್ಬರೇ ಭಾರತೀಯರು!

ಈ ಮಧ್ಯೆ ಪ್ರವಾಸಕ್ಕೆ ಖಾಸಗಿ ಚಾರ್ಟರ್ ವಿಮಾನಗಳನ್ನು ಬಳಸುತ್ತದೆ ಮತ್ತು ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗೆ ವೈದ್ಯಕೀಯ ತಪಾಸಣೆ ಮತ್ತು ವೈಯಕ್ತಿಕ COVID-19 ಪರೀಕ್ಷೆ ನಡೆಯಲಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.

Story first published: Saturday, May 30, 2020, 12:07 [IST]
Other articles published on May 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X