ಟಿ20 ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ವೆಸ್ಟ್ ಇಂಡೀಸ್ ಓಪನರ್, 77 ಎಸೆತಗಳಲ್ಲಿ ಅಜೇಯ 205 ರನ್!

ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ರಖಿಮ್ ಕಾರ್ನ್‌ವಾಲ್ ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸುವ ಮೂಲಕ ಅಬ್ಬರಿಸಿದ್ದಾರೆ. ಅಟ್ಲಾಂಟಾ ಓಪನ್ 2022 ಲೀಗ್‌ನಲ್ಲಿ, ಅವರು ಅಟ್ಲಾಂಟಾ ಫೈರ್‌ ಆಡಿದ್ದು, ಸ್ಕ್ವೇರ್ ಡ್ರೈವ್ ತಂಡದ ವಿರುದ್ಧ 77 ಎಸೆತಗಳಲ್ಲಿ ಅಜೇಯ 205 ರನ್ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ.

ಮೈದಾನದ ಮೂಲೆ ಮೂಲೆಗೆ ಚೆಂಡನ್ನ ಅಟ್ಟಿದ ರಖಿಮ್ ಕಾರ್ನ್‌ವಾಲ್ 26 ಸಿಕ್ಸರ್ ಮತ್ತು 17 ಬೌಂಡರಿಗಳ ಮೂಲಕ ರನ್‌ ಮಳೆ ಸುರಿಸಿದ್ದಾರೆ. ಈತ 266ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನೊಂದಿಗೆ ರನ್ ಗಳಿಸಿರುವುದು ಗಮನಾರ್ಹವಾಗಿದೆ. ಇದರೊಂದಿಗೆ ಅಟ್ಲಾಂಟಾ ತಂಡ 20 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತು.

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಾರ್ಬಡೋಸ್ ರಾಯಲ್ಸ್ ಪರ ಆಡುತ್ತಿರುವ ಕಾರ್ನ್‌ವಾಲ್ ಭಾರಿ ಸಿಕ್ಸರ್ ಬಾರಿಸುವುದರಲ್ಲಿ ನಿಸ್ಸೀಮರು.

ಸಿಕ್ಸರ್ ಸಿಡಿಸುವುದು ಈತನಿಗೆ ನೀರು ಕುಡಿದಷ್ಟೇ ಸುಲಭ!

ಕಾರ್ನ್‌ವಾಲ್ ಶಾಟ್‌ಗಳನ್ನು ಆಡುವ ವೀಡಿಯೊವನ್ನು ಟ್ವೀಟ್ ಮಾಡಿದ 'ಮೈನರ್ ಲೀಗ್ ಕ್ರಿಕೆಟ್' ನಿಮಗೆ ಮನರಂಜನೆ ನೀಡುತ್ತಿಲ್ಲವೇ? ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಿದರು. ಇತ್ತೀಚೆಗೆ ಕಾರ್ನ್‌ವಾಲ್ ಅವರು ಸಿಕ್ಸರ್‌ಗಳನ್ನು ಬಾರಿಸುವುದು ಸಹಜ ಅಭ್ಯಾಸವಾಗಿದೆ ಮತ್ತು ಅವರು 360 ಡಿಗ್ರಿ ಆಟಗಾರ ಎಂಬುದನ್ನ ಗಮನಿಸಬಹುದು.

ಈ ಇನ್ನಿಂಗ್ಸ್‌ ಬಳಿಕ ಆತ್ಮವಿಶ್ವಾಸವೇ ಅವರ ಯಶಸ್ಸಿನ ಗುಟ್ಟು ಎಂದು ತಿಳಿಸಿದ್ದಾರೆ. ಶಾಟ್ ಗಳ ಆಯ್ಕೆಯತ್ತ ಗಮನ ಹರಿಸಿದರೆ ಸಾಕು ಎಂದರು. ಒಂದು ದಿನ 11 ಸಿಕ್ಸರ್‌ಗಳನ್ನು ಬಾರಿಸಿದ್ರೆ ಮರುದಿನ ಮೊದಲ ಎಸೆತದಲ್ಲಿಯೇ ಔಟಾಗಬಹುದು. ಆದರೆ ಆಟಗಾರರಾಗಿ ನಮ್ಮನ್ನು ನಾವು ನಂಬಬೇಕು ಎಂದು ಕಾರ್ನ್‌ವಾಲ್ ಹೇಳಿದ್ದಾರೆ.

ಸೂರ್ಯಕುಮಾರ್ ಯಾದವ್ ಕೇವಲ 48 ಗಂಟೆಗಳು ಮಾತ್ರ ನಂಬರ್ 1 ಟಿ20 ಬ್ಯಾಟ್ಸ್‌ಮನ್ ಆಗಿದ್ದು ಹೇಗೆ?

ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಫಿಂಚ್‌ನದ್ದೇ ಗರಿಷ್ಠ ಸ್ಕೋರ್!

ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಫಿಂಚ್‌ನದ್ದೇ ಗರಿಷ್ಠ ಸ್ಕೋರ್!

ಕಾರ್ನ್‌ವಾಲ್ ಹೊರತಾಗಿ, ಆಸೀಸ್ ಟಿ20 ನಾಯಕ ಆ್ಯರೋನ್ ಫಿಂಚ್‌ ಅಂತರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರರ್ ಎಂದು ಗುರುತಿಸಿಕೊಂಡಿದ್ದಾರೆ. 3 ಜುಲೈ 2018 ರಂದು, ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆದ ಟಿ20 ಪಂದ್ಯದಲ್ಲಿ ಫಿಂಚ್ 76 ಎಸೆತಗಳಲ್ಲಿ 172 ರನ್ ಗಳಿಸಿದರು. ಆ ಪಂದ್ಯದಲ್ಲಿ ಫಿಂಚ್ 16 ಬೌಂಡರಿ ಹಾಗೂ 10 ಸಿಕ್ಸರ್ ಬಾರಿಸಿದ್ದರು.

ಪ್ರೊ ಕಬಡ್ಡಿ 9ನೇ ಸೀಸನ್: ವೇಳಾಪಟ್ಟಿ, ನೇರಪ್ರಸಾರದ ವಿವರ, ಟಿಕೆಟ್ ಬುಕ್ಕಿಂಗ್ ಮಾಹಿತಿ

ಟಿ20 ಲೀಗ್‌ನಲ್ಲಿ ಕ್ರಿಸ್‌ಗೇಲ್‌ನದ್ದೇ ದಾಖಲೆ!

ಟಿ20 ಲೀಗ್‌ನಲ್ಲಿ ಕ್ರಿಸ್‌ಗೇಲ್‌ನದ್ದೇ ದಾಖಲೆ!

ಇನ್ನು ಟಿ20 ಲೀಗ್‌ಗಳಲ್ಲಿ ಕ್ರಿಸ್ ಗೇಲ್ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಮಾಡಿದ ದಾಖಲೆಯನ್ನು ಹೊಂದಿದ್ದಾರೆ. 2013ರ ಐಪಿಎಲ್ ಋತುವಿನಲ್ಲಿ ಆರ್‌ಸಿಬಿ ಪರ ಕಣಕ್ಕಿಳಿದಿದ್ದ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ವಿರುದ್ಧ ಕೇವಲ 66 ಎಸೆತಗಳಲ್ಲಿ 175 ರನ್ ಗಳಿಸಿದ್ದರು. ಆ ಪಂದ್ಯದಲ್ಲಿ ಗೇಲ್ ಒಟ್ಟು 13 ಬೌಂಡರಿ ಹಾಗೂ 17 ಸಿಕ್ಸರ್ ಬಾರಿಸಿದ್ದರು. ವಿಶೇಷ ಅಂದ್ರೆ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಈ ಮೂಲಕ ಟಿ20ಯಲ್ಲಿ ಅತಿ ವೇಗದ ಶತಕ ದಾಖಲಿಸಿದರು.

ಆದ್ರೆ ಕಾರ್ನ್‌ವಾಲ್ ಇತ್ತೀಚೆಗೆ ಈ ದಾಖಲೆಗಳನ್ನು ಮೀರಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 147.29ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಈತ ದ್ವಿಶತಕ ಸಿಡಿಸುವ ಮೊದಲು ಐದು ಅರ್ಧಶತಕ ದಾಖಲಿಸಿದ್ರು. ಆದ್ರೆ ಶತಕ ದಾಖಲಿಸದೇ ನೇರ ದ್ವಿಶತಕ ಸಿಡಿಸಿದ್ದು ಗಮನಾರ್ಹ.

For Quick Alerts
ALLOW NOTIFICATIONS
For Daily Alerts
Story first published: Thursday, October 6, 2022, 17:53 [IST]
Other articles published on Oct 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X