ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ವಿಂಡೀಸ್ ಬೌಲಿಂಗ್ ದಿಗ್ಗಜ ಕಾರ್ಟ್ಲ್ಲಿ ಆಂಬ್ರೋಸ್: ವರದಿ

West Indies bowling legend Curtly Ambrose applies for coaching role at ECB

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ದಿಗ್ಗಜ ಬೌಲರ್ ಕಾರ್ಟ್ಲಿ ಆಂಬ್ರೋಸ್ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ ಕೋಚ್ ಸ್ಥಾನಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಕಳೆದ ಮೂರು ವಾರಗಳ ಹಿಂದೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ವಿಶೇಷ ವೇಗದ ಬೌಲಿಂಗ್ ತರಬೇತುದಾರನ ಹುದ್ದೆಗೆ ಆಹ್ವಾನಿಸಿ ಜಾಹೀರಾತು ನೀಡಿತ್ತು.

ಕ್ರಿಕ್ ಇನ್ಫೋ ಈ ಬಗ್ಗೆ ವರದಿಯನ್ನು ಮಾಡಿದೆ. ಒಂದು ವೇಳೆ ಕಾರ್ಟ್ಲ್ಲಿ ಆಂಬ್ರೋಸ್ ಇಂಗ್ಲೆಂಡ್ ತಂಡದ ಯುವ ಬೌಲರ್‌ಗಳ ಜೊತೆಗೆ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ, ಜೊತೆಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಮತ್ತು ಇಂಗ್ಲೆಂಡ್ ಎ ತಂಡದ ಜೊತೆಗೂ ಅನುಭವ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಕ್ರಿಕ್ ಇನ್ಫೋ ವರದಿ ಹೇಳಿದೆ.

ಭಾರತ vs ಆಸ್ಟ್ರೇಲಿಯಾ: 3ನೇ ಟೆಸ್ಟ್‌ಗೆ ಟೀಮ್ ಇಂಡಿಯಾ ಆಡುವ ಬಳಗ ಪ್ರಕಟ, ಮಯಾಂಕ್ ಹೊರಕ್ಕೆಭಾರತ vs ಆಸ್ಟ್ರೇಲಿಯಾ: 3ನೇ ಟೆಸ್ಟ್‌ಗೆ ಟೀಮ್ ಇಂಡಿಯಾ ಆಡುವ ಬಳಗ ಪ್ರಕಟ, ಮಯಾಂಕ್ ಹೊರಕ್ಕೆ

ಕಾರ್ಟ್ಲ್ಲಿ ಆಂಬ್ರೋಸ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ 405 ಟೆಸ್ಟ್ ವಿಕೆಟ್ ಹಾಗೂ 225 ಏಕದಿನ ವಿಕೆಟ್ ಕಬಳಿಸಿದ್ದಾರೆ. 2000ನೇ ಇಸವಿಯಲ್ಲಿ ಆಂಬ್ರೋಸ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನಕ್ಕೆ ನಿವೃತ್ತಿಯನ್ನು ಹೇಳಿದರು. 400ಕ್ಕೂ ಅಧಿಕ ವಿಕೆಟ್ ಕಿತ್ತ ಬೌಲರ್‌ಗಳ ಪೈಕಿ ಅಂಬ್ರೋಸ್ ಅತ್ಯಂತ ಕಡಿಮೆ ಬೌಲಿಂಗ್ ಸರಾಸರಿಯನ್ನು(20.99) ಹೊಂದಿರುವ ಹೆಗ್ಗಳಿಕೆಯನ್ನು ಅಂಬ್ರೋಸ್ ಹೊಂದಿದ್ದಾರೆ.

ನಿವೃತ್ತಿಯ ಬಳಿಕ ಅಂಬ್ರೋಸ್ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಕೋಚ್ ಆಗಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ. 2016ರಲ್ಲಿ ವೆಸ್ಟ್ ಇಂಡೀಸ್ ತಂಡ ಡ್ಯಾರೆನ್ ಸಮಿ ನೇತೃತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಾಗ ಆಂಬ್ರೊಸ್ ತಂಡದ ಕೋಚ್ ಹುದ್ದೆಯಲ್ಲಿದ್ದರು.

50ನೇ ವರ್ಷದ ಸಂಭ್ರಮದಲ್ಲಿ ಏಕದಿನ ಕ್ರಿಕೆಟ್: ಮಳೆಯಿಂದಾಗಿ ಜನ್ಮ ತಾಳಿತ್ತು ಜನಪ್ರಿಯ ಮಾದರಿ50ನೇ ವರ್ಷದ ಸಂಭ್ರಮದಲ್ಲಿ ಏಕದಿನ ಕ್ರಿಕೆಟ್: ಮಳೆಯಿಂದಾಗಿ ಜನ್ಮ ತಾಳಿತ್ತು ಜನಪ್ರಿಯ ಮಾದರಿ

ಇಂಗ್ಲೆಂಡ್ ಹಿರಿಯರ ಕ್ರಿಕೆಟ್ ತಂಡ ಸದ್ಯ ಶ್ರೀಲಂಕಾ ಪ್ರವಾಸದಲ್ಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಸೆಣೆಸಾಟವನ್ನು ನಡೆಸಲಿದೆ. ಅದಾದ ಬಳಿಕ ಇಂಗ್ಲೆಂಡ್ ತಂಡ ಭಾರತ ಪ್ರವಾಸವನ್ನು ಕೈಗೊಳ್ಳಲಿದೆ.

Story first published: Thursday, January 7, 2021, 10:01 [IST]
Other articles published on Jan 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X