ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಲೋಗೋ ಧರಿಸಿ ಆಡಲಿದ್ದಾರೆ ವಿಂಡೀಸ್ ಕ್ರಿಕೆಟಿಗರು

West Indies cricketers to wear Black Lives Matter logo during England Test series

ಲಂಡನ್, ಜೂನ್ 29: ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್‌ ಸರಣಿ ವೇಳೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಟಗಾರರು 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಲೋಗೋದೊಂದಿಗೆ ಮೈದಾನಕ್ಕಿಳಿಯಲಿದ್ದಾರೆ. ಕೆರಿಬಿಯನ್ ಕ್ರಿಕೆಟಿಗರು ಟೀ ಶರ್ಟ್‌ನ ಕಾಲರ್ ಭಾಗದಲ್ಲಿ ಲೋಗೋ ಧರಿಸುವ ಮೂಲಕ ವರ್ಣಬೇಧ ನೀತಿಯ ವಿರುದ್ಧ ಪ್ರತಿಭಟಿಸಲಿದ್ದಾರೆ.

ಭಾರತೀಯರೇಕೆ ಚತುರ ಬ್ಯಾಟ್ಸ್‌ಮನ್‌ಗಳು?!: ಅಥರ್ಟನ್ ಸ್ವಾರಸ್ಯಕರ ವಿವರಣೆಭಾರತೀಯರೇಕೆ ಚತುರ ಬ್ಯಾಟ್ಸ್‌ಮನ್‌ಗಳು?!: ಅಥರ್ಟನ್ ಸ್ವಾರಸ್ಯಕರ ವಿವರಣೆ

ಆಫ್ರಿಕನ್-ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಕೊಲ್ಲಲ್ಪಟ್ಟಾಗ ವಿಶ್ವದಾದ್ಯಂತ ವರ್ಣಬೇಧ ನೀತಿಯ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿತ್ತು. ವೆಸ್ಟ್ ಇಂಡೀಸ್ ನಾಯಕ ಜೇಸನ್ ಹೋಲ್ಡರ್ ಕೂಡ ವರ್ಣಬೇಧದ ವಿರುದ್ಧ ಧ್ವನಿ ಸೇರಿಸಿದ್ದರು. ಈಗ ಇಡೀ ವಿಂಡೀಸ್ ತಂಡವೇ ವರ್ಣಬೇಧದ ವಿರುದ್ಧ ಒಗ್ಗಟ್ಟು ಪ್ರದರ್ಶಿಸುವುದರಲ್ಲಿದೆ.

ಭಾರತ vs ಆಸ್ಟ್ರೇಲಿಯಾ ಪಂದ್ಯಗಳು ಕಳೆಗುಂದಲಿವೆ: ಟೇಲರ್ ಎಚ್ಚರಿಕೆ!ಭಾರತ vs ಆಸ್ಟ್ರೇಲಿಯಾ ಪಂದ್ಯಗಳು ಕಳೆಗುಂದಲಿವೆ: ಟೇಲರ್ ಎಚ್ಚರಿಕೆ!

ಭಾನುವಾರ (ಜೂನ್ 28) ಜೇಸನ್ ಹೋಲ್ಡರ್, 'ವರ್ಣಬೇಧದ ವಿರುದ್ಧ ಒಗ್ಗಟ್ಟು ಪ್ರದರ್ಶಿಸೋದು ನಮ್ಮ ಕರ್ತವ್ಯವೆಂದು ನಾವು ಭಾವಿಸಿದ್ದೇವೆ. ಅಲ್ಲದೆ ಈ ಅನಿಷ್ಟ ನೀತಿಯ ವಿರುದ್ಧ ನಾವು ಜಾಗೃತಿ ಮೂಡಿಸಲು ಕೈಜೋಡಿಸಬೇಕಿದೆ,' ಎಂದಿದ್ದಾರೆ.

ಧೋನಿಯ ಈ 5 ನಿರ್ಧಾರಗಳು ಎಲ್ಲರನ್ನೂ ದಂಗುಬಡಿಸಿತ್ತು, ಆದರೆ ಭಾರತವನ್ನು ಗೆಲ್ಲಿಸಿತ್ತು!ಧೋನಿಯ ಈ 5 ನಿರ್ಧಾರಗಳು ಎಲ್ಲರನ್ನೂ ದಂಗುಬಡಿಸಿತ್ತು, ಆದರೆ ಭಾರತವನ್ನು ಗೆಲ್ಲಿಸಿತ್ತು!

ಅಲಿಶಾ ಹೊಸನ್ನ ಅವರು ರೂಪಿಸಿರುವ ನೂತನ ಲೋಗೋ ವಿನ್ಯಾಸಕ್ಕೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅನುಮೋದನೆ ನೀಡಿದೆ. ಇಂಗ್ಲೆಂಡ್‌ vs ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ಜುಲೈ 8ರಂದು ಆರಂಭಗೊಳ್ಳಲು ದಿನಾಂಕ ನಿಗದಿಯಾಗಿದೆ. ಆದರೆ ಕೊರೊನಾ ಕಾರಣ ಈ ಸರಣಿ ಮುಂದೂಡಲ್ಪಡುವ ನಿರೀಕ್ಷೆಯಿದೆ.

Story first published: Monday, June 29, 2020, 11:05 [IST]
Other articles published on Jun 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X