ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಫ್ಘಾನಿಸ್ತಾನ ಸೋಲಿಸಿ 5 ವರ್ಷಗಳ ಕೆಟ್ಟ ದಾಖಲೆ ಕೊನೆಗೊಳಿಸಿದ ವಿಂಡೀಸ್!

West Indies down Afghanistan, win first ODI series for five years

ಲಕ್ನೋ, ನವೆಂಬರ್ 10: ಲಕ್ನೋದಲ್ಲಿರುವ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಶನಿವಾರ (ನವೆಂಬರ್ 9) ನಡೆದ ಅಫ್ಘಾನಿಸ್ತಾನ vs ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಕೀರನ್ ಪೊಲಾರ್ಡ್ ಪಡೆ 47 ರನ್ ಸುಲಭ ಜಯ ಗಳಿಸಿದೆ.

ರಿಷಬ್ ಪಂತ್‌ ವಿಕೆಟ್‌ ಕೀಪಿಂಗ್ ಎಡವಟ್ಟಿಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾರಿಷಬ್ ಪಂತ್‌ ವಿಕೆಟ್‌ ಕೀಪಿಂಗ್ ಎಡವಟ್ಟಿಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ

ಲಕ್ನೋ ಪಂದ್ಯದ ಜಯದೊಂದಿಗೆ ವೆಸ್ಟ್ ಇಂಡೀಸ್ ತಂಡ, 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆ ಸಾಧಿಸಿದೆ. ಅಂದ್ಹಾಗೆ ವಿಂಡೀಸ್ ತಂಡಕ್ಕೆ ಸುಮಾರು 5 ವರ್ಷಗಳ ಬಳಿಕ ಲಭಿಸುತ್ತಿರುವ ಮೊದಲ ಏಕದಿನ ಸರಣಿ ಗೆಲುವಿದು. ಈ ಐದು ವರ್ಷಗಳ ಅವಧಿಯಲ್ಲಿ ವಿಂಡೀಸ್ ಏಕದಿನ ಸರಣಿಗಳನ್ನು ಸೋಲುತ್ತಾ ಬಂದಿತ್ತು.

ಆಸ್ಟ್ರೇಲಿಯಾ ನಿರ್ಮಿಸಿದ್ದ ಟಿ20ಐ ವಿಶ್ವದಾಖಲೆ ಮುರಿದ ಟೀಮ್ ಇಂಡಿಯಾ!ಆಸ್ಟ್ರೇಲಿಯಾ ನಿರ್ಮಿಸಿದ್ದ ಟಿ20ಐ ವಿಶ್ವದಾಖಲೆ ಮುರಿದ ಟೀಮ್ ಇಂಡಿಯಾ!

ಆಗಸ್ಟ್ 2014ರ ಬಳಿಕ ಶನಿವಾರದ (ನವೆಂಬರ್ 9) ವರೆಗೂ ವಿಂಡೀಸ್, ಏಕದಿನ ಸರಣಿ ಗೆದ್ದಿರಲಿಲ್ಲ. ಅಂದರೆ ಇಲ್ಲೀವರೆಗೆ ವೆಸ್ಟ್ ಇಂಡೀಸ್ ಒಟ್ಟಿಗೆ 21 ಸರಣಿಗಳನ್ನು ಸೋತಿತ್ತು. ಮತ್ತೊಂದೆಡೆ ಎದುರಾಳಿ ಅಫ್ಘಾನಿಸ್ತಾನ ತಂಡ ಈ ಪಂದ್ಯದ ಸೋಲಿನೊಂದಿಗೆ ಸತತ 11 ಏಕದಿನ ಪಂದ್ಯಗಳನ್ನು ಸೋತಂತಾಗಿದೆ.

ಅಮಾನತಿನ ಬಳಿಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲಿದ್ದಾರೆ ಪೃಥ್ವಿ ಶಾಅಮಾನತಿನ ಬಳಿಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಲಿದ್ದಾರೆ ಪೃಥ್ವಿ ಶಾ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ತಂಡ, ಶೈ ಹೋಪ್ 43, ಎವಿನ್ ಲೆವಿಸ್ 54, ಶ್ರಿಮ್ ಹೆಟ್ಮೈಯರ್ 34, ನಿಕೋಲಸ್ ಪೂರನ್ 67 ರನ್‌ನೊಂದಿಗೆ 50 ಓವರ್‌ಗೆ 9 ವಿಕೆಟ್ ಕಳೆದು 247 ರನ್ ಮಾಡಿತು. ಈ ವೇಳೆ ನವೀನ್ ಉಲ್ ಹಕ್ 3 ವಿಕೆಟ್ ಪಡೆದು ಗಮನ ಸೆಳೆದರು.

Story first published: Sunday, November 10, 2019, 17:05 [IST]
Other articles published on Nov 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X