ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಸೋತ ವೆಸ್ಟ್ ಇಂಡೀಸ್‌ ತಂಡಕ್ಕೆ ದಂಡದ ಬರೆ!

West Indies fined for slow overrate against New Zealand in last match of ODI series

ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಅಂತ್ಯವಾಗಿದ್ದು ಅಂತಿಮ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ ಅಮೋಘ ಗೆಲುವು ಸಾಧಿಸಿದೆ. ವೆಸ್ಟ್ ಇಂಡೀಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ಯಶಸ್ವುಯಾದ ಕಿವೀಸ್ ಪಡೆ ಪಂದ್ಯದ ಗೆಲುವಿನ ಜೊತೆಗೆ ಸರಣಿಯನ್ನು ಕೂಡ ತನ್ನ ವಶಕ್ಕೆ ಪಡೆದುಕೊಂಡಿದೆ. ಹೀಗಾಗಿ ವೆಸ್ಟ್ ಇಂಡೀಸ್ ತಂಡ ಮತ್ತೊಮ್ಮೆ ತವರಿನಲ್ಲಿ ಸರಣಿ ಸೋಲಿನ ಮುಖಭಂಗಕ್ಕೆ ಒಳಗಾಗಿದೆ.

ಈ ಸೋಲಿನ ಬಳಿಕ ವೆಸ್ಟ್ ಇಂಡೀಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಸೋಲಿನ ಜೊತೆಗೆ ನಿಧಾನಗತಿಯಲ್ಲಿ ಬೌಲಿಂಗ್ ನಡೆಸಿದ ಕಾರಣಕ್ಕೆ ದಂಡನೆಗೂ ಗುರಿಯಾಗಿದೆ ವಿಂಡೀಸ್ ಪಡೆ. ನಿಕೋಲಸ್ ಪೂರನ್ ಪಡೆ ನಿಗದಿತ ಸಮಯದಲ್ಲಿ ಎರಡು ಓವರ್‌ಗಳಷ್ಟು ಹಿಂದಿದ್ದ ಕಾರಣ ಪಂದ್ಯದ ಸಂಭಾವನೆಯ 20ರಷ್ಟು ದಂಡವನ್ನು ವಿಧಿಸಲಾಗಿದೆ. ವಿಂಡೀಸ್ ನಾಯಕ ನಿಕೋಲಸ್ ಪೂರನ್ ತಪ್ಪನ್ನು ಒಪ್ಪಿಕೊಂಡಿರುವ ಕಾರಣ ಔಪಚಾರಿಕ ವಿಚಾರಣೆ ನಡೆಸದೆ ದಂಡ ವಿಧಿಸಲಾಗಿದೆ.

ಫಿಫಾದ ಎಲ್ಲಾ ಷರತ್ತುಗಳಿಗೂ ಕೇಂದ್ರ ಅಸ್ತು; ಎಐಎಫ್ಎಫ್ ಬ್ಯಾನ್ ಹಿಂತೆಗೆಸಲು ಪ್ಲಾನ್ಫಿಫಾದ ಎಲ್ಲಾ ಷರತ್ತುಗಳಿಗೂ ಕೇಂದ್ರ ಅಸ್ತು; ಎಐಎಫ್ಎಫ್ ಬ್ಯಾನ್ ಹಿಂತೆಗೆಸಲು ಪ್ಲಾನ್

ಅಬ್ಬರಿಸಿದ ವಿಂಡೀಸ್ ಅಗ್ರಕ್ರಮಾಂಕ

ಅಬ್ಬರಿಸಿದ ವಿಂಡೀಸ್ ಅಗ್ರಕ್ರಮಾಂಕ

ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸಿ ಭರ್ಜರಿ ಪ್ರದರ್ಶನ ನೀಡಿತು. ಅದರಲ್ಲೂ ತಂಡದ ಅಗ್ರ ಕ್ರಮಾಂಕದ ದಾಂಡಿಗರಿಂದ ಅಮೋಘ ಪ್ರದರ್ಶನ ಬಂದಿದೆ. ಮೊದಲ ವಿಕೆಟ್‌ಗೆ ಶಾಯ್ ಹೋಪ್ ಹಾಗೂ ಕೇಲ್ ಮೇಯರ್ಸ್ 173 ರನ್‌ಗಳ ಜೊತೆಯಾಟವನ್ನು ನೀಡಿದರು. ಇದರಲ್ಲಿ ಕೇಲ್ ಮೇಯರ್ಸ್ 105 ಎಸೆತಗಳಲ್ಲಿ 110 ರನ್ ಬಾರಿಸುವ ಮೂಲಕ ಭರ್ಜರಿ ಶತಕ ಸಿಡಿಸಿದರು.

ಶತಕ ವಂಚಿತ ಪೂರನ್, ಮಧ್ಯಮ ಕ್ರಮಾಂಕದ ವೈಫಲ್ಯ

ಶತಕ ವಂಚಿತ ಪೂರನ್, ಮಧ್ಯಮ ಕ್ರಮಾಂಕದ ವೈಫಲ್ಯ

ಇನ್ನು ಮೂರನೇ ಕ್ರಮಾಂಖದಲ್ಲಿ ಕಣಕ್ಕಿಳಿದ ನಾಯಕ ನಿಕೋಲಸ್ ಪೂರನ್ ಕೂಡ ಭರ್ಜರಿ ಪ್ರದರ್ಶನ ನೀಡಿದ್ದು 55 ಎಸೆತಗಳಲ್ಲಿ ಭರ್ಜರಿ 91 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರು. ಆದರೆ ಮಧ್ಯಮ ಕ್ರಮಾಂಕದ ಆಟಗಾರರು ಅತ್ಯಂತ ಕಳಪೆ ಪ್ರದರ್ಶನ ನೀಡಿದ ಕಾರಣ ವಿಂಡೀಸ್ ಪಡೆ ಹಿನ್ನಡೆ ಅನುಭವಿಸಿತು. ಅಂತಿಮ ಹಂತದಲ್ಲಿ ಅಲ್ಜಾರಿ ಜೋಸೆಪ್ 6 ಎಸೆತಗಳಲ್ಲಿ 20 ರನ್ ಸಿಡಿಸುವ ಮೂಲಕ ತಂಡದ ಮೊತ್ತ 301ಕ್ಕೆ ಏರಲು ಕಾರಣವಾದರು.

ಕಿವೀಸ್ ಪಡೆಯಿಂದಲೂ ಭರ್ಜರಿ ಬ್ಯಾಟಿಂಗ್

ಕಿವೀಸ್ ಪಡೆಯಿಂದಲೂ ಭರ್ಜರಿ ಬ್ಯಾಟಿಂಗ್

ಇನ್ನು ವೆಸ್ಟ್ ಇಂಡೀಸ್ ತಂಡ ನೀಡಿದ್ದ 302 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಪರವಾಗಿ ಅಲೆನ್ ಫಿಲ್ ಹೊರತುಪಡಿಸಿ ಉಳಿದ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ಮಾರ್ಟಿನ್ ಗಪ್ಟಿಲ್ 57 ರನ್‌ಗಳಿಸಿದರೆ ಡೆವೋನ್ ಕಾನ್ವೆ 56, ನಾಯಕ ಟಾಮ್ ಲಾಥಮ್ 69, ಡ್ಯಾರೆಲ್ ಮಿಚೆಲ್ 63 ಹಾಗೂ ಅಂತಿಮ ಹಂತದಲ್ಲಿ ಜೇಮ್ಸ್ ನೀಶಮ್ 11 ಎಸೆತಗಳಲ್ಲಿ 34 ರನ್‌ಗಳನ್ನು ಗಳಿಸಿ ಇನ್ನೂ 17 ಎಸೆತಗಳು ಬಾಕಿಯುರುವಂತೆಯೇ ಭರ್ಜರಿ ಗೆಲುವು ಸಾರಿದರು. ಇದರ ಪರಿಣಾಮವಾಗಿ ನ್ಯೂಜಿಲೆಂಡ್ 5 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದು ಸರಣಿಯನ್ನು ಕೂಡ ವಶಕ್ಕೆ ಪಡೆದಿದೆ.

Shikhar Dhawan ಜೆರ್ಸಿ ಮೇಲೆ ಟೇಪ್ ಅಂಟಿಸಿದ್ದೇಕೆ | OneIndia Kannada
ಆಡುವ ಬಳಗ ಹೀಗಿತ್ತು

ಆಡುವ ಬಳಗ ಹೀಗಿತ್ತು

ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಶಮರ್ ಬ್ರೂಕ್ಸ್, ಕೀಸಿ ಕಾರ್ಟಿ, ನಿಕೋಲಸ್ ಪೂರನ್ (ನಾಯಕ), ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಯಾನಿಕ್ ಕ್ಯಾರಿಯಾ, ಅಲ್ಜಾರಿ ಜೋಸೆಫ್, ಕೆವಿನ್ ಸಿಂಕ್ಲೇರ್
ಬೆಂಚ್: ಜರ್ಮೈನ್ ಬ್ಲಾಕ್ವುಡ್, ಜೇಡನ್ ಸೀಲ್ಸ್, ಕೀಮೋ ಪಾಲ್, ಗುಡಾಕೇಶ್ ಮೋಟಿ, ಶಿಮ್ರಾನ್ ಹೆಟ್ಮೆಯರ್
ನ್ಯೂಜಿಲೆಂಡ್ ತಂಡ: ಮಾರ್ಟಿನ್ ಗಪ್ಟಿಲ್, ಫಿನ್ ಅಲೆನ್, ಡೆವೊನ್ ಕಾನ್ವೇ, ಟಾಮ್ ಲ್ಯಾಥಮ್ (ನಾಯಕ & ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮೈಕೆಲ್ ಬ್ರೇಸ್‌ವೆಲ್, ಲಾಕಿ ಫರ್ಗುಸನ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್
ಬೆಂಚ್: , ಕೇನ್ ವಿಲಿಯಮ್ಸನ್, ಇಶ್ ಸೋಧಿ, ಬೆನ್ ಸಿಯರ್ಸ್, ಗ್ಲೆನ್ ಫಿಲಿಪ್ಸ್

Story first published: Tuesday, August 23, 2022, 9:09 [IST]
Other articles published on Aug 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X