ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಡಿಐ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ವೆಸ್ಟ್‌ ಇಂಡೀಸ್‌ ಜೋಡಿ!

West Indies John Campbell, Shai Hope set record ODI opening stand against Ireland

ಡಬ್ಲಿನ್‌, ಮೇ 06: ವೆಸ್ಟ್‌ ಇಂಡೀಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಜಾನ್‌ ಕ್ಯಾಂಪ್‌ಬೆಲ್‌ ಮತ್ತು ಶೇಯ್‌ ಹೋಪ್‌, ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ರನ್‌ಗಳ ಜತೆಯಾಟದ ವಿಶ್ವ ದಾಖಲೆ ಬರೆದಿದ್ದಾರೆ.

 RCB ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ! RCB ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ!

ಇಲ್ಲಿನ ಕ್ಯಾಸೆಲ್‌ ಅವೆನ್ಯೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ತ್ರಿಕೋನ ಏಕದಿನ ಕ್ರಿಕೆಟ್‌ ಸರಣಿಯಲ್ಲಿನ ಐರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಆರ್ಭಟಿಸಿದ ಕೆರಿಬಿಯನ್‌ ಜೋಡಿ ಮೊದಲ ವಿಕೆಟ್‌ಗೆ 365 ರನ್‌ಗಳನ್ನು ಚಚ್ಚುವ ಮೂಲಕ ನೂತನ ವಿಶ್ವ ದಾಖಲೆ ಬರೆದಿದೆ. ಈ ಮೂಲಕ ಕಳೆದ ವರ್ಷ ಜಿಂಬಾಬ್ವೆ ತಂಡದ ವಿರುದ್ಧ ಬುಲವಾಯೊದಲ್ಲಿ ಪಾಕಿಸ್ತಾನ ತಂಡದ ಇಮಾಮ್‌ ಉಲ್‌ ಹಕ್‌ ಮತ್ತು ಫಖರ್‌ ಝಮಾನ್‌ ಗಳಿಸಿದ್ದ 304 ರನ್‌ಗಳ ಜತೆಯಾಟವನ್ನು ಅಳಿಸಿಹಾಕಿದೆ.

 ನಿನಗೆ ಚಿಕಿತ್ಸೆ ಅಗತ್ಯವಿದೆ, ಪಾಕಿಸ್ತಾನಕ್ಕೆ ಬಾ: ಗಂಭೀರ್‌ಗೆ ಅಫ್ರಿದಿ ಮತ್ತೆ ಟಾಂಗ್‌ ನಿನಗೆ ಚಿಕಿತ್ಸೆ ಅಗತ್ಯವಿದೆ, ಪಾಕಿಸ್ತಾನಕ್ಕೆ ಬಾ: ಗಂಭೀರ್‌ಗೆ ಅಫ್ರಿದಿ ಮತ್ತೆ ಟಾಂಗ್‌

ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಕ್ಯಾಂಪ್‌ಬೆಲ್‌ 137 ಎಸೆತಗಳಲ್ಲಿ 15 ಫೋರ್‌ ಮತ್ತು 6 ಸಿಕ್ಸರ್‌ಗಳೊಂದಿಗೆ 179 ರನ್‌ಗಳನ್ನು ಸಿಡಿಸಿದರೆ, ಅವರಿಗೆ ಉತ್ತಮ ಸಾಥ್‌ ನೀಡಿದ ಶೇಯ್‌ ಹೋಪ್‌ 152 ಎಸೆತಗಳಲ್ಲಿ 22 ಫೋರ್‌ ಮತ್ತು 2 ಸಿಕ್ಸರ್‌ಗಳೊಂದಿಗೆ 170 ರನ್‌ಗಳನ್ನು ಬಾರಿಸಿದರು.

 ಐಪಿಎಲ್‌ 2019: ಸಿಎಸ್‌ಕೆ ವಿರುದ್ಧ ಕಿಂಗ್ಸ್‌ಗೆ 6 ವಿಕೆಟ್‌ ಜಯ ಐಪಿಎಲ್‌ 2019: ಸಿಎಸ್‌ಕೆ ವಿರುದ್ಧ ಕಿಂಗ್ಸ್‌ಗೆ 6 ವಿಕೆಟ್‌ ಜಯ

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ ತಂಡ ಆರಂಭಿಕ ಬ್ಯಾಟ್ಸ್‌ಮನ್‌ಗಳ ಅಬ್ಬರದೊಂದಿಗೆ ತನ್ನ ಪಾಲಿನ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 381 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಆತಿಥೇಯ ಐರ್ಲೆಂಡ್‌ ತಂಡವನ್ನು 34.4 ಓವರ್‌ಗಳಲ್ಲಿ 185 ರನ್‌ಗಳಿಗೆ ಆಲ್‌ಔಟ್‌ ಮಾಡಿ 196 ರನ್‌ಗಳ ಭರ್ಜರಿ ಜಯ ದಾಖಲಿಸಿತು.

 ಅವಕಾಶ ಸಿಕ್ರೆ ಮಿ. ನ್ಯಾಗ್ಸ್‌ ಪಾತ್ರ ಮಾಡ್ತೇನೆಂದ ಕೊಹ್ಲಿ: ವಿಡಿಯೊ ಅವಕಾಶ ಸಿಕ್ರೆ ಮಿ. ನ್ಯಾಗ್ಸ್‌ ಪಾತ್ರ ಮಾಡ್ತೇನೆಂದ ಕೊಹ್ಲಿ: ವಿಡಿಯೊ

ವೆಸ್ಟ್‌ ಇಂಡೀಸ್‌ ತಂಡ ತನ್ನ ಮುಂದಿನ ಪಂದ್ಯದಲ್ಲಿ ಅಪಾಯಕಾರಿ ಬಾಂಗ್ಲಾದೇಶ ತಂಡವನ್ನು ಎದುರಾಗಲಿದೆ.

Story first published: Sunday, May 5, 2019, 23:08 [IST]
Other articles published on May 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X