ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್ ವಿಶ್ವದಾಖಲೆ ಸರದಾರ ಲಾರಾಗೆ 51ನೇ ಹುಟ್ಟುಹಬ್ಬದ ಸಂಭ್ರಮ

West Indies legend Brian Lara celebrates his 51st birthday

ಪೋರ್ಟ್ ಆಫ್‌ ಸ್ಪೇನ್, ಮೇ 2: ಟೆಸ್ಟ್ ಕ್ರಿಕೆಟ್‌ನಲ್ಲಿ 400 ರನ್‌ಗಳ ವಿಶ್ವದಾಖಲೆ ನಿರ್ಮಿಸಿರುವ ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ, ಕೆರಿಬಿಯನ್ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮೇ 2ಕ್ಕೆ ಲಾರಾಗೆ 51 ವರ್ಷ ತುಂಬುತ್ತಿದೆ.

T20 Ranking: ಪಾಕ್‌ನಿಂದ ನಂ.1 ಸ್ಥಾನ ಕಸಿದು ದಾಖಲೆ ಬರೆದ ಆಸೀಸ್!T20 Ranking: ಪಾಕ್‌ನಿಂದ ನಂ.1 ಸ್ಥಾನ ಕಸಿದು ದಾಖಲೆ ಬರೆದ ಆಸೀಸ್!

ಇಂಗ್ಲೆಂಡ್ ವಿರುದ್ಧ 2004ರಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಕಡೇ ಟೆಸ್ಟ್ ಪಂದ್ಯದಲ್ಲಿ ಬ್ರಿಯಾನ್ ಲಾರಾ, ವೈಯಕ್ತಿಕವಾಗಿ ಸುದೀರ್ಘ ಇನ್ನಿಂಗ್ಸ್‌ ಮತ್ತು ಅತ್ಯಧಿಕ ರನ್ ದಾಖಲೆ ನಿರ್ಮಿಸಿದ್ದರು. ಆ್ಯಂಟಿಗುವಾದ ರಿಕ್ರಿಯೇಶನ್ ಸ್ಟೇಡಿಯಂನಲ್ಲಿ ಇಂದಿಗೂ ಕೂಡ ಲಾರಾ ಪೇರಿಸಿದ 400 ರನ್ ಸಾಧನೆ ವೈಯಕ್ತಿಕ ಅತ್ಯಧಿಕ ರನ್ ದಾಖಲೆಯಾಗಿ ಉಳಿದಿದೆ.

ಟೀಮ್ ಇಂಡಿಯಾ ಪರ ಸುರೇಶ್ ರೈನಾ ಇತಿಹಾಸ ನಿರ್ಮಿಸಿದ ದಿನವಿದುಟೀಮ್ ಇಂಡಿಯಾ ಪರ ಸುರೇಶ್ ರೈನಾ ಇತಿಹಾಸ ನಿರ್ಮಿಸಿದ ದಿನವಿದು

ಲಾರಾಗೂ ಮೊದಲು ಟೆಸ್ಟ್‌ನಲ್ಲಿ ಅತ್ಯಧಿಕ ರನ್ ದಾಖಲೆ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ ಹೆಸರಿನಲ್ಲಿತ್ತು. 2003ರಲ್ಲಿ ಜಿಂಬಾಬ್ವೆ ವಿರುದ್ಧ ಹೇಡನ್ 380 ರನ್ ಬಾರಿಸಿದ್ದರು. ಗಮ್ಮತ್ತೆಂದರೆ ಲಾರಾ ಅವರು ಹೇಡನ್ ಅವರ 380 ರನ್ ದಾಖಲೆ ಮುರಿಯುವುದಕ್ಕೂ ಮುನ್ನ ಹೇಡನ್, ಲಾರಾ ಅವರ 375 ರನ್ ಸಾಧನೆ ಸರಿಗಟ್ಟಿದ್ದರು!

ಯುನಿವರ್ಸ್ ಬಾಸ್‌ ಕ್ರಿಸ್‌ ಗೇಲ್‌ಗೆ ರಾಮ್‌ನರೇಶ್ ಸರವಣ್ ತಿರುಗೇಟುಯುನಿವರ್ಸ್ ಬಾಸ್‌ ಕ್ರಿಸ್‌ ಗೇಲ್‌ಗೆ ರಾಮ್‌ನರೇಶ್ ಸರವಣ್ ತಿರುಗೇಟು

ಅಂದ್ಹಾಗೆ, ಆ್ಯಂಟಿಗುವಾದಲ್ಲಿ ನಡೆದಿದ್ದ ಆವತ್ತಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡ, ಮೊದಲ ಇನ್ನಿಂಗ್ಸ್‌ನಲ್ಲಿ ಲಾರಾ ಅವರ ಅಜೇಯ 400 ರನ್ ಸೇರಿ 751 ರನ್ ಬಾರಿಸಿತ್ತು. 43 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳು ಆವತ್ತು ಲಾರಾ ಬ್ಯಾಟಿಂದ ಸಿಡಿದ್ದಿದ್ದವು. ಆ ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿತ್ತು.

Story first published: Saturday, May 2, 2020, 18:04 [IST]
Other articles published on May 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X