ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನನಗಿಲ್ಲಿ ಗೌರವ ಸಿಗುತ್ತಿಲ್ಲ'. ಕ್ರಿಸ್ ಗೇಲ್ ಹೀಗಂದಿದ್ದು ಯಾರ ವಿರುದ್ಧ?

West Indies legend explodes after disastrous MSL

ಕ್ರಿಸ್ ಗೇಲ್ ಚುಟುಕು ಕ್ರಿಕೆಟ್‌ನ ದಂತಕತೆ. ಕ್ರಿಸ್ ಗೇಲ್ ಅಂಗಳಕ್ಕೆ ಇಳಿದರಂದರೆ ಅಲ್ಲಿ ಸಿಕ್ಸರ್ ಸುರಿಮಳೆ ಆಗಲಿದೆ ಎಂದೇ ಅರ್ಥ. ತನ್ನ ಆರ್ಭಟದ ಬ್ಯಾಟಿಂಗ್‌ಗೆ ಎದುರಾಳಿ ಎಂತಾ ಬೌಲರ್ ಆದ್ರೂ ಪತರಗುಟ್ಟಿಹೋಗಬೇಕು. ಆ ಮಟ್ಟಿಗೆ ಬೆವರಿಸಳಿಸುವ ತಾಕತ್ತಿರುವ ಆಟಗಾರ. ಇಂತಾ ಆಟಗಾರ ತನಗಿಲ್ಲಿ ಗೌರವ ಸಿಗುತ್ತಿಲ್ಲ. ತಾನು ತಂಡಕ್ಕೆ ಹೊರೆಯಾಗುತ್ತಿದ್ದೇನೆ ಎಂದು ಬೇಸರದಿಂದ ಮಾಧ್ಯಮಗಳ ಮುಂದೆ ಹೇಳಿಕೆನೀಡಿದ್ದಾರೆ.

ಹೌದು ದಕ್ಷಿಣ ಆಫ್ರಿಕಾದ ಟಿ-ಟ್ವೆಂಟಿ ಲೀಗ್ ಎಮ್‌ಎಸ್‌ಎಲ್ ಆರನೇ ಸೀಸನ್‌ನಲ್ಲಿ ಕ್ರಿಸ್ ಗೇಲ್ ಕಳಪೆ ಪ್ರದರ್ಶನವನ್ನು ನೀಡಿದ್ದಾರೆ. ಕ್ರಿಸ್ ಗೇಲ್ ಪ್ರತಿನಿಧಿಸುವ ಹಾಲಿ ಜೊಝಿ ಸ್ಟಾರ್ಸ್ ಈ ಬಾರಿಯ ಟೂರ್ನಿಯಲ್ಲಿ ಇಲ್ಲಿಯವರೆಗೆ ಒಂದೂ ಪಂದ್ಯವನ್ನು ಗೆದ್ದುಕೊಂಡಿಲ್ಲ. ಆರು ಪಂದ್ಯಗಳಲ್ಲಿ ಕ್ರಿಸ್‌ಗೇಲ್ ಕೇವಲ 101 ರನ್‌ಅಷ್ಟೇ ಗಳಿಸಿದ್ದಾರೆ.

'ದ ಹಂಡ್ರೆಡ್‌'ಗೆ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕೊಳ್ಳೋರೇ ಇಲ್ಲ!'ದ ಹಂಡ್ರೆಡ್‌'ಗೆ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕೊಳ್ಳೋರೇ ಇಲ್ಲ!

ಎರಡು ಮೂರು ಇನ್ನಿಂಗ್ಸ್‌ಗಳಲ್ಲಿ ನಾನು ಉತ್ತಮ ಪ್ರದರ್ಶನವನ್ನು ನೀಡಿಲ್ಲ. ಹೀಗಾಗಿ ನಾನು ತಂಡಕ್ಕೆ ಹೊರೆಯಾಗುತ್ತಿದ್ದೇನೆ ಎಂದು ಮಾಧ್ಯಮಗಳ ಮುಂದ ಜಮೈಕಾದ ಈ ದಿಗ್ಗಜ ಆಟಗಾರ ಹೇಳಿಕೆ ನೀಡಿದ್ದಾರೆ. ನಾನು ಈ ತಂಡದ ಬಗ್ಗೆ ಮಾತ್ರವೇ ಮಾತನಾಡುತ್ತಿಲ್ಲ. ಕಳೆದ ಹಲವು ವರ್ಷಗಳಿಂದ ಬೇರೆ ಬೇರೆ ಫ್ರಾಂಚೈಸಿಗಳಿಗೆ ಆಟವನ್ನು ಆಡುತ್ತಿದ್ದು, ಮೂರು ನಾಲ್ಕು ಪಂದ್ಯಗಳಲ್ಲಿ ಉತ್ತಮಪ್ರದರ್ಶನ ನೀಡಿಲ್ಲವೆಂದ ತಕ್ಷಣವೇ ನಾನು ತಂಡಕ್ಕೆ ಹೊರೆಯಾಗಿ ಬಿಡುತ್ತಿದ್ದೇನೆ ಎಂದು ಬೇಸರದಿಂದಲೇ ಪ್ರತಿಕ್ರಿಯಿಸಿದ್ದಾರೆ.

ಅವರು ತಂಡಕ್ಕಾಗಿ ನಾನು ಏನು ಮಾಡಿದ್ದೇನೆ ಎಂದು ನೋಡುವುದಿಲ್ಲ. ನನಗೆ ಸರಿಯಾದ ಗೌರವ ಸಿಗುತ್ತಿಲ್ಲ ಎಂದಿದ್ದಾರೆ. ನಾನು ಕೇವಲ ಎಮ್ಎಸ್‌ಎಲ್‌ ಲೀಗ್‌ ಬಗ್ಗೆ ಮಾತ್ರವೇ ಮಾತನಾಡುತ್ತಿಲ್ಲ. ಸಾಮಾನ್ಯವಾಗಿ ಇದೇ ನಡೆಯುತ್ತಿದೆ. ತಂಡದ ಆಟಗಾರರಿಮದ ಹಿಡಿದು ಮ್ಯಾನೇಜ್‌ಮೆಂಟ್, ಮುಖ್ಯಸ್ಥರು, ಬೋರ್ಡ್‌ ಸದಸ್ಯರು ಯಾರಿಂದಲೂ ಗೌರವ ದೊರೆಯುತ್ತಿಲ್ಲ ಎಂದು ಕ್ರಿಸ್ ಗೇಲ್ ಹೇಳಿಕೊಂಡಿದ್ದಾರೆ.

ಸ್ಫೋಟಕ ಶತಕ ಬಾರಿಸಿ ಟಿ20 ದಾಖಲೆ ಬರೆದ ಯೂನಿವರ್ಸ್ ಬಾಸ್ ಗೇಲ್ಸ್ಫೋಟಕ ಶತಕ ಬಾರಿಸಿ ಟಿ20 ದಾಖಲೆ ಬರೆದ ಯೂನಿವರ್ಸ್ ಬಾಸ್ ಗೇಲ್

ಒಟ್ಟಾರೆ ಎಮ್‌ಎಸ್‌ಎಲ್‌ ಕೂಟದಲ್ಲಿ ಕ್ರಿಸ್‌ಗೇಲ್ ಅತಿಹೆಚ್ಚಿ ರನ್‌ಗಳಿಸಿದ ಆಟಗಾರನಾಗಿದ್ದಾರೆ. ಆದರೆ ಪ್ರಸಕ್ತ ಸೀಸನ್‌ನಲ್ಲಿ ಕೇವಲ ಒಂದು ಅರ್ಧ ಶತಕದೊಂದಿಗೆ 101ರನ್ನಷ್ಟೇ ಗಳಿಸಿದ್ದಾರೆ.

Story first published: Wednesday, November 27, 2019, 11:25 [IST]
Other articles published on Nov 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X