ದಕ್ಷಿಣ ಆಫ್ರಿಕಾ ತಂಡದ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಐಪಿಎಲ್ ಅಡ್ಡಿ?!

ಪೋರ್ಟ್ ಆಫ್‌ ಸ್ಪೇನ್: ಐದು ಪಂದ್ಯಗಳ ಟಿ20ಐ ಸರಣಿಗೆ ಅಥವಾ ಎರಡು ಪಂದ್ಯಗಳ ಟೆಸ್ಟ್‌ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಆತಿಥ್ಯ ವಹಿಸಲು ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಯೋಚಿಸುತ್ತಿದೆ. ಆದರೆ ಈ ಪ್ರವಾಸ ಸರಣಿ ನಿರ್ಧರಿಸುವುದಕ್ಕೂ ಮುನ್ನ ಇಂಡಿಯನ್ ಪ್ರೀಮಿಯರ್ ಲೀಗ್‌ನ ಸಂಪೂರ್ಣ ವೇಳಾಪಟ್ಟಿ ಪ್ರಕಟಗೊಳ್ಳುವುದಕ್ಕಾಗಿ ಕಾಯುತ್ತಿದ್ದೇವೆ ಎಂದು ಕ್ರಿಕೆಟ್ ವೆಸ್ಟ್‌ ಇಂಡೀಸ್‌ನ ಮುಖ್ಯ ಕಾರ್ಯನಿರ್ವಣಾಧಿಕಾರಿ ಜಾನಿ ಗ್ರೇವ್ ಹೇಳಿದ್ದಾರೆ.

ಸ್ಮಿತ್, ರೂಟ್, ಕೊಹ್ಲಿ, ವಿಲಿಯಮ್ಸನ್‌ರಲ್ಲಿ ಸ್ಥಿರ ಬ್ಯಾಟ್ಸ್‌ಮನ್ ಹೆಕ್ಕಿದ ಮ್ಯಾಥ್ಯೂಸ್

5 ಟಿ20 ಪಂದ್ಯಗಳು ಅಥವಾ 2 ಟೆಸ್ಟ್ ಪಂದ್ಯಗಳಿಗಾಗಿ ಕೆರಿಬಿಯನ್ನರ ನಾಡಿಗೆ ದಕ್ಷಿಣ ಆಫ್ರಿಕಾದ ಪ್ರವಾಸ ಜುಲೈ 23ರಿಂದ ಆಗಸ್ಟ್ 16ರವರೆಗೆ ನಡೆಸಲು ವೇಳಾಪಟ್ಟಿ ನಿಗದಿಯಾಗಿತ್ತು. ಆದರೆ ಕೋವಿಡ್-19ನಿಂದಾಗಿ ಈ ಪ್ರವಾಸ ಸರಣಿ ಮುಂದೂಡಲ್ಪಟ್ಟಿತ್ತು.

ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು!

ವೆಸ್ಟ್ ಇಂಡೀಸ್-ದಕ್ಷಿಣ ಆಫ್ರಿಕಾ ಸರಣಿ ನಡೆಸಲು ಐಪಿಎಲ್‌ ಅಡ್ಡಿಯಾಗುತ್ತಿರುವುದು ಹೇಗೆ? ಇಲ್ಲಿದೆ ವಿವರಣೆ.

ಐಪಿಎಲ್-ಪ್ರವಾಸ ಸರಣಿ ಕ್ಲ್ಯಾಶ್

ಐಪಿಎಲ್-ಪ್ರವಾಸ ಸರಣಿ ಕ್ಲ್ಯಾಶ್

ಮುಂದೂಡಲ್ಪಟ್ಟಿರುವ ಪ್ರವಾಸ ಸರಣಿಯನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸಲು ಕ್ರಿಕೆಟ್ ವೆಸ್ಟ್ ಇಂಡೀಸ್ ಯೋಚಿಸುತ್ತಿದೆ. ಆದರೆ ಕೊರೊನಾದಿಂದ ಮುಂದೂಡಲ್ಪಟ್ಟಿರುವ ಐಪಿಎಲ್ ಕೂಡ ಸೆಪ್ಟೆಂಬರ್‌ನಲ್ಲೇ ಆರಂಭವಾಗಲಿದೆ. ಇದು ವೆಸ್ಟ್ ಇಂಡೀಸ್‌ಗೆ ತಲೆ ನೋವಾಗಿದೆ.

ಐಪಿಎಲ್ ಅನ್ನು ಅವಲಂಬಿಸಿದೆ

ಐಪಿಎಲ್ ಅನ್ನು ಅವಲಂಬಿಸಿದೆ

'ಟಿ20 ಅಥವಾ ಟೆಸ್ಟ್ ಗಾಗಿ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್‌ಗೆ ಬರಲಿದೆ ಎಂದು ನಾವು ಭಾವಿಸಿದ್ದೇವೆ. ಇದು ಐಪಿಎಲ್ ಅನ್ನು ಅವಲಂಬಿಸಿದೆ. ದಕ್ಷಿಣ ಆಫ್ರಿಕಾದ ಕೆಲ ಟೆಸ್ಟ್ ಆಟಗಾರರು ಐಪಿಎಲ್ ಒಪ್ಪಂದದಲ್ಲಿದ್ದಾರೆ. ಆದರೆ ನಮ್ಮ ಈಗಿನ ಟೆಸ್ಟ್ ತಂಡದಲ್ಲಿ ಯಾವುದೇ ಐಪಿಎಲ್ ಆಟಗಾರರಿಲ್ಲ,' ಎಂದು ಗ್ರೇವ್ ಹೇಳಿದ್ದಾರೆ.

ಟೆಸ್ಟ್ ಆಡೋ ಸಾಧ್ಯತೆ ಕಡಿಮೆ

ಟೆಸ್ಟ್ ಆಡೋ ಸಾಧ್ಯತೆ ಕಡಿಮೆ

'ನಾವು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡಲು ಸಾಧ್ಯವಿಲ್ಲ. ಯಾಕೆಂದರೆ ತಮ್ಮ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ಮಾಡಿಕೊಡಬೇಕೆನ್ನುವ ವಿಚಾರಕ್ಕೆ ದಕ್ಷಿಣ ಆಫ್ರಿಕಾ ಬದ್ಧವಾಗಿದೆ. ಇದನ್ನು ಅವರು ನಮಗೆ ತುಂಬಾ ಸ್ಪಷ್ಟವಾಗಿ ಹೇಳಿದ್ದಾರೆ,' ಎಂದು ಗ್ರೇವ್ ವಿವರಿಸಿದರು.

ಐಪಿಎಲ್ ಆರಂಭ-ಅಂತ್ಯದ ದಿನಾಂಕ

ಐಪಿಎಲ್ ಆರಂಭ-ಅಂತ್ಯದ ದಿನಾಂಕ

13ನೇ ಆವೃತ್ತಿಯ ಐಪಿಎಲ್ ಆರಂಭ ಮತ್ತು ಅಂತ್ಯಗೊಳ್ಳುವ ಅಧಿಕೃತ ದಿನಾಂಕಗಳು ಪ್ರಕಟಗೊಂಡಿವೆ. ಯುಎಇನಲ್ಲಿ ಈ ಬಾರಿಯ ಐಪಿಎಲ್ ಸೆಪ್ಟೆಂಬರ್ 19ರಂದು ಆರಂಭಗೊಂಡು ನವೆಂಬರ್ 8ರಂದು ಕೊನೆಗೊಳ್ಳಲಿದೆ. ಹೀಗಾಗಿ ವೆಸ್ಟ್ ಇಂಡೀಸ್-ದಕ್ಷಿಣ ಆಫ್ರಿಕಾ ಸರಣಿ ನಡೆಸುವುದಿದ್ದರೂ ಸೆಪ್ಟೆಂಬರ್ ಮೊದಲ ವಾರದಲ್ಲೇ ನಡೆಸಲು ಸ್ವಲ್ಪ ಅವಕಾಶವಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, July 24, 2020, 23:55 [IST]
Other articles published on Jul 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X