ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅತ್ಯಂತ ಪುರಾತನ ದಾಖಲೆ ಮುರಿದ ಲೆವಿಸ್

By Mahesh

ಓವಲ್, ಸೆ.28: ವೆಸ್ಟ್‌ಇಂಡೀಸ್‌ ನ ಆರಂಭಿಕ ಆಟಗಾರ ಎವಿನ್ ಲೆವಿಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ ನ ಅತ್ಯಂತ ಪುರಾತನ ದಾಖಲೆಯನ್ನು ಮುರಿದಿದ್ದಾರೆ. ಇತ್ತೀಚೆಗೆ ಟಿ20ಯಲ್ಲಿ ಸಿಕ್ಸರ್ ಬಾರಿಸುವುದರಲ್ಲಿ ಲೆವಿಸ್ ದಾಖಲೆ ಬರೆದಿದ್ದರು.

ಸುಮಾರು 140 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದ ಲೆವಿಸ್ ಅವರು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 176 ರನ್ ಗಳಿಸಿ ಗಾಯಗೊಂಡು ಪೆವಿಲಿಯನ್ ಸೇರಿದರು.

West Indies' opening batsman Evin Lewis 176 breaks oldest ever cricket record

ಆರಂಭಿಕ ಆಟಗಾರ ಲೆವಿಸ್ ಅವರು 176 ರನ್(130 ಎಸೆತ, 17 ಬೌಂಡರಿ,7 ಸಿಕ್ಸರ್) ಬಾರಿಸಿ, 1877ರಲ್ಲಿ ಆಸ್ಟ್ರೇಲಿಯದ ಚಾರ್ಲ್ಸ್ ಬ್ಯಾನೆರ್‌ಮ್ಯಾನ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 165ರನ್ ಮಾಡಿದ್ದರು. ಬ್ಯಾನರ್‌ಮ್ಯಾನ್ ಕೂಡಾ ಗಾಯಗೊಂಡು ಪೆವಿಲಿಯನ್ ಸೇರಿದ್ದರು ಎಂಬುದು ವಿಶೇಷ.

25ರ ಹರೆಯದ ಲೆವಿಸ್ 46ನೆ ಓವರ್‌ನಲ್ಲಿ ಗಾಯಗೊಂಡು ಪೆವಿಲಿಯನ್ ಸೇರಿದ್ದರಿಂದ ದ್ವಿಶತಕ ದಾಖಲಿಸಲಾಗಲಿಲ್ಲ. ವೆಸ್ಟ್‌ಇಂಡೀಸ್ ಲೆವಿಸ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಲ್ಲಿ ಇಂಗ್ಲೆಂಡ್ ವಿರುದ್ಧ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 356 ರನ್ ಗಳಿಸಿತ್ತು. ಆದರೆ ಮಳೆಯಿಂದಾಗಿ ವೆಸ್ಟ್‌ಇಂಡೀಸ್ ಈ ಪಂದ್ಯದಲ್ಲಿ ಡಿಎಲ್ ನಿಯಮದಂತೆ 5 ರನ್‌ಗಳ ಸೋಲು ಅನುಭವಿಸಿದ್ದು ದುರಂತ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X