ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿಗೆ ಸೆಲ್ಯೂಟ್ ಹೊಡೆದ ವಿಂಡೀಸ್ ಕ್ರಿಕೆಟರ್ ಶೆಲ್ಡನ್ ಕಾಟ್ರೆಲ್!

West Indies’ Sheldon Cottrell salutes MS Dhoni‘s ‘inspirational love for country’

ಕಿಂಗ್ಸ್‌ಟೌನ್, ಜುಲೈ 29: ಭಾರತೀಯ ಸೇನೆಯ ಬಗ್ಗೆ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗಿರುವ ಬದ್ಧತೆ ಬಗ್ಗೆ ವೆಸ್ಟ್ ಇಂಡೀಸ್ ವೇಗಿ ಶೆಲ್ಡನ್ ಕಾಟ್ರೆಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧೋನಿ ಬಗ್ಗೆ ಮೆಚ್ಚುಗೆ ಸೂಚಿಸಿ ಕಾಟ್ರೆಲ್ ಭಾನುವಾರ (ಜುಲೈ 28) ಟ್ವೀಟ್ ಸೆಲ್ಯೂಟ್ ಹೊಡೆದಿದ್ದಾರೆ.

ಗ್ಲೋಬಲ್ ಟಿ20: ಔಟಾಗದೆಯೂ ಮೈದಾನದಿಂದ ನಡೆದ ಯುವಿ-ವಿಡಿಯೋಗ್ಲೋಬಲ್ ಟಿ20: ಔಟಾಗದೆಯೂ ಮೈದಾನದಿಂದ ನಡೆದ ಯುವಿ-ವಿಡಿಯೋ

ಐಸಿಸಿ ವಿಶ್ವಕಪ್‌ ವೇಳೆ ಶೆಲ್ಡನ್ ಕಾಟ್ರೆಲ್, ವಿಕೆಟ್ ಲಭಿಸಿದಾಗ ಮೈದಾನದಲ್ಲಿ ವಿಭಿನ್ನ ರೀತಿಯಲ್ಲಿ ಸೆಲ್ಯೂಟ್ ಹೊಡೆದು ಗಮನ ಸೆಳೆದಿದ್ದರು. ಕಾಟ್ರೆಲ್ ಎಂದ ಕೂಡಲೇ ಅವರ 'ಸೆಲ್ಯೂಟ್' ನೆನಪಾಗಬೇಕು; ಅಷ್ಟರ ಮಟ್ಟಿಗೆ ಶೆಲ್ಡನ್ ಕಾಟ್ರೆಲ್ ಸೆಲ್ಯೂಟ್ ಜನಪ್ರಿಯಗೊಂಡಿತ್ತು.

ಗ್ಲೋಬಲ್‌ ಟಿ20 ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ ಯುವಿ ವಿಶ್ವರೂಪ-ವಿಡಿಯೊಗ್ಲೋಬಲ್‌ ಟಿ20 ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ ಯುವಿ ವಿಶ್ವರೂಪ-ವಿಡಿಯೊ

ಜಮೈಕಾ ಸೇನೆಯಲ್ಲಿ ಸೈನಿಕನಾಗಿರುವ ಕಾಟ್ರೆಲ್, ಭಾರತದ ಬಗ್ಗೆ ಸ್ಫೂರ್ತಿದಾಯಕ ಪ್ರೀತಿ ತೋರಿಸಿರುವ ಕೂಲ್ ಕ್ಯಾಪ್ಟನ್ ಧೋನಿಗೆ ಮಾಡಿರುವ ಟ್ವೀಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.

ಸ್ಫೂರ್ತಿದಾಯಕ ವ್ಯಕ್ತಿ

ಸ್ಫೂರ್ತಿದಾಯಕ ವ್ಯಕ್ತಿ

'ಕ್ರಿಕೆಟ್ ಮೈದಾನದಲ್ಲಿ ಈ ಮನುಷ್ಯ ಸ್ಫೂರ್ತಿ ತುಂಬುತ್ತಿರುತ್ತಾನೆ. ಕ್ರಿಕೆಟ್ ವೃತ್ತಿಗೆ ಹೊರತಾಗಿಯೂ ತನ್ನ ದೇಶಕ್ಕೆ ಕೊಡುಗೆ ನೀಡುತ್ತಿರುವ ಈತ ನಿಜಕ್ಕೂ ದೇಶ ಪ್ರೇಮಿ. ಈ ಹಿಂದಿನ ವಾರಗಳಲ್ಲಿ ನಾನು ನನ್ನ ಸಹ ಆಟಗಾರರ ಜೊತೆ ಜಮೈಕಾದಲ್ಲಿದ್ದೆ. ಧೋನಿಯ ದೇಶ ಪ್ರೇಮವನ್ನು ಬಿಂಬಿಸಲು ನನಗೆ ಬಿಡುವಿತ್ತು' ಎಂದು ಬಲಗೈ ವೇಗಿ ಕಾಟ್ರೆಲ್ ಮೊದಲ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಕಾಶ್ಮೀರದಲ್ಲಿ ಧೋನಿ ಕರ್ತವ್ಯ

ಕಾಶ್ಮೀರದಲ್ಲಿ ಧೋನಿ ಕರ್ತವ್ಯ

ಭಾರತದ ವೆಸ್ಟ್ ಇಂಡೀಸ್ ಪ್ರವಾಸ ಸರಣಿಯನ್ನು ಕೈ ಬಿಟ್ಟಿರುವ ಧೋನಿ, 2 ತಿಂಗಳ ಕಾಲ ಆರ್ಮಿ ಸೇವೆಯಲ್ಲಿ ತೊಡಗಿಕೊಳ್ಳುವ ನಿರ್ಧಾರ ತಳೆದಿದ್ದರು. ಇದಕ್ಕೆ ಸೇನಾ ಮುಖ್ಯ ಕಚೇರಿಯಿಂದ ಅನುಮತಿಯೂ ದೊರೆತಿದೆ. ಜುಲೈ 31ರಿಂದ ಆಗಸ್ಟ್ 15ರ ವರೆಗೆ ಧೋನಿ ಕಾಶ್ಮೀರದಲ್ಲಿ ಕರ್ತವ್ಯದಲ್ಲಿ ತೊಡಗಲಿದ್ದಾರೆ.

ಅಪರೂಪದ ಕ್ಷಣ ಸೆರೆ

ಭಾನುವಾರವೇ (ಜುಲೈ 28) ಮತ್ತೊಂದು ಟ್ವೀಟ್‌ನಲ್ಲಿ ಕಾಟ್ರೆಲ್, 'ಈ ವಿಡಿಯೋದಲ್ಲಿ ಪತ್ನಿಗೆ ತನ್ನ ಪತಿ ಮತ್ತು ದೇಶದ ಬಗ್ಗೆ ಗೌರವ ಮೂಡುವಂತ ಕ್ಷಣ ಸೆರೆಯಾಗಿದೆ. ಇದಕ್ಕಾಗಿ ನಾನು ಈ ವಿಡಿಯೋವನ್ನು ನನ್ನ ಸ್ನೇಹಿತರು ಮತ್ತು ಕುಟುಂಬದಲ್ಲಿ ಶೇರ್ ಮಾಡಿಕೊಂಡಿದ್ದೇನೆ' ಎಂದು ಮತ್ತೊಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಗಸ್ತು ತಿರುಗುವ ಕಾಯಕ

ಗಸ್ತು ತಿರುಗುವ ಕಾಯಕ

38ರ ಹರೆಯದ ಧೋನಿ, ಭಾರತೀಯ ಸೇನೆಯಲ್ಲಿ ಪ್ಯಾರಾಚೂಟ್ ರೆಜಿಮೆಂಟ್‌ನ ಟೆರಿಟೊರಿಯಲ್ ಆರ್ಮಿ ಯುನಿಟ್‌ನಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗಾಗಿ ಬಿಸಿಸಿಐಯು ತಂಡಗಳನ್ನು ಪ್ರಕಟಿಸುವ ಮುನ್ನವೇ ಧೋನಿ, ತಾನು ಪ್ರವಾಸ ಸರಣಿಗೆ ಬದಲಾಗಿ ಸೇನಾ ಸೇವೆಯಲ್ಲಿ ತೊಡಗುವ ನಿರ್ಧಾರ ಪ್ರಕಟಿಸಿದ್ದರು. ಅದರಂತೆ ಧೋನಿ ಅವರು ಕಾಶ್ಮೀರದಲ್ಲಿ ಗಸ್ತು ತಿರುಗುವ, ಕಾವಲು ಕಾಯುವ ಕರ್ತವ್ಯ ನಿರ್ವಹಿಸಲಿದ್ದಾರೆ.

Story first published: Monday, July 29, 2019, 11:50 [IST]
Other articles published on Jul 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X