ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್‌ ಟೆಸ್ಟ್ ಮುಂದಿರುವಾಗಲೇ ವಿರಾಟ್ ಕೊಹ್ಲಿ ಕೈ ಬೆರಳಿಗೆ ಗಾಯ

West Indies test: The Indian captain provides an update on thumb injury

ನವದೆಹಲಿ, ಆಗಸ್ಟ್ 15: ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಆರಂಭಕ್ಕೆ ಒಂದು ವಾರವಿರುವಾಗ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಬುಧವಾರ (ಆಗಸ್ಟ್ 14) ನಡೆದ ಭಾರತ-ವಿಂಡೀಸ್ 3ನೇ ಏಕದಿನ ಪಂದ್ಯದ ವೇಳೆ ಕೊಹ್ಲಿ ಬಲಗೈ ಬೆರಳಿಗೆ ಗಾಯವಾಗಿದೆ.

ಸ್ವಾತಂತ್ರ್ಯ ದಿನದಂದೇ ಪಾಂಟಿಂಗ್ ಹಿಂದಿಕ್ಕಿ ಇತಿಹಾಸ ಬರೆದ ವಿರಾಟ್ ಕೊಹ್ಲಿ!ಸ್ವಾತಂತ್ರ್ಯ ದಿನದಂದೇ ಪಾಂಟಿಂಗ್ ಹಿಂದಿಕ್ಕಿ ಇತಿಹಾಸ ಬರೆದ ವಿರಾಟ್ ಕೊಹ್ಲಿ!

ಟ್ರಿನಿಡಾಡ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್ ವೇಳೆ ವಿರಾಟ್ ಬಲಗೈ ಹೆಬ್ಬೆರಳಿಗೆ ಗಾಯವಾಗಿತ್ತು. 27ನೇ ಓವರ್‌ನಲ್ಲಿ ಕೆಮರ್‌ ರೋಚ್‌ ಎಸೆದ ಬೌನ್ಸರ್, ಕೊಹ್ಲಿ ಬಲ ಕೈಯ ಹೆಬ್ಬೆರಳಿಗೆ ಬಡಿದಿತ್ತು.

ಭಾರತದೆದುರು ಗೇಲ್ ಅರ್ಧಶತಕ ಬಾರಿಸಿದ್ದು ಎಷ್ಟು ವರ್ಷಗಳ ಬಳಿಕ ಗೊತ್ತಾ?!ಭಾರತದೆದುರು ಗೇಲ್ ಅರ್ಧಶತಕ ಬಾರಿಸಿದ್ದು ಎಷ್ಟು ವರ್ಷಗಳ ಬಳಿಕ ಗೊತ್ತಾ?!

ಹಬ್ಬೆರಳಿಗೆ ಗಾಯವಾದ ಕ್ಷಣ ಕೊಂಚ ಕಾಲ ಕೊಹ್ಲಿ ವೈದ್ಯಕೀಯ ಉಪಚಾರಕ್ಕೊಳಕ್ಕಾದರಾದರೂ ಮತ್ತೆ ಆಟದಲ್ಲಿ ಮುಂದುವರೆದಿದ್ದರು. ಈ ಪಂದ್ಯವನ್ನು (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) 6 ವಿಕೆಟ್‌ಗಳಿಂದ ಗೆದ್ದುಕೊಂಡ ಭಾರತ ಏಕದಿನ ಸರಣಿಯನ್ನು 2-0ಯಿಂದ ಜಯಿಸಿತ್ತು.

ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, 'ಬೆರಳು ಮುರಿತಕ್ಕೊಳಗಾಗಿದೆ ಎಂದು ನನಗನ್ನಿಸುತ್ತಿಲ್ಲ. ಹಾಗೇನಾದರೂ ಆಗಿದ್ದರೆ ನಾನು ಮತ್ತೆ ಬ್ಯಾಟಿಂಗ್‌ನಲ್ಲಿ ಮುಂದುವರೆಯೋಕೆ ಸಾಧ್ಯವಾಗುತ್ತಿರಲಿಲ್ಲ. ಗಾಯದಿಂದ ಉಗುರು ಕಿತ್ತಿದೆ ಅಷ್ಟೆ,' ಎಂದರು. ಟೆಸ್ಟ್ ಸರಣಿ ಎರಡು ಪಂದ್ಯಗಳನ್ನು ಒಳಗೊಂಡಿದ್ದು, ಆಗಸ್ಟ್ 17ರಂದು 3 ದಿನಗಳ ಅಭ್ಯಾಸ ಪಂದ್ಯ ಆರಂಭವಾಗಲಿದೆ. ಆಗಸ್ಟ್ 22ರಂದು ಮೊದಲ ಟೆಸ್ಟ್ ಶುರುವಾಗಲಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕ್ರಿಸ್‌ ಗೇಲ್ ನಿವೃತ್ತಿ ರೀಲಾ, ರಿಯಲ್ಲಾ?!: ವಿಡಿಯೋಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕ್ರಿಸ್‌ ಗೇಲ್ ನಿವೃತ್ತಿ ರೀಲಾ, ರಿಯಲ್ಲಾ?!: ವಿಡಿಯೋ

ಮಾತು ಮುಂದುವರೆಸಿದ ಕೊಹ್ಲಿ, 'ಅದೃಷ್ಟವಶಾತ್ ಬೆರಳೇನೂ ಮುರಿದಿಲ್ಲ. ಚೆಂಡು ಬೆರಳಿಗೆ ಬಡಿತ ಕ್ಷಣ ದೊಡ್ಡ ಗಾಯವಾಗಿರಬಹುದು ಅಂದುಕೊಂಡಿದ್ದೆ. ಆದರೆ ಸದ್ಯ ಮುರಿತವೇನೂ ಆಗಿಲ್ಲ. ಬಹುಶಃ ಮೊದಲ ಟೆಸ್ಟ್ ವೇಳೆಗೆ ಇದು ಗುಣವಾಗಬಹುದು,' ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Story first published: Thursday, August 15, 2019, 19:16 [IST]
Other articles published on Aug 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X