ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್, 2ನೇ ದಿನ, Live: ವಿಂಡೀಸ್ ಆರಂಭಿಕ ಜೊತೆಯಾಟ ಮುರಿದ ಶಮಿ

West Indies vs India, 1st Test, 2nd Day - Live Score

ಆ್ಯಂಟಿಗುವಾ, ಆಗಸ್ಟ್ 23: ಭಾರತದ ಇನ್ನಿಂಗ್ಸ್‌ ವೇಳೆ ಬೇಗನೆ ವಿಕೆಟ್‌ಗಳ ಕೆಡವಿ ವಿರಾಟ್ ಕೊಹ್ಲಿ ಬಳಗವನ್ನು ಇಕ್ಕಟ್ಟಿಗೀಡುಮಾಡುವ ವೆಸ್ಟ್ ಇಂಡೀಸ್ ಯೋಜನೆ ಫಲಿಸಿದೆ. ಮೊದಲ ಟೆಸ್ಟ್‌ನಲ್ಲಿ ಮೊದಲ ದಿನವಾದ ಗುರುವಾರ (ಆಗಸ್ಟ್ 22) ಕೆರಿಬಿಯನ್ನರು ಟೀಮ್ ಇಂಡಿಯಾದ ಪ್ರಮುಖ 6 ವಿಕೆಟ್‌ಗಳನ್ನು ಮುರಿದಿದ್ದರು.

ಎಂಎಸ್ ಧೋನಿ ಜಾಗಕ್ಕೆ ಸೂಕ್ತ ಆಟಗಾರನ ಸೂಚಿಸಿದ ವೀರೇಂದ್ರ ಸೆಹ್ವಾಗ್ಎಂಎಸ್ ಧೋನಿ ಜಾಗಕ್ಕೆ ಸೂಕ್ತ ಆಟಗಾರನ ಸೂಚಿಸಿದ ವೀರೇಂದ್ರ ಸೆಹ್ವಾಗ್

ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ vs ವೆಸ್ಟ್ ಇಂಡೀಸ್ ಮೊದಲ ಟೆಸ್ಟ್‌ನ ಮೊದಲ ದಿನ ಟಾಸ್ ಸೋತು ಇನ್ನಿಂಗ್ಸ್‌ಗೆ ಇಳಿಸಿದ್ದ ಭಾರತ, ದಿನದಾಟದ ಅಂತ್ಯಕ್ಕೆ 68.5 ಓವರ್‌ನಲ್ಲಿ 6 ವಿಕೆಟ್ ಕಳೆದು 203 ರನ್ ಗಳಿಸಿತ್ತು. ಮೊದಲ ದಿನದಾಟಕ್ಕೆ ಮಳೆಯೂ ಸ್ವಲ್ಪ ಅಡ್ಡಿ ಪಡಿಸಿತ್ತು.

ಭಾರತ vs ವೆಸ್ಟ್ ಇಂಡೀಸ್, 1ನೇ ಟೆಸ್ಟ್, 2ನೇ ದಿನ, Live ಸ್ಕೋರ್‌ಕಾರ್ಡ್

1
46250

ಮೊದಲ ದಿನ ಭಾರತ ಪರ ಆರಂಭಿಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್ 44, ಮಯಾಂಕ್ ಅಗರ್ವಾಲ್ 2, ವಿರಾಟ್ ಕೊಹ್ಲಿ 9, ಅಜಿಂಕ್ಯ ರಹಾನೆ 81, ಚೇತೇಶ್ವರ್ ಪೂಜಾರ 2, ಹನುಮ ವಿಹಾರಿ 32 ರನ್‌ಗೆ ವಿಕೆಟ್ ಒಪ್ಪಿಸಿದ್ದರು. 2ನೇ ದಿನವಾದ ಶುಕ್ರವಾರ (ಆಗಸ್ಟ್ 23) ರಿಷಬ್ ಪಂತ್ 24, ರವೀಂದ್ರ ಜಡೇಜಾ 58, ಇಶಾಂತ್ ಶರ್ಮಾ 19, ಮೊಹಮ್ಮದ್ ಶಮಿ 0 ರನ್‌ನೊಂದಿಗೆ ಭಾರತ 96.4 ಓವರ್‌ಗೆ ಸರ್ವ ಪತನ ಕಂಡು 297 ರನ್ ಬಾರಿಸುವುದರೊಂದಿಗೆ ಇನ್ನಿಂಗ್ಸ್ ಮುಗಿಸಿದೆ.

ಆರ್‌ಸಿಬಿ ಕಪ್‌ ಕನಸಿಗೀಗ ಜೀವ, ಕೋಚಿಂಗ್‌ ವಿಭಾಗದಲ್ಲಿ ಮುಖ್ಯ ಬದಲಾವಣೆ!ಆರ್‌ಸಿಬಿ ಕಪ್‌ ಕನಸಿಗೀಗ ಜೀವ, ಕೋಚಿಂಗ್‌ ವಿಭಾಗದಲ್ಲಿ ಮುಖ್ಯ ಬದಲಾವಣೆ!

ಭಾರತದ ಮೊದಲ ಇನ್ನಿಂಗ್ಸ್‌ ವೇಳೆ ಕೆಮರ್ ರೋಚ್ 66 ರನ್‌ಗೆ 4, ಶ್ಯಾನನ್ ಗೇಬ್ರಿಯಲ್ 3, ರೋಸ್ಟನ್ ಚೇಸ್ 2, ಜೇಸನ್ ಹೋಲ್ಡರ್ 1 ವಿಕೆಟ್ ಪಡೆದರು. ವೆಸ್ಟ್ ಇಂಡೀಸ್ ಇನ್ನಿಂಗ್ಸ್ ಪ್ರಥಮ ಇನ್ನಿಂಗ್ಸ್ ಆಡುತ್ತಿದೆ.

ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಗೆಲ್ಲಬಹುದು: ವಿಂಡೀಸ್ ಮಾಜಿ ನಾಯಕಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ಗೆಲ್ಲಬಹುದು: ವಿಂಡೀಸ್ ಮಾಜಿ ನಾಯಕ

ಭಾರತ ತಂಡ: ಮಯಾಂಕ್ ಅಗರ್ವಾಲ್, ಲೋಕೇಶ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್ (ವಿಕೆ), ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್‌ಪ್ರೀತ್‌ ಬೂಮ್ರಾ.

ಆರ್‌ಸಿಬಿ ಕಪ್‌ ಕನಸಿಗೀಗ ಜೀವ, ಕೋಚಿಂಗ್‌ ವಿಭಾಗದಲ್ಲಿ ಮುಖ್ಯ ಬದಲಾವಣೆ!ಆರ್‌ಸಿಬಿ ಕಪ್‌ ಕನಸಿಗೀಗ ಜೀವ, ಕೋಚಿಂಗ್‌ ವಿಭಾಗದಲ್ಲಿ ಮುಖ್ಯ ಬದಲಾವಣೆ!

ವೆಸ್ಟ್ ಇಂಡೀಸ್ ತಂಡ: ಕ್ರೇಗ್ ಬ್ರಾಥ್‌ವೈಟ್, ಜಾನ್ ಕ್ಯಾಂಪ್‌ಬೆಲ್, ಶೈ ಹೋಪ್ (ವಿಕೆ), ಶಮರ್ ಬ್ರೂಕ್ಸ್, ಡ್ಯಾರೆನ್ ಬ್ರಾವೋ, ಶಿಮ್ರಾನ್ ಹೆಟ್‌ಮೇಯರ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್ (ಸಿ), ಮಿಗುಯೆಲ್ ಕಮ್ಮಿನ್ಸ್, ಶಾನನ್ ಗೇಬ್ರಿಯಲ್, ಕೆಮರ್ ರೋಚ್.

Story first published: Friday, August 23, 2019, 23:02 [IST]
Other articles published on Aug 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X