ಆ್ಯಂಟಿಗುವಾ, ಆಗಸ್ಟ್ 22: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಇಂದು (ಆಗಸ್ಟ್ 22) ಆತಿಥೇಯರ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಆ್ಯಂಟಿಗುವಾದ ನಾರ್ತ್ಸೌಂಡ್ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದಿರುವ ವಿಂಡೀಸ್ ಫೀಲ್ಡಿಂಗ್ ಆಯ್ದುಕೊಂಡಿದೆ.
ವಿರಾಟ್ ಕೊಹ್ಲಿ, ಸಚಿನ್ ಎಲ್ಲಾ ದಾಖಲೆ ಮುರಿಯುತ್ತಾರೆ, ಒಂದನ್ನು ಬಿಟ್ಟು!'
ಟಿ20 ಮತ್ತು ಏಕದಿನ ಎರಡರಲ್ಲೂ ಕೊಹ್ಲಿ ಪಡೆ ಸರಣಿ ಜಯಿಸಿತ್ತು. ಹೀಗಾಗಿ ಟೆಸ್ಟ್ ಸರಣಿಯನ್ನಾದರೂ ಉಳಿಸಿಕೊಳ್ಳುವ ಯೋಜನೆಯಲ್ಲಿ ವೆಸ್ಟ್ ಇಂಡೀಸ್ ತಂಡವಿದೆ. ವಿಂಡೀಸ್ ಆಲ್ ರೌಂಡರ್ ಕೀಮೋ ಪೌಲ್ ಕಾಲಿನ ಗಾಯಕ್ಕೀಡಾಗಿದ್ದಾರೆ. ಅವರ ಬದಲು ಅಪಾಯಕಾರಿ ವೇಗಿ ಮಿಗುಯೆಲ್ ಕಮ್ಮಿನ್ಸ್ ತಂಡ ಸೇರಿಕೊಂಡಿದ್ದಾರೆ.
ಭಾರತ vs ವೆಸ್ಟ್ ಇಂಡೀಸ್, ಮೊದಲ ಟೆಸ್ಟ್, Live ಸ್ಕೋರ್ಕಾರ್ಡ್
ಭಾರತ ತಂಡ: ಮಯಾಂಕ್ ಅಗರ್ವಾಲ್, ಲೋಕೇಶ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಭ್ ಪಂತ್ (ವಿಕೆ), ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ.
ಟೆಸ್ಟ್ನಲ್ಲಿ ಟೀಮ್ ಇಂಡಿಯಾ ವಿರುದ್ಧ ಗೆಲ್ಲಬಹುದು: ವಿಂಡೀಸ್ ಮಾಜಿ ನಾಯಕ
ವೆಸ್ಟ್ ಇಂಡೀಸ್ ತಂಡ: ಕ್ರೇಗ್ ಬ್ರಾಥ್ವೈಟ್, ಜಾನ್ ಕ್ಯಾಂಪ್ಬೆಲ್, ಶೈ ಹೋಪ್ (ವಿಕೆ), ಶಮರ್ ಬ್ರೂಕ್ಸ್, ಡ್ಯಾರೆನ್ ಬ್ರಾವೋ, ಶಿಮ್ರಾನ್ ಹೆಟ್ಮೇಯರ್, ರೋಸ್ಟನ್ ಚೇಸ್, ಜೇಸನ್ ಹೋಲ್ಡರ್ (ಸಿ), ಮಿಗುಯೆಲ್ ಕಮ್ಮಿನ್ಸ್, ಶಾನನ್ ಗೇಬ್ರಿಯಲ್, ಕೆಮರ್ ರೋಚ್.