ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ vs ಪಾಕಿಸ್ತಾನ, 1ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್

West Indies vs Pakistan, 1st Test Match, Live Score

ಕಿಂಗ್‌ಸ್ಟನ್‌: ವೆಸ್ಟ್‌ ಇಂಡೀಸ್ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡ ಆತಿಥೇಯ ವೆಸ್ಟ್‌ ಇಂಡೀಸ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯ ಆಡುತ್ತಿದೆ. ಜಮೈಕಾದ ಕಿಂಗ್‌ಸ್ಟನ್‌ನಲ್ಲಿರುವ ಸಬಿನಾ ಪಾರ್ಕ್ ಸ್ಟೇಡಿಯಂನಲ್ಲಿ ಇತ್ತಂಡಗಳು ಕಣಕ್ಕಿಳಿದಿವೆ. ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ದುಕೊಂಡಿದೆ. ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯವಿದು. ದ್ವಿತೀಯ ಪಂದ್ಯ ಆಗಸ್ಟ್ 20ರಿಂದ ಶುರುವಾಗಲಿದೆ.

'ಅಭಿಮಾನಿಗಳು ನನ್ನ ಸುಡುತ್ತಿದ್ದರು': ಸಚಿನ್‌ಗೆ ತಮಾಷೆ ಮಾಡೋಕೆ ಹೋಗಿ ಎಡವಟ್ಟಾಗಿದ್ದ ಕ್ಷಣ ನೆನೆದ ಶೋಯೆಬ್ ಅಖ್ತರ್'ಅಭಿಮಾನಿಗಳು ನನ್ನ ಸುಡುತ್ತಿದ್ದರು': ಸಚಿನ್‌ಗೆ ತಮಾಷೆ ಮಾಡೋಕೆ ಹೋಗಿ ಎಡವಟ್ಟಾಗಿದ್ದ ಕ್ಷಣ ನೆನೆದ ಶೋಯೆಬ್ ಅಖ್ತರ್

ಟೆಸ್ಟ್‌ ಸರಣಿಗೂ ಮುನ್ನ ಪಾಕಿಸ್ಥಾನ ಮತ್ತು ವೆಸ್ಟ್ ಇಂಡೀಸ್ ಮಧ್ಯೆ ನಾಲ್ಕು ಪಂದ್ಯಗಳ ಟಿ20ಐ ಸರಣಿ ನಡೆದಿತ್ತು. ಇದರಲ್ಲಿ ದ್ವಿತೀಯ ಟಿ20ಐ ಪಂದ್ಯ ಮಾತ್ರ ನಡೆದಿದ್ದು, ಉಳಿದೆಲ್ಲಾ ಪಂದ್ಯ ಮಳೆಯ ಕಾರಣದಿಂದ ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿದೆ. ದ್ವಿತೀಯ ಟೆಸ್ಟ್‌ ಪಂದ್ಯ ಆಗಸ್ಟ್ 20ರಿಂದ 24ರ ವರೆಗೆ ನಡೆಯಲಿದೆ.

ವೆಸ್ಟ್ ಇಂಡೀಸ್ vs ಪಾಕಿಸ್ತಾನ, 1ನೇ ಟೆಸ್ಟ್, Live ಸ್ಕೋರ್‌ಕಾರ್ಡ್ ಇಲ್ಲಿದೆ

1
51070

ಮೊದಲ ಟೆಸ್ಟ್‌ ಪಂದ್ಯಕ್ಕೂ ಮಳೆಯ ಅಡಚಣೆ
ಮೊದಲ ಟೆಸ್ಟ್‌ ಪಂದ್ಯದ ಆರಂಭದಲ್ಲೂ ಮಳೆ ತೊಂದರೆ ನೀಡಿದೆ. 17 ಓವರ್‌ ಮುಕ್ತಾಯದ ಬಳಿಕ ಪಂದ್ಯ ಮಳೆಯಿಂದಾಗಿ ಕ್ಷಣಕಾಲ ನಿಲುಗಡೆಯಾಗಿತ್ತು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಪಾಕಿಸ್ತಾನ 2 ವಿಕೆಟ್ ಕಳೆದು 34 ರನ್ ಗಳಿಸಿತ್ತು. ಅಂದ್ಹಾಗೆ ನಾಲ್ಕು ಪಂದ್ಯಗಳ ಟಿ20ಐ ಸರಣಿಯಲ್ಲಿ ಕೀರನ್ ಪೊಲಾರ್ಡ್ ವೆಸ್ಟ್‌ ಇಂಡೀಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಈ ಸರಣಿಯ ವೇಳೆ ವಿಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ತವರಿನಲ್ಲಿ ಕೊನೇ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು.

ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಟೆಸ್ಟ್, ಐದು ಟಿ20ಐ ಪಂದ್ಯಗಳನ್ನಾಡಿತ್ತು. ಇದರಲ್ಲಿ ಟೆಸ್ಟ್‌ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 2-0ಯಿಂದ ಗೆದ್ದಿದ್ದರೆ, ಟಿ20ಐ ಸರಣಿಯಲ್ಲೂ ದಕ್ಷಿಣ ಆಫ್ರಿಕಾ 3-2ರಿಂದ ಗೆದ್ದಿತ್ತು.

ಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡುವ ಆಸೆ ವ್ಯಕ್ತಪಡಿಸಿದ ರವೀಂದ್ರ ಜಡೇಜಾಟೀಮ್ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡುವ ಆಸೆ ವ್ಯಕ್ತಪಡಿಸಿದ ರವೀಂದ್ರ ಜಡೇಜಾ

ವೆಸ್ಟ್‌ ಇಂಡೀಸ್ ಪ್ಲೇಯಿಂಗ್ XI
ಕ್ರೈಗ್ ಬ್ರಾಥ್‌ವೈಟ್ (ನಾಯಕ), ಕೀರನ್ ಪೊವೆಲ್, ಎನ್‌ಕ್ರುಮಾ ಬೋನರ್, ಕೈಲ್ ಮೇಯರ್ಸ್, ರೋಸ್ಟನ್ ಚೇಸ್, ಜೆರ್ಮೈನ್ ಬ್ಲ್ಯಾಕ್‌ವುಡ್, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ಕೆಮಾರ್ ರೋಚ್, ಜೇಡೆನ್ ಸೀಲ್ಸ್, ಜೋಮೆಲ್ ವಾರಿಕನ್.
ಬೆಂಚ್: ಶಾಯ್ ಹೋಪ್, ಶಮಾರ್ ಬ್ರೂಕ್ಸ್, ರಹಕೀಮ್ ಕಾರ್ನ್‌ವಾಲ್, ಅಲ್ಜಾರಿ ಜೋಸೆಫ್, ಚೆಮಾರ್ ಹೋಲ್ಡರ್, ಜಹ್ಮರ್ ಹ್ಯಾಮಿಲ್ಟನ್.

ಭಾರತ vs ಇಂಗ್ಲೆಂಡ್: ಶತಕದ ಸಮೀಪದಲ್ಲಿ ಎಡವಿದ ಹಿಟ್‌ಮ್ಯಾನ್ ರೋಹಿತ್ಭಾರತ vs ಇಂಗ್ಲೆಂಡ್: ಶತಕದ ಸಮೀಪದಲ್ಲಿ ಎಡವಿದ ಹಿಟ್‌ಮ್ಯಾನ್ ರೋಹಿತ್

KL ರಾಹುಲ್ ಪರಾಕ್ರಮಕ್ಕೆ ದಿಗ್ಗಜ ಕ್ರಿಕೆಟಿಗರ ದಾಖಲೆಗಳೇ ಪುಡಿಪುಡಿ | Oneindia Kannada

ಪಾಕಿಸ್ತಾನ್ ಪ್ಲೇಯಿಂಗ್ XI
ಅಬಿದ್ ಅಲಿ, ಇಮ್ರಾನ್ ಬಟ್, ಅಜರ್ ಅಲಿ, ಬಾಬರ್ ಅಝಾಮ್ (ನಾಯಕ), ಫವಾದ್ ಆಲಂ, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಹೀಮ್ ಅಶ್ರಫ್, ಯಾಸಿರ್ ಶಾ, ಹಸನ್ ಅಲಿ, ಮೊಹಮ್ಮದ್ ಅಬ್ಬಾಸ್, ಶಾಹೀನ್ ಅಫ್ರಿದಿ.
ಬೆಂಚ್: ನಸೀಮ್ ಶಾ, ಸರ್ಫರಾಜ್ ಅಹ್ಮದ್, ಮೊಹಮ್ಮದ್ ನವಾಜ್, ಸೌದ್ ಶಕೀಲ್, ಅಬ್ದುಲ್ಲಾ ಶಫೀಕ್, ನೌಮನ್ ಅಲಿ, ಹಾರಿಸ್ ರೌಫ್, ಜಹಿದ್ ಮಹಮೂದ್, ಶಹನವಾಜ್ ಧನಿ, ಸಾಜಿದ್ ಖಾನ್.

Story first published: Friday, August 13, 2021, 1:05 [IST]
Other articles published on Aug 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X