ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಗಸ್ಟ್ 20ರಂದು ಕ್ರಿಕೆಟ್ ಜಗತ್ತಿನಲ್ಲಿ ನಡೆದದ್ದೇನು?

What happened in the cricket world on august 20

ಆಗಸ್ಟ್ 20, ಶುಕ್ರವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಪ್ರಮುಖ ವಿದ್ಯಮಾನಗಳು ನಡೆದಿವೆ. ಒಂದೆಡೆ ಶ್ರೀಲಂಕಾದ ಮಾಜಿ ಆಟಗಾರ ಮುತ್ತಯ್ಯ ಮುರಳೀಧರನ್ ಈ ಹಿಂದೆ ವಿರೇಂದ್ರ ಸೆಹ್ವಾಗ್ ರಾಹುಲ್ ದ್ರಾವಿಡ್ ಕುರಿತು ಬೇಸರಗೊಂಡಿದ್ದ ಸನ್ನಿವೇಶವನ್ನು ಬಿಚ್ಚಿಟ್ಟಿದ್ದಾರೆ. ಮತ್ತೊಂದೆಡೆ ಮುಂಬರಲಿರುವ ಐಪಿಎಲ್ ಕುರಿತು ಜಾಹೀರಾತೊಂದು ಬಿಡುಗಡೆಯಾಗಿದ್ದು ಸಖತ್ ಸ್ಟೈಲಿಶ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಕಾಣಿಸಿಕೊಂಡಿದ್ದಾರೆ. ಹೀಗೆ ಆಗಸ್ಟ್ 20, ಶುಕ್ರವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಈ ಕೆಳಕಂಡ ಹಲವಾರು ಘಟನೆಗಳು ನಡೆದಿವೆ.

* ಹೈದರಾಬಾದ್ ತಂಡದ ವೇಗದ ಬೌಲರ್ ಸಂದೀಪ್ ಶರ್ಮಾ ತನ್ನ ಬಾಲ್ಯದ ಗೆಳತಿ ತಶಾ ಸಾತ್ವಿಕ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

* ಮುಂಬರಲಿರುವ ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಕುರಿತು ಮಾತನಾಡಿರುವ ಗೌತಮ್ ಗಂಭೀರ್ ಈ ಬಾರಿಯ ಟೂರ್ನಿಯಲ್ಲಿ ಭಾರತ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೆಮಿಫೈನಲ್ ಹಂತವನ್ನು ತಲುಪಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

* ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಜೀವರಕ್ಷಕ ಗಳ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನ್ಯೂಜಿಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕ್ರಿಸ್ ಕೇರ್ನ್ಸ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

* ಮುಂಬರಲಿರುವ ಐಪಿಎಲ್ ಟೂರ್ನಿಗೆ ಆಸ್ಟ್ರೇಲಿಯಾ ತಂಡದ ಕೇನ್ ರಿಚರ್ಡ್ಸನ್ ಅಲಭ್ಯರಾಗಲಿದ್ದಾರೆ. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿರುವ ಕೇನ್ ರಿಚರ್ಡ್ಸನ್ ಮುಂದುವರಿಯಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಿಳಿಸಿದೆ.

* 2009 ರಲ್ಲಿ ಮುಂಬೈ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆದಿದ್ದ ಟೆಸ್ಟ್ ಪಂದ್ಯವೊಂದರಲ್ಲಿ 293 ರನ್ ಗಳಿಸಿ ಶತಕದ ಹೊಸ್ತಿಲಲ್ಲಿದ್ದ ವಿರೇಂದ್ರ ಸೆಹ್ವಾಗ್ ಬಳಿ ಬಂದ ರಾಹುಲ್ ದ್ರಾವಿಡ್ ಈ ದಿನದಾಟ ಮುಗಿಯುವ ಹಂತದಲ್ಲಿದೆ ಹೀಗಾಗಿ ಈ ದಿನ ತ್ರಿಶತಕ ಬಾರಿಸುವ ಪ್ರಯತ್ನವನ್ನು ಮಾಡಿ ಎಡವಬೇಡ, ಮಾರನೇ ದಿನದ ಆಟ ಆರಂಭವಾದ ಬಳಿಕ ತ್ರಿಶತಕವನ್ನು ಪೂರೈಸು ಎಂದು ವಿರೇಂದ್ರ ಸೆಹ್ವಾಗ್ ಅವರಿಗೆ ಸಲಹೆ ನೀಡಿದ್ದರಂತೆ. ರಾಹುಲ್ ದ್ರಾವಿಡ್ ನೀಡಿದ ಈ ಸಲಹೆಯಂತೆ ಆ ದಿನ ರಾತ್ರಿ ಶತಕವನ್ನು ಪೂರೈಸಿಕೊಳ್ಳದೆ ಮರುದಿನ ಬ್ಯಾಟಿಂಗ್ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ವಿರೇಂದ್ರ ಸೆಹ್ವಾಗ್ ವಿಕೆಟ್ ಒಪ್ಪಿಸುವ ಮೂಲಕ ತ್ರಿಶತಕ ಬಾರಿಸುವ ಅವಕಾಶವನ್ನು ಕೈ ತಪ್ಪಿಸಿಕೊಂಡಿದ್ದರಂತೆ. ಹೀಗೆ ರಾಹುಲ್ ದ್ರಾವಿಡ್ ಮಾತನ್ನು ಕೇಳಿ 7 ರನ್‌ಗಳಿಂದ ಮಹತ್ತರ ದಾಖಲೆಯನ್ನು ಕೈತಪ್ಪಿಸಿಕೊಂಡ ವಿರೇಂದ್ರ ಸೆಹ್ವಾಗ್ ಜೀವನದಲ್ಲಿ ರಾಹುಲ್ ದ್ರಾವಿಡ್ ಮಾತನ್ನು ಕೇಳಲೇ ಬಾರದು ಎಂದು ಮುತ್ತಯ್ಯ ಮುರಳೀಧರನ್ ಬಳಿ ಹೇಳಿಕೊಂಡಿದ್ದರಂತೆ.

ದ್ರಾವಿಡ್ ಮಾತನ್ನು ಕೇಳಲೇಬಾರದು ಎಂದು ಮುರಳೀಧರನ್ ಬಳಿ ನೋವು ಹಂಚಿಕೊಂಡಿದ್ದ ಸೆಹ್ವಾಗ್!ದ್ರಾವಿಡ್ ಮಾತನ್ನು ಕೇಳಲೇಬಾರದು ಎಂದು ಮುರಳೀಧರನ್ ಬಳಿ ನೋವು ಹಂಚಿಕೊಂಡಿದ್ದ ಸೆಹ್ವಾಗ್!

* ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದ ರವಿಚಂದ್ರನ್ ಅಶ್ವಿನ್ ತಮಗೆ ಅವಕಾಶ ಸಿಗದೇ ಇರುವುದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ರವಿಚಂದ್ರನ್ ಅಶ್ವಿನ್ ಅವರಿಗೆ ತಂಡದ ಆಡುವ ಬಳಗದಲ್ಲಿ ಅವಕಾಶ ಸಿಗುವುದು ಖಚಿತವಾಗಿತ್ತು. ಆದರೆ ತದನಂತರ ಮೋಡಕವಿದ ವಾತಾವರಣ ನಿರ್ಮಾಣವಾದ್ದರಿಂದ ಕೇವಲ ಓರ್ವ ಸ್ಪಿನ್ ಬೌಲರ್ ಸಾಕು ಎಂಬ ನಿರ್ಣಯಕ್ಕೆ ಬಂದ ಟೀಮ್ ಇಂಡಿಯಾ ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶವನ್ನು ನೀಡಲಿಲ್ಲ. ಈ ವಿಷಯವನ್ನು ಸ್ವತಃ ರವಿಚಂದ್ರನ್ ಅಶ್ವಿನ್ ಅವರೇ ಹಂಚಿಕೊಂಡಿದ್ದಾರೆ.

Story first published: Friday, August 20, 2021, 21:56 [IST]
Other articles published on Aug 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X