ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಹುಲ್ ಕುರಿತು ಬೇಸರಗೊಂಡ ಪಂಜಾಬ್ ಮಾಲೀಕರು, 2ನೇ ಟೆಸ್ಟ್‌ಗೆ ಮಳೆ ಅಡ್ಡಿ; ಡಿ. 2ರ ಕ್ರಿಕೆಟ್‌ ಸುದ್ದಿಗಳು

What happened in the cricket world on December 2

ಡಿಸೆಂಬರ್ 2ರ ಗುರುವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ಪ್ರಮುಖ ವಿದ್ಯಮಾನಗಳು ಜರುಗಿದ್ದು ಒಂದೆಡೆ ಪಂಜಾಬ್ ಕಿಂಗ್ಸ್ ಮಾಲೀಕರು ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡದಲ್ಲಿಯೇ ಮುಂದುವರೆಯದೇ ಇರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಸಲುವಾಗಿ ಇತ್ತಂಡಗಳ ಆಟಗಾರರು ನಡೆಸುತ್ತಿದ್ದ ಅಭ್ಯಾಸಕ್ಕೆ ಮಳೆರಾಯ ಅಡ್ಡಿಯುಂಟು ಮಾಡಿದ್ದಾನೆ ಹೀಗೆ ಡಿಸೆಂಬರ್ 2ರಂದು ಜರುಗಿದ ಕ್ರಿಕೆಟ್ ವಿದ್ಯಮಾನಗಳ ವಿವರ ಈ ಕೆಳಕಂಡಂತಿದೆ.

* "ರಿಟೆನ್ಷನ್ ಪ್ರಕ್ರಿಯೆಯಲ್ಲಿ ನಾವು ಕೆಎಲ್ ರಾಹುಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಯತ್ನ ಮಾಡಿದೆವು. ಆದರೆ ಕೆಎಲ್ ರಾಹುಲ್ ಮೆಗಾ ಹರಾಜಿನಲ್ಲಿ ಭಾಗವಹಿಸಬೇಕೆಂಬ ಇಚ್ಛೆಯನ್ನು ವ್ಯಕ್ತಪಡಿಸಿ ತಂಡದಿಂದ ಹೊರಗುಳಿದರು. ರಿಟೆನ್ಷನ್ ಪ್ರಕ್ರಿಯೆಗೂ ಮುನ್ನ ಕೆಎಲ್ ರಾಹುಲ್ ಬೇರೆ ಯಾವುದೇ ಫ್ರಾಂಚೈಸಿ ಜೊತೆ ಖರೀದಿ ಕುರಿತಾಗಿ ಸಂಪರ್ಕ ಬೆಳೆಸಿದರೆ ಅದೊಂದು ನೀತಿಗೆಟ್ಟ ಕೆಲಸವಾಗಲಿದೆ" ಎಂದು ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ. ಇನ್ನೂ ಮುಂದುವರಿದು ಪಂಜಾಬ್ ಕಿಂಗ್ಸ್ ರಿಟೇನ್ ಮಾಡಿಕೊಂಡಿರುವ ಆಟಗಾರರಾದ ಮಯಾಂಕ್ ಅಗರ್ವಾಲ್ ಮತ್ತು ಅರ್ಷ್ ದೀಪ್ ಸಿಂಗ್ ಕುರಿತು ವಿಶೇಷವಾಗಿ ಮಾತನಾಡಿದ ನೆಸ್ ವಾಡಿಯಾ "ಪಂಜಾಬ್ ಕಿಂಗ್ಸ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಮಯಾಂಕ್ ಅಗರ್ವಾಲ್ ಮತ್ತು ಅರ್ಷ್ ದೀಪ್ ಸಿಂಗ್ ಅವರನ್ನು ರಿಟೈನ್ ಮಾಡಿಕೊಂಡಿರುವುದು ತುಂಬಾ ಸಂತಸದ ವಿಷಯ. ಮಯಾಂಕ್ ಅಗರ್ವಾಲ್ ತಂಡದ ಓರ್ವ ಅತ್ಯದ್ಭುತ ಆಟಗಾರ ಮತ್ತು ಅರ್ಷ್ ದೀಪ್ ಸಿಂಗ್ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತ ಅಂತರರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ" ಎಂದು ಹೇಳಿಕೆ ನೀಡಿದ್ದಾರೆ.

* ಇತ್ತೀಚೆಗಷ್ಟೇ ಭಾರತ ಮತ್ತು ನ್ಯೂಜಿಲೆಂಡ್ ತಂಡದ ಆಟಗಾರರು ಮುಂಬೈ ನಗರ ತಲುಪಿ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಭ್ಯಾಸಗಳಲ್ಲಿ ತೊಡಗಿಕೊಂಡಿದ್ದರು. ಆದರೆ ಪಂದ್ಯ ಆರಂಭವಾಗಲು ಇನ್ನೇನು 1 ದಿನ ಮಾತ್ರ ಬಾಕಿ ಇದೆ ಎನ್ನುವಾಗಲೇ ಮುಂಬೈ ನಗರದಲ್ಲಿ ನಿರಂತರವಾದ ಮಳೆ ಸುರಿದಿದೆ. ಪರಿಣಾಮ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣ ಸಂಪೂರ್ಣ ತೇವವಾಗಿದ್ದು ಇಂದು ( ಡಿಸೆಂಬರ್ 2 ) ನಡೆಯಬೇಕಿದ್ದ ಆಟಗಾರರ ಅಭ್ಯಾಸಕ್ಕೆ ಬ್ರೇಕ್ ಬಿದ್ದಿದೆ. ಹೌದು, ಬುಧವಾರ ರಾತ್ರಿಯಿಡೀ ಮುಂಬೈ ನಗರದಲ್ಲಿ ನಿರಂತರವಾಗಿ ಮಳೆ ಸುರಿದಿದ್ದು ಎರಡೂ ತಂಡಗಳ ಅಭ್ಯಾಸಕ್ಕೆ ಹೊಡೆತ ಬಿದ್ದಿದೆ.

* ಭಾರತದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ವಿರಾಟ್ ಕೊಹ್ಲಿ ಆಗಮನದಿಂದಾಗಿ ತಂಡದಿಂದ ಯಾರಿಗೆ ಕೊಕ್‌ ನೀಡಲಾಗುವುದು ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಚೇತೇಶ್ವರ ಪೂಜಾರವನ್ನ ಬೆಂಬಲಿಸಿರುವ ಚೋಪ್ರಾ ರಹಾನೆಯನ್ನ ಪ್ಲೇಯಿಂಗ್ 11ನಿಂದ ಆಚೆಗಿಡುವುದು ಉತ್ತಮ ಎನ್ನಲಾಗಿದೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಚೋಪ್ರಾ, ಕೊಹ್ಲಿಗೆ ದಾರಿ ಮಾಡಿಕೊಡಲು ರಹಾನೆ ಅವರನ್ನು ತಂಡದಿಂದ ತೆಗೆದುಹಾಕಬಹುದು ಎಂದು ಹೇಳಿದರು. ಆದಾಗ್ಯೂ, ಆಡುವ ಹನ್ನೊಂದರ ಬಳಗದಲ್ಲಿ ಕೊಹ್ಲಿ ಮತ್ತು ರಹಾನೆ ಇಬ್ಬರೊಂದಿಗೆ ತಂಡವು ವಿಭಿನ್ನ ಸಂಯೋಜನೆಯನ್ನು ನೋಡಬಹುದು ಎಂದು ಅವರು ಸಲಹೆ ನೀಡಿದರು.

* ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ಸೂಪರ್ ಸ್ಟಾರ್‌ ಸುನಿಲ್ ಶೆಟ್ಟಿ ಮಗಳು ಅಥಿಯಾ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳಿದ್ದವು. ಆದ್ರೆ ಈ ಬಗ್ಗೆ ಇಬ್ಬರೂ ಯಾವುದೇ ಸಾರ್ವಜನಿಕ ಹೇಳಿಕೆಯಾಗಲಿ ಅಥವಾ ಕಾಣಿಸಿಕೊಂಡಿದ್ದಾಗಲಿ ಇಲ್ಲ. ಆದ್ರೆ ಪರಸ್ಪರ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಂವಹನ ನಡೆಸುತ್ತಿದ್ದರು. ಆದ್ರೀಗ ಮೊದಲ ಬಾರಿಗೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಸುನಿಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿಯವರ ಚೊಚ್ಚಲ ಚಿತ್ರ 'ತಡಪ'ದ ಪ್ರೀಮಿಯರ್ ಶೋದಲ್ಲಿ ರಾಹುಲ್ ಅಥಿಯಾ ಜೊಡಿ ಕ್ಯಾಮೆರಾಗಳಿಗೆ ಪೋಸ್ ನೀಡಿದೆ. ಅಥಿಯಾ ಶೆಟ್ಟಿಯವರ ಸಹೋದರ ಅಹಾನ್ ಶೆಟ್ಟಿಯವರ ಚೊಚ್ಚಲ ಚಿತ್ರದ ಮೊದಲ ಪ್ರದರ್ಶನಕ್ಕೆ ಇಬ್ಬರು ಆಗಮಿಸಿದ್ದರು.

Virat Kohliಗೆ ಮೊದಲ ಬಾರಿಗೆ ಅಭ್ಯಾಸ ಮಾಡಿಸಿದ Rahul Dravid | Oneindia Kannada

{document1}

Story first published: Thursday, December 2, 2021, 23:09 [IST]
Other articles published on Dec 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X