ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಕ್ಷರ್ ಪಟೇಲ್ ಬೌಲಿಂಗ್‌ ಮ್ಯಾಜಿಕ್ ಮುಂದೆ ಮಂಕಾದ ನ್ಯೂಜಿಲೆಂಡ್‌: ನವೆಂಬರ್‌ 27ರ ಕ್ರಿಕೆಟ್ ಸುದ್ದಿಗಳು

What happened in the cricket world on November 27

ನವೆಂಬರ್‌ 27ರ ಶನಿವಾರದಂದು ಕ್ರಿಕೆಟ್ ಜಗತ್ತಿನಲ್ಲಿ ಹಲವಾರು ವಿದ್ಯಮಾನಗಳು ಜರುಗಿದ್ದು, ಒಂದೆಡೆ ಕಾನ್ಪುರದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂದು ಅಕ್ಷರ್ ಪಟೇಲ್ ಮತ್ತೊಮ್ಮೆ 5 ವಿಕೆಟ್ ಗೊಂಚಲು ಪಡೆಯುವುದರ ಮೂಲಕ ನೂತನ ದಾಖಲೆ ಬರೆದಿದ್ದರೆ, ಮತ್ತೊಂದೆಡೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದ ದ್ವಿತೀಯ ದಿನದಾಟದಲ್ಲಿ ಬಾಂಗ್ಲಾದೇಶದ ಬೌಲರ್‌ಗಳು ಪಾಕಿಸ್ತಾನದ ವಿಕೆಟ್ ಪಡೆಯಲಾಗದೇ ಹೈರಾಣಾಗಿದ್ದಾರೆ. ಹೀಗೆ ನವೆಂಬರ್‌ 27ರ ಕ್ರಿಕೆಟ್ ಜಗತ್ತಿನ ವಿವಿಧ ಸುದ್ದಿಗಳ ರೌಂಡ್ ಅಪ್ ಈ ಕೆಳಕಂಡಂತಿದೆ.

* ಟೀಮ್ ಇಂಡಿಯಾ ಸದ್ಯ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರತವಾಗಿದ್ದು, ಈ ಸರಣಿ ಮುಗಿದ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಬೇಕಾಗಿದೆ. ಡಿಸೆಂಬರ್ 8 ಅಥವಾ 9ರಂದು ಟೀಮ್ ಇಂಡಿಯಾ ಆಟಗಾರರು ಸೌತ್ ಆಫ್ರಿಕಾಕ್ಕೆ ಹಾರಬೇಕಾಗಿದೆ. ಆದರೆ ಇದೀಗ ಬಂದಿರುವ ಮಾಹಿತಿಯ ಪ್ರಕಾರ ದಕ್ಷಿಣ ಆಫ್ರಿಕಾದಲ್ಲಿ ಕೊರೋನಾವೈರಸ್ ಹೆಚ್ಚಾಗುತ್ತಿರುವುದರಿಂದ ಟೀಮ್ ಇಂಡಿಯಾ ಆಟಗಾರರು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಳ್ಳಬೇಕೆಂದರೆ ಭಾರತ ಸರ್ಕಾರದ ಅನುಮತಿಯನ್ನು ಪಡೆದು ಕೊಳ್ಳಲೇಬೇಕಾಗಿದೆ ಎನ್ನಲಾಗುತ್ತಿದೆ.

* ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೂರನೇ ದಿನದಾಟದಂದು ವೃದ್ಧಿಮಾನ್ ಸಹಾ ಬದಲು ಶ್ರೀಕರ್ ಭರತ್ ಕೀಪರ್ ಕೈಗವಸು ತೊಟ್ಟು ಕಣಕ್ಕಿಳಿದಿದ್ದರು. ತೃತೀಯ ದಿನದಾಟದ ಆರಂಭಕ್ಕೂ ಮುನ್ನ ವೃದ್ಧಿಮಾನ್ ಸಹಾ ಕುತ್ತಿಗೆ ನೋವಿನಿಂದ ಬಳಲುತ್ತಿದ್ದ ಕಾರಣದಿಂದಾಗಿ ಶ್ರೀಕರ್ ಭರತ್ ಕಣಕ್ಕಿಳಿಯಬೇಕಾಗಿ ಬಂತು. ಹೀಗೆ ಕಣಕ್ಕಿಳಿದ ಶ್ರೀಕರ್ ಭರತ್ ಮೊದಲಿಗೆ ವಿಲ್ ಯಂಗ್ ಅವರ ಕ್ಯಾಚ್ ಪಡೆದರು, ನಂತರ ಅಕ್ಷರ್ ಪಟೇಲ್ ಎಸೆತದಲ್ಲಿ ರಾಸ್ ಟೇಲರ್ ಅವರ ಕ್ಯಾಚ್‌ನ್ನೂ ಕೂಡ ಕಬಳಿಸಿದರು. ಹೀಗೆ ವಿಲ್ ಯಂಗ್ ಮತ್ತು ರಾಸ್ ಟೇಲರ್ ಅವರ ಕ್ಯಾಚ್‌ಗಳನ್ನು ಪಡೆದ ಕೆ ಎಸ್ ಭರತ್ ನ್ಯೂಜಿಲೆಂಡ್ ತಂಡದ ಮತ್ತೋರ್ವ ಆಟಗಾರ ಟಾಮ್ ಲಾಥಮ್ ಅವರನ್ನು ಸ್ಟಂಪ್ ಔಟ್ ಮಾಡಿದರು. ಹೌದು, 103ನೇ ಓವರ್‌ನಲ್ಲಿ ಬೌಲರ್ ಅಕ್ಷರ್ ಪಟೇಲ್ ಎಸೆದ ಮೊದಲ ಎಸೆತವನ್ನು ಟಾಮ್ ಲಾಥಮ್ ಬಾರಿಸುವಲ್ಲಿ ವಿಫಲರಾದರು. ಅದೊಂದು ಕ್ಲಿಷ್ಟಕರವಾದ ಎಸೆತವಾಗಿದ್ದ ಕಾರಣ ಟಾಮ್ ಲಾಥಮ್ ಅವರ ಹೊಡೆತಕ್ಕೆ ಸಿಕ್ಕದ ಆ ಚೆಂಡನ್ನು ಮಿಂಚಿನಂತೆ ಹಿಡಿದ ವಿಕೆಟ್ ಕೀಪರ್ ಕೆ ಎಸ್ ಭರತ್ ಕ್ಷಣಾರ್ಧದಲ್ಲಿ ವಿಕೆಟ್‍ಗೆ ತಾಗಿಸಿ ಸ್ಟಂಪ್ ಔಟ್ ಮಾಡಿದರು. ಹೀಗೆ ತಂಡದ ಅಧಿಕೃತ ಆಡುವ ಬಳಗದಲ್ಲಿ ಅವಕಾಶ ಸಿಗದೇ ಇದ್ದರೂ ಕೂಡ ಹೆಚ್ಚುವರಿ ಆಟಗಾರನಾಗಿ ಕಣಕ್ಕಿಳಿದು ಕೆ ಎಸ್ ಭರತ್ ನೀಡಿರುವ ಈ ಅತ್ಯುತ್ತಮ ಪ್ರದರ್ಶನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

* ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ತೃತೀಯ ದಿನದಾಟದಂದು ಅಕ್ಷರ್ ಪಟೇಲ್ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. 6 ಮೇಡನ್ ಓವರ್ ಸಹಿತ 34 ಓವರ್ ಬೌಲಿಂಗ್ ಮಾಡಿದ ಅಕ್ಷರ್ ಪಟೇಲ್ 62 ರನ್ ಮಾತ್ರ ನೀಡಿದರು ಮತ್ತು 5 ವಿಕೆಟ್‍ಗಳನ್ನು ಪಡೆದು ಮಿಂಚಿದರು. ಈ ಮೂಲಕ ಈ ವರ್ಷ ನಡೆದಿರುವ ಟೆಸ್ಟ್ ಪಂದ್ಯಗಳ ಪೈಕಿ ಅತಿಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದಿರುವ ಆಟಗಾರ ಎಂಬ ದಾಖಲೆಯನ್ನು ಕೂಡ ಅಕ್ಷರ್ ಪಟೇಲ್ ಬರೆದರು.

RCBಗೆ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎನ್ನುವುದೇ ತಲೆನೋವು | Oneindia Kannada

* ಔಟ್ ಇದ್ದರೂ ಕೂಡ ವಿಕೆಟ್ ಸಿಗದ ಹತಾಶೆಯಲ್ಲಿ ರವಿಚಂದ್ರನ್ ಅಶ್ವಿನ್ ನೆಲಕ್ಕೆ ಕಾಲಿನಿಂದ ಒದೆಯುವ ಮೂಲಕ ಬೇಸರವನ್ನು ಹೊರಹಾಕಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇಂತಹ ಎಸೆತಗಳಿಗೂ ಕೂಡ ಡಿ ಆರ್ ಎಸ್ ತೆಗೆದುಕೊಳ್ಳದೇ ಇರುವ ಅಜಿಂಕ್ಯ ರಹಾನೆ ಕುರಿತು ಟೀಕೆಗಳು ವ್ಯಕ್ತವಾಗುತ್ತಿವೆ. ರವಿಚಂದ್ರನ್ ಅಶ್ವಿನ್ ಅವರ ಎಸೆತದಲ್ಲಿ ಟಾಮ್ ಲಾಥಮ್ 66 ರನ್ ಗಳಿಸಿದ್ದಾಗ ಎಲ್ ಬಿ ಡಬ್ಲ್ಯೂ ಆಗಿದ್ದರು. ರವಿಚಂದ್ರನ್ ಎಸೆದ ಸ್ಪಷ್ಟವಾದ ಎಸೆತವನ್ನು ಎದುರಿಸಲಾಗದ ಟಾಮ್ ಲಾಥಮ್ ಚೆಂಡಿಗೆ ಬ್ಯಾಟ್ ತಾಗಿಸುವಲ್ಲಿ ವಿಫಲರಾಗಿದ್ದರು, ಹೀಗಾಗಿ ಚೆಂಡು ನೇರವಾಗಿ ಟಾಮ್ ಲಾಥಮ್ ಕಾಲಿಗೆ ಬಡಿದಿತ್ತು. ಔಟ್ ಇದ್ದರೂ ಕೂಡ ವಿಕೆಟ್ ಸಿಗದ ಹತಾಶೆಯಲ್ಲಿ ರವಿಚಂದ್ರನ್ ಅಶ್ವಿನ್ ನೆಲಕ್ಕೆ ಕಾಲಿನಿಂದ ಒದೆಯುವ ಮೂಲಕ ಬೇಸರವನ್ನು ಹೊರಹಾಕಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇಂತಹ ಎಸೆತಗಳಿಗೂ ಕೂಡ ಡಿ ಆರ್ ಎಸ್ ತೆಗೆದುಕೊಳ್ಳದೇ ಇರುವ ಅಜಿಂಕ್ಯ ರಹಾನೆ ಕುರಿತು ಟೀಕೆಗಳು ವ್ಯಕ್ತವಾಗುತ್ತಿವೆ.

Story first published: Sunday, November 28, 2021, 0:08 [IST]
Other articles published on Nov 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X