ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿವೀಸ್ ವಿರುದ್ಧದ ಸರಣಿಗೆ ಕೊಹ್ಲಿ ಅನುಮಾನ, ಆರ್‌ಸಿಬಿಗೆ ಹೊಸ ಕೋಚ್: ನ. 9ರ ಪ್ರಮುಖ ಕ್ರಿಕೆಟ್‍ ಸುದ್ದಿಗಳು

What happened in the cricket world on November 9

ನವೆಂಬರ್‌ 9ರ ಮಂಗಳವಾರದಂದು ಕ್ರಿಕೆಟ್‌ ಜಗತ್ತಿನಲ್ಲಿ ಹಲವಾರು ಪ್ರಮುಖ ಘಟನೆಗಳು ನಡೆದಿದ್ದು ಒಂದೆಡೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎಲಿಮಿನೇಟರ್ ಸುತ್ತಿನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನೂತನ ಕೋಚ್ ಆಯ್ಕೆಯಾಗಿದ್ದರೆ, ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ 'ಎ' ತಂಡ ಪ್ರಕಟವಾಗಿದೆ. ಹೀಗೆ ನವೆಂಬರ್‌ 9ರಂದು ಕ್ರಿಕೆಟ್‌ ಜಗತ್ತಿನಲ್ಲಿ ನಡೆದ ಪ್ರಮುಖ ಘಟನೆಗಳ ಪಟ್ಟಿ ಈ ಕೆಳಕಂಡಂತಿದೆ.

* "ಎಷ್ಟೇ ಯುವ ಕ್ರಿಕೆಟಿಗರು ಟೀಮ್ ಇಂಡಿಯಾ ಸೇರಿದರೂ ಸಹ ಮತ್ತೋರ್ವ ಕೊಹ್ಲಿಯಂತೂ ನಮಗೆ ಸಿಗುವುದಿಲ್ಲ. ಆತ ತನ್ನ ಅದ್ಭುತ ಬ್ಯಾಟಿಂಗ್ ಮೂಲಕ ತೋರುವ ಸ್ಥಿರತೆ ಯಾರಿಂದಲೂ ಸಾಧ್ಯವಾಗುವುದಿಲ್ಲ. ಭಾರತ ಟಿ ಟ್ವೆಂಟಿ ತಂಡದಲ್ಲಿ ಆತನ ಸ್ಥಾನದ ಕುರಿತು ಪ್ರಶ್ನೆ ಎತ್ತುವುದು ಸರಿಯಲ್ಲ. ಆತ ಇಷ್ಟಪಡುವವರೆಗೂ ಆತ ಭಾರತ ಟಿ ಟ್ವೆಂಟಿ ತಂಡದಲ್ಲಿ ಇರಬಹುದು" ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

 ಭಾರತ ಟಿ20 ತಂಡಕ್ಕೆ ರಾಹುಲ್‌ ಅಲ್ಲ ರೋಹಿತ್ ನಾಯಕ, ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ನಿಂದ ಕೊಹ್ಲಿ ಔಟ್! ಭಾರತ ಟಿ20 ತಂಡಕ್ಕೆ ರಾಹುಲ್‌ ಅಲ್ಲ ರೋಹಿತ್ ನಾಯಕ, ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ನಿಂದ ಕೊಹ್ಲಿ ಔಟ್!

* ವಿರೇಂದ್ರ ಸೆಹ್ವಾಗ್ ಮಾತ್ರವಲ್ಲದೆ ಭಾರತದ ಮತ್ತೋರ್ವ ಮಾಜಿ ಕ್ರಿಕೆಟಿಗ ಆಶಿಶ್ ನೆಹ್ರಾ ಕೂಡ ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ. ವಿರಾಟ್ ಕೊಹ್ಲಿ ರೀತಿಯ ಸ್ಥಿರತೆಯ ಆಟವನ್ನು ಬೇರೆ ಯಾವ ಆಟಗಾರನೂ ಕೂಡ ಆಡಲಾದ ಎಂದಿರುವ ಆಶಿಶ್ ನೆಹ್ರಾ ಕೊಹ್ಲಿ ಜೊತೆಗೆ ಯುವ ಆಟಗಾರರ ಕಾಂಬಿನೇಷನ್ ಕಣಕ್ಕಿಳಿಯಬೇಕು ಎಂದಿದ್ದಾರೆ. ಈ ರೀತಿ ಅನುಭವಿ ಮತ್ತು ಯುವ ಆಟಗಾರರ ಕಾಂಬಿನೇಷನ್ ತಂಡಕ್ಕೆ ದೊಡ್ಡ ಅನುಕೂಲವಾಗಿ ಪರಿಣಮಿಸಲಿದೆ ಎಂಬುದು ಆಶಿಶ್ ನೆಹ್ರಾ ಅವರ ಅಭಿಪ್ರಾಯ.

ಟಿ20 ವಿಶ್ವಕಪ್: ಈ 5 ಅಂಶಗಳು ಸರಿ ಇದ್ದಿದ್ದರೆ ಟೀಮ್ ಇಂಡಿಯಾ ಸೆಮಿಫೈನಲ್‌ನಲ್ಲಿ ಇರುತ್ತಿತ್ತು!ಟಿ20 ವಿಶ್ವಕಪ್: ಈ 5 ಅಂಶಗಳು ಸರಿ ಇದ್ದಿದ್ದರೆ ಟೀಮ್ ಇಂಡಿಯಾ ಸೆಮಿಫೈನಲ್‌ನಲ್ಲಿ ಇರುತ್ತಿತ್ತು!

* ಇಂದು ( ನವೆಂಬರ್‌ 9 ) ಡೇಲ್ ಸ್ಟೇನ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ "ಯಾರಾದರೂ ಪ್ರಶ್ನೆಯನ್ನು ಕೇಳುವವರಿದ್ದರೆ ಕೇಳಿ ನಾನು ಬಿಡುವು ಮಾಡಿಕೊಂಡಿದ್ದೇನೆ ಮಾತನಾಡೋಣ" ಎಂಬ ಟ್ವೀಟ್ ಮಾಡಿದ್ದರು. ಡೇಲ್ ಸ್ಟೇನ್ ಈ ರೀತಿಯ ಟ್ವೀಟ್ ಮಾಡಿದ್ದೇ ತಡ ಕ್ರಿಕೆಟ್ ಅಭಿಮಾನಿಗಳು ಸಾಲು ಸಾಲು ಪ್ರಶ್ನೆಗಳನ್ನು ಡೇಲ್ ಸ್ಟೈನ್ ಅವರಿಗೆ ಕೇಳಲು ಆರಂಭಿಸಿದರು. ಹೀಗೆ ವಿಶ್ವದ ಮೂಲೆಮೂಲೆಗಳಿಂದ ಕೇಳಿ ಬಂದ ಅಭಿಮಾನಿಗಳ ಪ್ರಶ್ನೆಗಳಿಗೆ ಡೇಲ್ ಸ್ಟೇನ್ ಒಂದೊಂದಾಗಿ ಉತ್ತರಗಳನ್ನು ನೀಡಿದ್ದಾರೆ. ಹೀಗೆ ಭಾರತ ಮೂಲದ ಕ್ರಿಕೆಟ್ ಅಭಿಮಾನಿ ಜಯಂತ್ ಕುಮಾರ್ ನಾಥ್ ಎಂಬುವವರು ಡೇಲ್ ಸ್ಟೇನ್ ಅವರಿಗೆ "ಈಗಿನ ತಲೆಮಾರಿನಲ್ಲಿ ಯಾವ ಕ್ರಿಕೆಟಿಗ ನಿಮ್ಮ ಬೌಲಿಂಗ್‌ಗೆ ತೊಂದರೆಯನ್ನುಂಟು ಮಾಡಬಹುದು ಎಂದೆನಿಸುತ್ತದೆ?" ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಜಯಂತ್ ಕುಮಾರ್ ನಾಥ್ ಅವರ ಈ ಪ್ರಶ್ನೆಗೆ ಮರುಟ್ವೀಟ್ ಮಾಡಿದ ಡೇಲ್ ಸ್ಟೇನ್ ಕೆಎಲ್ ರಾಹುಲ್ ಎಂಬ ಉತ್ತರವನ್ನು ನೀಡಿದ್ದಾರೆ. ಈ ಮೂಲಕ ಈಗಿನ ತಲೆಮಾರಿನಲ್ಲಿ ಕೆಎಲ್ ರಾಹುಲ್ ಅವರಿಗೆ ಬೌಲಿಂಗ್ ಮಾಡುವುದು ತೀರಾ ಕಷ್ಟ ಎಂಬುದನ್ನು ಡೇಲ್ ಸ್ಟೇನ್ ವ್ಯಕ್ತಪಡಿಸಿದ್ದಾರೆ.

* ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಮ್ ಇಂಡಿಯಾ 'ಎ' ತಂಡ ಪ್ರಕಟಗೊಂಡಿದ್ದು, ಪ್ರಿಯಾಂಕ್ ಪಂಚಲ್ ನೇತೃತ್ವದಲ್ಲಿ ತಂಡ ಮುನ್ನೆಡೆಯಲಿದೆ. 23 ನವೆಂಬರ್ 2021 ರಂದು ಬ್ಲೋಮ್‌ಫಾಂಟೈನ್‌ನಲ್ಲಿ ಪ್ರಾರಂಭಗೊಳ್ಳಲಿರುವ ಮೂರು ನಾಲ್ಕು ದಿನಗಳ ಪಂದ್ಯಗಳಿಗಾಗಿ ಭಾರತ 'ಎ' ತಂಡವು ಸಿದ್ಧವಾಗಿದೆ.

ಇಂಡೋ-ಪಾಕ್ ಪಂದ್ಯವನ್ನು ಎಷ್ಟು ಮಂದಿ ನೋಡಿದ್ದಾರೆ?ಕ್ರಿಕೆಟ್ ಇತಿಹಾಸದ ಹೊಸ ದಾಖಲೆ | Oneindia Kannada

* ವಿದರ್ಭದ ಎಡಗೈ ಸಾಂಪ್ರದಾಯಿಕ ಸ್ಪಿನ್ನರ್ ಅಕ್ಷಯ್ ಕರ್ನೆವರ್ ವಿಶ್ವದಾಖಲೆ ಮಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅಕ್ಷಯ್ ಕರ್ನೆವಾರ್ ಇದುವರೆಗೂ ಯಾರೂ ಮಾಡದ ಸಾಧನೆ ಗರಿ ಪಡೆದಿದ್ದಾರೆ. ಹೌದು, ಸದ್ಯ ವಿದರ್ಭದಲ್ಲಿ ಅಕ್ಷಯ್ ಸಾಧನೆಯದ್ದೇ ಮಾತಾಗಿದೆ. ಸೋಮವಾರ ಅಂದರೆ ನಿನ್ನೆ ಅಕ್ಷಯ್‌ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಹಿಂದೆಂದೂ ಕಾಣದ ಸಾಧನೆ ಮಾಡಿದ್ದು, ನಾಲ್ಕು ಓವರ್‌ಗಳಲ್ಲಿ ಯಾವುದೇ ರನ್ ನೀಡದೆ ನಾಲ್ಕು ಮೇಡನ್ ಓವರ್‌ ಮಾಡಿದ್ದಾರೆ.

Story first published: Wednesday, November 10, 2021, 0:59 [IST]
Other articles published on Nov 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X