ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್, ಇಂಗ್ಲೆಂಡ್ ತಂಡಗಳಿಂದ ಭಾರತ ಕಲಿಯಬೇಕಿರುವುದು ಇದು: ವೀರೇಂದ್ರ ಸೆಹ್ವಾಗ್

What India can learn from New Zealand and England, Virender Sehwag explains

ಈ ಬಾರಿಯ ಟಿ20 ವಿಶ್ವಕಪ್ ಅಂತಿಮ ಘಟ್ಟವನ್ನು ತಲುಪಿದೆ. ಫೈನಲ್ ಪಂದ್ಯ ಮಾತ್ರವೇ ಬಾಕಿಯಿದ್ದು ಮುಂದಿನ ಭಾನುವಾರ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಫೈನಲ್ ಪಂದ್ಯದಲ್ಲಿ ಸೆಣೆಸಾಟವನ್ನು ನಡೆಸಲಿದೆ. ಈ ಫೈನಲ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಟೀಮ್ ಇಂಡಿಯಾ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಈಗಿನ ಭಾರತ ತಂಡದ ಆಟಗಾರರು ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳಿಂದ ಕಲಿಯಬೇಕಾದ ಅಂಶವೇನು ಎಂಬುದನ್ನು ಹೇಳಿದ್ದಾರೆ.

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡ ಇಯಾನ್ ಮಾರ್ಗನ್ ಬಳಗವನ್ನು ಐದು ವಿಕೆಟ್‌ಗಳ ಅಂತರದಿಂದ ಸೋಲಿಸಿತ್ತು. ಈ ಮೂಲಕ ನ್ಯೂಜಿಲೆಂಡ್ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್‌ನ ಫೈನಲ್‌ಗೇರಿದೆ.

2 ದಿನಗಳ ಹಿಂದಷ್ಟೇ ICUನಲ್ಲಿದ್ದ ರಿಜ್ವಾನ್ ಆಸ್ಟ್ರೇಲಿಯಾ ವಿರುದ್ಧ ಅಬ್ಬರ: ನಿಜವಾದ ಹೀರೋ ಎಂದ ಅಕ್ತರ್2 ದಿನಗಳ ಹಿಂದಷ್ಟೇ ICUನಲ್ಲಿದ್ದ ರಿಜ್ವಾನ್ ಆಸ್ಟ್ರೇಲಿಯಾ ವಿರುದ್ಧ ಅಬ್ಬರ: ನಿಜವಾದ ಹೀರೋ ಎಂದ ಅಕ್ತರ್

ಈ ಬಗ್ಗೆ ಮಾತನಾಡಿದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈ ಎರಡು ತಂಡಗಳನ್ನು ಕೂಡ ಟೀಮ್ ಇಂಡಿಯಾ ಯಾವ ಸಂದರ್ಭದಲ್ಲಿಯೂ ಕೂಡ ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ. ಆದರೆ ಭಾರತ ಟಿ20 ಕ್ರಿಕೆಟ್ ಮಾದರಿಗೆ ಅಗತ್ಯವಾಗಿರುವ ನಿರ್ಭೀತ ಆಟವನ್ನು ಆಡಬೇಕು ಎಂಬ ಮಾತನ್ನು ಹೇಳಿದ್ದಾರೆ ವೀರೇಂದ್ರ ಸೆಹ್ವಾಗ್.

"ಟೀಮ್ ಇಂಡಿಯಾ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಮಡಗಳಿಂದ ಕಲಿಯಬೇಕಿರುವುದು ಏನಿಲ್ಲ. ಭಾರತ ತಂಡ ಉತ್ತಮವಾಗಿ ಕ್ರಿಕೆಟ್ ತಂಡವಾಗಿದೆ. ಯಾವುದೇ ದಿನದಲ್ಲಾದರೂ ಭಾರತ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಒಂದು ಅಂಶವನ್ನು ಅಳವಡಿಸಿಕೊಳ್ಳಬೇಕೆಂದರೆ ಅದು ಸಕಾರಾತ್ಮಕವಾಗಿ ಇರವೇಕು ಹಾಗೂ ಸಕಾರಾತ್ಮಕವಾಗಿ ಆಡಬೇಕು. ಯಾಕೆಂದರೆ ಟಿ20 ಅಥವಾ ವೈಟ್‌ವಬಾಲ್ ಕ್ರಿಕೆಟ್ ಧೈರ್ಯಶಾಲಿ ಆಟಗಾರರ ಆಟ. ಈ ಮಾದರಿಯಲ್ಲಿ ನೀವು ಸವಾಲನ್ನು ಸ್ವೀಕರಿಸಬೇಕು. ನಿಮ್ಮ ಸಾಮರ್ಥ್ಯವನ್ನು ನೀವು ವ್ಯಕ್ತಪಡಿಸಲೇಬೇಕು" ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.

ವಿಶ್ವಕಪ್ ಫೈನಲ್‌ಗೂ ಮುನ್ನ ನ್ಯೂಜಿಲೆಂಡ್‌ಗೆ ಆಘಾತ: ಪ್ರಮುಖ ಆಟಗಾರ ತಂಡದಿಂದ ಔಟ್ವಿಶ್ವಕಪ್ ಫೈನಲ್‌ಗೂ ಮುನ್ನ ನ್ಯೂಜಿಲೆಂಡ್‌ಗೆ ಆಘಾತ: ಪ್ರಮುಖ ಆಟಗಾರ ತಂಡದಿಂದ ಔಟ್

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಸೋಲು ಕಾಣುವ ಮೂಲಕ ಟೀಮ್ ಇಂಡಿಯಾ ಈ ವಿಶ್ವಕಪ್ ಟೂರ್ನಿಯಿಂದ ಸೂಪರ್ 12 ಹಂತದಿಂದಲೇ ಹೊರಬಿದ್ದಿತ್ತು. ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ ನಾಲ್ಕನೇ ಬಾರಿಗೆ ನಾಕೌಟ್ ಹಂತವನ್ನು ಪ್ರವೇಶಿಸಲು ಭಾರತ ವಿಫಲವಾಗಿದೆ. ಆದರೆ ಕಳೆದ 9 ವರ್ಷಗಳಲ್ಲಿ ಭಾರತ ಇದೇ ಮೊದಲ ಬಾರಿಗೆ ವಿಶ್ವಕಪ್ ವೇದಿಕೆಯಲ್ಲಿ ನಾಕೌಟ್ ಹಂತಕ್ಕೇರದೆ ಹಿಂದಿರುಗಿದಂತಾಗಿದೆ.

ಭಾರತ ಈಗ ಮತ್ತೊಂದು ದ್ವಿಪಕ್ಷೀಯ ಸರಣಿಗೆ ಸಜ್ಜಾಗುತ್ತಿದೆ. ನ್ಯೂಜಿಲೆಂಡ್ ವಿರುದ್ಧ ನವೆಂಬರ್ 17ರಿಂದ ಟಿ20 ಸರಣಿ ನಡೆಯಲಿದ್ದು ಈ ಸರಣಿಗೆ ಈಗಾಗಲೇ ಭಾರತ ತಂಡವನ್ನು ಘೋಷಿಸಲಾಗಿದೆ. ರೋಹಿತ್ ಶರ್ಮಾ ಈ ತಂಡವನ್ನು ಮುನ್ನಡೆಸಲಿದ್ದು ಕೆಎಲ್ ರಾಹುಲ್ ಭಾರತ ತಂಡದ ಉಪನಾಯಕನ ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ.

ಐಪಿಎಲ್ 2021ರಲ್ಲಿ ಮಿಂಚಿದ ಈ 5 ಯುವ ಆಟಗಾರರ ಕಣ್ಣು ಈಗ ಮುಂದಿನ ಟಿ20 ವಿಶ್ವಕಪ್ ಮೇಲೆ!ಐಪಿಎಲ್ 2021ರಲ್ಲಿ ಮಿಂಚಿದ ಈ 5 ಯುವ ಆಟಗಾರರ ಕಣ್ಣು ಈಗ ಮುಂದಿನ ಟಿ20 ವಿಶ್ವಕಪ್ ಮೇಲೆ!

"ಭಾರತ ಈ ಹಿಂದೆ ಈ ರೀತಿಯ ನಿರ್ಭಿತ ಆಟವನ್ನು ಸಮರ್ಥವಾಗಿ ಆಡಿತ್ತು. ಈಗ ಮತ್ತೆ ಅದೇ ರೀತಿಯ ಪ್ರದರ್ಶನವನ್ನು ಪುನರಾವರ್ತಿಸುವ ಸಮಯ ಬಂದಿದೆ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ. "ನಾನು ಒಂದು ಸಂಗತಿಯನ್ನು ಹೇಳಲು ಬಯಸುವುದೆಂದರೆ ಭಾರತಕ್ಕೆ ನ್ಯೂಜಿಲೆಂಡ್ ತಂಡ ಆಗಮಿಸಿದಾಗ ಧೈರ್ಯ ಹಾಗೂ ಆಕ್ರಮಣಕಾರಿಯಾದ ಆಟವನ್ನು ಆಡಬೇಕು. ಫಲಿತಾಂಶದ ಬಗ್ಗೆ ನೀವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯಾಕೆಂದರೆ ನೀವು ಆಕ್ರಮಣಕಾರಿಯಾಗಿ ಆಡಿದರೆ ಫಲಿತಾಂಶ ನಿಮ್ಮ ಪರವಾಗಿಯೇ ಬರುತ್ತದೆ" ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.

Story first published: Friday, November 12, 2021, 20:30 [IST]
Other articles published on Nov 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X