ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಕಲ್ ಬಾಲ್ ಎಂದರೇನು? ಇದನ್ನು ಆವಿಷ್ಕರಿಸಿದ್ದು ಭಾರತೀಯ ಬೌಲರ್ ಗೊತ್ತೇ?

what is knuckle ball in cricket zaheer khan introduced

ನವದೆಹಲಿ, ಜೂನ್ 24: ದೂಸ್ರಾ, ಕೇರಂ ಬಾಲ್, ಯಾರ್ಕರ್, ಗೂಗ್ಲಿ, ಬೌನ್ಸರ್, ರಿವರ್ಸ್ ಸ್ವಿಂಗ್, ಔಟ್ ಸ್ವಿಂಗ್, ಇನ್‌ ಸ್ವಿಂಗ್- ಹೀಗೆ ಕ್ರಿಕೆಟ್‌ನಲ್ಲಿ ನಾನಾ ತರಹ ನುಗ್ಗುವ, ತಿರುಗುವ, ಪುಟಿದು ಬರುವ ಚೆಂಡುಗಳಿಗೆ ನಾನಾ ಹೆಸರುಗಳಿವೆ. ಅವುಗಳ ನಡುವೆ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಇನ್ನೊಂದು ಪದ 'ನಕಲ್ ಬಾಲ್' (Knuckle Ball).

ಇತ್ತೀಚಿನ ಕ್ರಿಕೆಟ್‌ನಲ್ಲಿ 'ನಕಲ್ ಬಾಲ್' ಬಳಕೆ ಹೆಚ್ಚಾಗುತ್ತಿದೆ. ಈ ಹಿಂದೆಯೂ ಇದು ಬಳಕೆಯಲ್ಲಿದ್ದರೂ ಬ್ಯಾಟ್ಸ್‌ಮನ್‌ನನ್ನು ಗೊಂದಲಕ್ಕೆ ಸಿಲುಕಿಸುವ ತಂತ್ರವಾಗಿ ಹೆಚ್ಚು ಉಪಯೋಗಿಸುತ್ತಿರುವುದು ಇತ್ತೀಚೆಗೆ. ಇದು ವೇಗದ ಬೌಲರ್‌ಗಳಿಗೆ ಸಂಬಂಧಿಸಿದ ಎಸೆತ.

ಜೋಸ್ ಬಟ್ಲರ್, ಕ್ರಿಕೆಟ್ ಜಗತ್ತಿನ ಹೊಸ ಧೋನಿ ಎಂದ ಆಸ್ಟ್ರೇಲಿಯಾ ಕೋಚ್ಜೋಸ್ ಬಟ್ಲರ್, ಕ್ರಿಕೆಟ್ ಜಗತ್ತಿನ ಹೊಸ ಧೋನಿ ಎಂದ ಆಸ್ಟ್ರೇಲಿಯಾ ಕೋಚ್

ವೇಗದ ಬೌಲರ್‌ ಎಸೆಯುವ ಚೆಂಡು ಅಷ್ಟೇ ವೇಗವಾಗಿ ಬರಲಿದೆ ಎಂದು ನಿರೀಕ್ಷಿಸುವ ಬ್ಯಾಟ್ಸ್‌ಮನ್‌ನನ್ನು ಕಕ್ಕಾಬಿಕ್ಕಿಯನ್ನಾಗಿಸುವ ನಿಧಾನಗತಿಯ ಎಸೆತವನ್ನೇ ನಕಲ್ ಬಾಲ್ ಎನ್ನುತ್ತಾರೆ. ಆದರೆ, ಇದನ್ನು ನಿಧಾನಗತಿಯ ಚೆಂಡು ಎನ್ನಲಾಗುವುದಿಲ್ಲ. ಏಕೆಂದರೆ ಇಲ್ಲಿ ಬೌಲರ್‌ನ ಉದ್ದೇಶವನ್ನು ಬ್ಯಾಟ್ಸ್‌ಮನ್‌ ಮೊದಲೇ ಅರಿತು ನಿಧಾನವಾಗಿ ಬರುವ ಚೆಂಡಿಗೆ ಆಡಲು ಸಿದ್ಧನಾಗುವ ಅವಕಾಶ ಕಡಿಮೆ.

ಬ್ಯಾಟ್ಸ್‌ಮನ್‌ನನ್ನು ಗೊಂದಲಕ್ಕೆ ಸಿಲುಕಿಸುವ ಎಸೆತ

ಬ್ಯಾಟ್ಸ್‌ಮನ್‌ನನ್ನು ಗೊಂದಲಕ್ಕೆ ಸಿಲುಕಿಸುವ ಎಸೆತ

ವೇಗದ ಚೆಂಡಿಗೆ ನಿರೀಕ್ಷಿಸುವ ಬ್ಯಾಟ್ಸ್‌ಮನ್‌ ಚೆಂಡು ತನ್ನ ಬಳಿ ಬರುವ ಮುಂಚೆಯೇ ಬ್ಯಾಟ್ ಬೀಸುವ ಮೂಲಕ ಸಂಪೂರ್ಣವಾಗಿ ಹೊಡೆಯುವ ಅವಕಾಶದಿಂದ ತಪ್ಪಿಸಿಕೊಳ್ಳುವ ಅಥವಾ ಬ್ಯಾಟ್‌ಗೆ ತಗುಲಿಸಿದರೂ ಗಾಳಿಯಲ್ಲಿ ಚಿಮ್ಮುವ ಮೂಲಕ ಕ್ಯಾಚ್ ಆಗಿ ಪರಿವರ್ತನೆ ಹೊಂದಲು ಸಾಧ್ಯವಾಗಿಸುವ ತಂತ್ರಗಾರಿಕೆಯ ಎಸೆತ ಇದು.

ನಕಲ್ ಬಾಲ್ ಎಸೆಯುವುದು ಹೇಗೆ?

ನಕಲ್ ಬಾಲ್ ಎಸೆಯುವುದು ಹೇಗೆ?

ಸಾಮಾನ್ಯವಾಗಿ ವೇಗದ ಬೌಲರ್ ಚೆಂಡಿನ ಸೀಮ್‌ ಮೇಲೆ ತಮ್ಮ ತೋರು ಬೆರಳು ಹಾಗೂ ಮಧ್ಯದ ಬೆರಳನ್ನು ಇರಿಸಿಕೊಳ್ಳುತ್ತಾರೆ. ಆದರೆ ನಕಲ್ ಎಸೆತ ಹಾಕುವಾಗ ಬೌಲರ್ ತಮ್ಮ ತೋರು ಬೆರಳು ಮತ್ತು ಮಧ್ಯದ ಬೆರಳನ್ನು ಮಡಿಚಿ ಸೀಮ್ ಮೇಲೆ ಇರಿಸಿಕೊಳ್ಳುತ್ತಾರೆ. ಬ್ಯಾಟ್ಸ್‌ಮನ್‌ಗೆ ಇದು ಮಾಮೂಲಿ ಎಸೆತದಂತೆ ಕಾಣಿಸುತ್ತದೆ. ಅವರಿಗೆ ಬೌಲರ್‌ನ ಉದ್ದೇಶವನ್ನು ಗ್ರಹಿಸುವುದು ಕಷ್ಟ. ಬೌಲರ್ ಚೆಂಡು ಎಸೆದಾಗ ಅದು ನಿರೀಕ್ಷಿಸಿದ್ದಕ್ಕಿಂತಲೂ ನಿಧಾನವಾಗಿ ಬ್ಯಾಟ್ಸ್‌ಮನ್‌ ಕಡೆಗೆ ಬರುತ್ತದೆ.

ಈ ಎಸೆತವನ್ನು ಬಾಸ್ಕೆಟ್‌ಬಾಲ್‌ನ ನಕಲ್‌ಬಾಲ್‌ನಿಂದ ಪಡೆದುಕೊಳ್ಳಲಾಗಿದೆ. ಇದನ್ನು ಎಸೆಯುವ ದೈಹಿಕ ಬದಲಾವಣೆ ಬಹುತೇಕ ಒಂದೇ ರೀತಿ ಇರುತ್ತದೆ. ಆದರೆ, ಕ್ರಿಕೆಟ್ ಚೆಂಡಿನ ಸೀಮ್ ನೇರವಾಗಿರುತ್ತದೆ.

ಶಮಿ ಮೂಲಕ ಜನರಿಗೆ ನಾನು ಯಾರೆಂದು ಗೊತ್ತಾಗ್ತಿದೆ: ಚೇತನ್ ಶರ್ಮಾ

ಪರಿಚಯಿಸಿದ್ದು ಜಹೀರ್ ಖಾನ್

ಪರಿಚಯಿಸಿದ್ದು ಜಹೀರ್ ಖಾನ್

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ರೀತಿಯ 'ನಕಲ್ ಬಾಲ್'ಅನ್ನು ಮೊದಲು ಬಳಸಿದ್ದು ಭಾರತದ ವೇಗಿ ಜಹೀರ್ ಖಾನ್. 2011ರ ವಿಶ್ವಕಪ್ ಪಂದ್ಯದಲ್ಲಿಯೇ ಜಹೀರ್ ಖಾನ್ ನಕಲ್ ಬಾಲ್‌ಅನ್ನು ಪರಿಚಯಿಸಿದ್ದರು. ಇದರಲ್ಲಿ ಅವರು ಯಶಸ್ಸನ್ನೂ ಕಂಡಿದ್ದರು. ಮಹತ್ವದ ಸಂದರ್ಭದಲ್ಲಿ ಮಹತ್ವದ ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಇಯಾನ್ ಬೆಲ್ ಮತ್ತು ಪಾಲ್ ಕಾಲಿಂಗ್‌ವುಡ್, ವೆಸ್ಟ್ ಇಂಡೀಸ್ ವಿರುದ್ಧ ಡೆವೋನ್ ಸ್ಮಿತ್ ಅವರ ವಿಕೆಟ್ ಪಡೆದಿದ್ದ ಜಹೀರ್, ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೈಕಲ್ ಹಸ್ಸಿ ಅವರ ವಿಕೆಟ್ ಕಬಳಿಸಿದ್ದರು.

ವಿಶ್ವಕಪ್‌ಗಾಗಿ ಕಾದಿದ್ದ ಜಹೀರ್ ಖಾನ್

ವಿಶ್ವಕಪ್‌ಗಾಗಿ ಕಾದಿದ್ದ ಜಹೀರ್ ಖಾನ್

ಸಂದರ್ಶನವೊಂದರಲ್ಲಿ ಜಹೀರ್ ಖಾನ್ ಈ ಬಗ್ಗೆ ಹೇಳಿಕೊಂಡಿದ್ದರು. '2011ರ ಇಡೀ ವಿಶ್ವಕಪ್‌ನಲ್ಲಿ ಅದಕ್ಕಾಗಿ ನಾನು ಕಾಯುತ್ತಿದ್ದೆ. ಅದರಲ್ಲಿಯೂ ತವರಿನ ಪ್ರೇಕ್ಷಕರ ಎದುರು ಆಡುವಾಗ ಈ ರೀತಿಯ ತಂತ್ರದ ಬಳಕೆ ಮಾಡುವುದು ಗುರಿಯಾಗಿತ್ತು. ಆದರೆ, ಅದು ಸ್ವಲ್ಪ ಹೆಚ್ಚೇ ಒತ್ತಡವನ್ನೂ ಉಂಟುಮಾಡಿತ್ತು. ನಾನು ಹೊಸ ಬಗೆಯ ಎಸೆತವನ್ನು ಬಳಸಲು ಉದ್ದೇಶಿಸಿದ್ದೆ. ಅದು ನಕಲ್ ಬಾಲ್. ಟೂರ್ನಿಯಲ್ಲಿ ಅದನ್ನು ಪ್ರಯೋಗಿಸಲು ಒಂದು ವರ್ಷದಿಂದ ಅಭ್ಯಾಸ ಮಾಡುತ್ತಿದ್ದೆ. ಅದರಲ್ಲಿ ನಾನು ಪರಿಣತಿ ಪಡೆದಿದ್ದರೂ, ವಿಶ್ವಕಪ್‌ಗೂ ಮುನ್ನ ಉದ್ದೇಶಪೂರ್ವಕವಾಗಿಯೇ ಬಳಸಿರಲಿಲ್ಲ. ಇದರಿಂದ ನನಗೆ ಸಾಕಷ್ಟು ಯಶಸ್ಸು ಸಿಕ್ಕಿತು. ನಮ್ಮ ಯೋಜನೆ ಕೆಲಸ ಮಾಡಿದರೆ, ಅದು ಹೆಚ್ಚುವರಿ ತೃಪ್ತಿ ಕೊಡುತ್ತದೆ' ಎಂದು ಹೇಳಿದ್ದರು.

ದಕ್ಷಿಣ ಆಫ್ರಿಕಾ ಕಳಪೆ ಪ್ರದರ್ಶನ, ಐಪಿಎಲ್ ಕಾರಣವೆಂದ ಡುಪ್ಲೆಸಿ

ಭುವನೇಶ್ವರ್ ಕುಮಾರ್ ಬಳಕೆ

ಭುವನೇಶ್ವರ್ ಕುಮಾರ್ ಬಳಕೆ

ಭಾರತದ ಭುವನೇಶ್ವರ್ ಕುಮಾರ್ ಮತ್ತು ಆಸ್ಟ್ರೇಲಿಯಾದ ಆಂಡ್ರೂ ಟೈ ಸೇರಿದಂತೆ ಅನೇಕ ಬೌಲರ್‌ಗಳು ನಕಲ್ ಬಾಲ್‌ ಪ್ರಯೋಗವನ್ನು ಬಳಸುತ್ತಿದ್ದಾರೆ. ಐಪಿಎಲ್‌ನಲ್ಲಿ ಭಾರತದ ಆಟಗಾರ ಸಿದ್ಧಾರ್ಥ್ ಕೌಲ್ ಸಹ ಈ ಎಸೆತವನ್ನು ಬಳಸಿ ವಿಕೆಟ್ ಕೀಳುವಲ್ಲಿ ಮತ್ತು ರನ್‌ಗೆ ಕಡಿವಾಣ ಹಾಕುವಲ್ಲಿ ಸಫಲರಾಗಿದ್ದರು.

Story first published: Monday, June 24, 2019, 19:41 [IST]
Other articles published on Jun 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X