ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ಟಿ20 ವಿಶ್ವಕಪ್‌ 2022ರ ಒಟ್ಟು ಬಹುಮಾನದ ಮೊತ್ತ?; ವಿಜೇತರಿಗೆ ಸಿಗುವ ಹಣವೆಷ್ಟು?

What Is The Total Prize Money Of T20 World Cup 2022; How Much Will The Winner Get?

ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2022ಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಬಹುಮಾನದ ಹಣವನ್ನು ಪ್ರಕಟಿಸಿದೆ. ಈ ಐಸಿಸಿ ಈವೆಂಟ್‌ನಲ್ಲಿ ಒಟ್ಟು 5,600,000 ಯುಎಸ್ ಡಾಲರ್ ಬಹುಮಾನವನ್ನು ನೀಡಲಾಗುತ್ತದೆ, ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 45,71,75,040 ರೂ.ಗಳು.

Asia Cup 2022: ಭಾರತ ಮಹಿಳಾ ತಂಡಕ್ಕೆ ಲಂಕಾ ಮಹಿಳೆಯರ ಸವಾಲು; ಫ್ಯಾಂಟಸಿ ಡ್ರೀಮ್ ಟಿಂ, ಸಂಭಾವ್ಯ ತಂಡಗಳುAsia Cup 2022: ಭಾರತ ಮಹಿಳಾ ತಂಡಕ್ಕೆ ಲಂಕಾ ಮಹಿಳೆಯರ ಸವಾಲು; ಫ್ಯಾಂಟಸಿ ಡ್ರೀಮ್ ಟಿಂ, ಸಂಭಾವ್ಯ ತಂಡಗಳು

ಟಿ20 ವಿಶ್ವಕಪ್ 2022ರ ವಿಜೇತ ತಂಡವು 1.6 ಮಿಲಿಯನ್ ಡಾಲರ್ (13,06,21,440 ರೂ.) ಮೊತ್ತವನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಪಂದ್ಯಾವಳಿಯ ಫೈನಲ್ ಪಂದ್ಯವನ್ನು ನವೆಂಬರ್ 13ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ ಆಡಲಾಗುತ್ತದೆ. ಇನ್ನು ವಿಶ್ವಕಪ್‌ನ ರನ್ನರ್ ಅಪ್ ತಂಡಕ್ಕೆ 800,000 ಯುಎಸ್ ಡಾಲರ್ (6,53,10,720 ರೂ.) ನೀಡಲಾಗುವುದು.

ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳು ತಲಾ 400,000 ಡಾಲರ್

ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳು ತಲಾ 400,000 ಡಾಲರ್

ಇದಲ್ಲದೆ, ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳು ತಲಾ 400,000 ಡಾಲರ್ (3,26,55,360 ರೂ.) ಪಡೆಯುತ್ತಾರೆ. ಸೂಪರ್ 12 ಹಂತದಲ್ಲಿ ಪಂದ್ಯಾವಳಿಯಿಂದ ಹೊರಗುಳಿಯುವ ಎಂಟು ತಂಡಗಳು ತಲಾ 70,000 ಡಾಲರ್ (57,14,688 ರೂ.) ಪಡೆಯುತ್ತವೆ. ಕಳೆದ ವರ್ಷದಂತೆ, ಪ್ರತಿ ಸೂಪರ್ 12 ಪಂದ್ಯದ ವಿಜೇತರಿಗೆ 40,000 (32,65,536 ರೂ.) ನೀಡಲಾಗುವುದು.

ಸೂಪರ್ 12 ಸುತ್ತಿನ ಮೊದಲು 1ನೇ ರೌಂಡ್ ಇರುತ್ತದೆ, ಇದರಲ್ಲಿ ಎಂಟು ತಂಡಗಳು ನಾಲ್ಕು ಸೂಪರ್ 12 ಸ್ಥಾನಗಳಿಗಾಗಿ ಸ್ಪರ್ಧಿಸುತ್ತವೆ. ಮೊದಲ ಸುತ್ತಿನಲ್ಲಿ ಪ್ರತಿ ಗೆಲ್ಲುವ ತಂಡಗಳು 40,000 ಡಾಲರ್ (32,65,536 ರೂ.) ಬಹುಮಾನದ ಹಣವನ್ನು ಹೊಂದಿದೆ. ಆದರೆ ಮೊದಲ ಸುತ್ತಿನಲ್ಲಿ ನಾಕ್ಔಟ್ ಆಗುವ ನಾಲ್ಕು ತಂಡಗಳು ತಲಾ 40,000 ಡಾಲರ್ (32,65,536 ರೂ.) ಅನ್ನು ಪಡೆಯುತ್ತವೆ.

ಟಿ20 ವಿಶ್ವಕಪ್ 2022: ಸೂಪರ್ 12 ಮತ್ತು ರೌಂಡ್ 1 ತಂಡಗಳು

ಟಿ20 ವಿಶ್ವಕಪ್ 2022: ಸೂಪರ್ 12 ಮತ್ತು ರೌಂಡ್ 1 ತಂಡಗಳು

ಸೂಪರ್ 12 ಹಂತಕ್ಕೆ ನೇರವಾಗಿ ಅರ್ಹತೆ ಪಡೆದ ಎಂಟು ತಂಡಗಳೆಂದರೆ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ.

ಮೊದಲ ಸುತ್ತಿನಲ್ಲಿ ಭಾಗವಹಿಸಲಿರುವ ಎಂಟು ತಂಡಗಳ ಪೈಕಿ ನಮೀಬಿಯಾ, ಶ್ರೀಲಂಕಾ, ನೆದರ್ಲೆಂಡ್ಸ್ ಮತ್ತು ಯುಎಇ ತಂಡಗಳು ಎ ಗುಂಪಿನಲ್ಲಿದ್ದರೆ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಐರ್ಲೆಂಡ್ ಮತ್ತು ಜಿಂಬಾಬ್ವೆ ಬಿ ಗುಂಪಿನಲ್ಲಿದೆ.

ಮೊದಲ ಸುತ್ತಿನ ವಿಜೇತರು ಮತ್ತು ರನ್ನರ್ ಅಪ್ ಸೂಪರ್ 12 ಸುತ್ತಿಗೆ ಪ್ರವೇಶಿಸುತ್ತಾರೆ. ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಸೂಪರ್ 12ರ ಗುಂಪು 1ರಲ್ಲಿ ಸ್ಥಾನ ಪಡೆದಿವೆ. ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಗುಂಪು 2ರಲ್ಲಿವೆ.

ಸೂಪರ್ 12 ಸುತ್ತಿನಲ್ಲಿ ಅಗ್ರ ಎರಡು ತಂಡಗಳು ನಾಕೌಟ್‌ಗೆ ಅರ್ಹತೆ

ಸೂಪರ್ 12 ಸುತ್ತಿನಲ್ಲಿ ಅಗ್ರ ಎರಡು ತಂಡಗಳು ನಾಕೌಟ್‌ಗೆ ಅರ್ಹತೆ

ಸೂಪರ್ 12 ಸುತ್ತಿನಲ್ಲಿ ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ನಾಕೌಟ್‌ಗೆ ಅರ್ಹತೆ ಪಡೆಯುತ್ತವೆ. ಮೊದಲ ಸೆಮಿಫೈನಲ್ ನವೆಂಬರ್ 9ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ (SCG) ನಲ್ಲಿ ನಡೆಯಲಿದೆ. ಎರಡನೇ ಸೆಮಿಫೈನಲ್ ನವೆಂಬರ್ 10 ರಂದು ಅಡಿಲೇಡ್ ಓವಲ್‌ನಲ್ಲಿ ನಡೆಯಲಿದೆ, ನಂತರ ನವೆಂಬರ್ 13ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ ಗ್ರ್ಯಾಂಡ್ ಫೈನಲ್ ನಡೆಯಲಿದೆ.

ಆತಿಥೇಯ ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ನ ಹಾಲಿ ಚಾಂಪಿಯನ್ ಆಗಿದೆ. ಕಳೆದ ವರ್ಷ ದುಬೈನಲ್ಲಿ ನಡೆದ ಏಕಪಕ್ಷೀಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತ್ತು.

Story first published: Saturday, October 1, 2022, 10:31 [IST]
Other articles published on Oct 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X