ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ-ರೋಹಿತ್ ಜೋಡಿಯ ವಿಕೆಟ್ ಪಡೆಯಲು ಅಂಪೈರ್ ಬಳಿ ಸಹಾಯ ಕೇಳಿದ್ದ ಫಿಂಚ್

When Aaron Finch Sought Advice From Umpire Michael Gough To Break Kohli-rohit Stand

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಎದುರಾಳಿಗಳ ಪಾಲಿಗೆ ಸಿಂಹಸ್ವಪ್ನ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿನಿಂತು ಆಡಿದರೆ ಎಂತಾ ಎದುರಾಳಿ ಕೂಡ ತೀರಾ ಸಾಮಾನ್ಯ ತಂಡದಂತಾಗಿ ಬಿಡುತ್ತದೆ. ಇಂತಾ ಪರಿಸ್ಥಿತಿ ಎದುರಿಸಿದ್ದ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಈ ಜೊಡಿಯನ್ನು ಬೇರ್ಪಡಿಸಲು ಅಂಪಾಯರ್ ಬಳಿಯೇ ಸಹಾಯವನ್ನು ಕೇಳಿದ್ದರಂತೆ.

ಆಗಸ್ಟ್‌ನಲ್ಲಿ ಇಂಡಿಯಾ vs ಶ್ರೀಲಂಕಾ ಕ್ರಿಕೆಟ್ ಸರಣಿಗೆ ಒಪ್ಪಿಗೆ ಸೂಚಿಸಿದ ಬಿಸಿಸಿಐಆಗಸ್ಟ್‌ನಲ್ಲಿ ಇಂಡಿಯಾ vs ಶ್ರೀಲಂಕಾ ಕ್ರಿಕೆಟ್ ಸರಣಿಗೆ ಒಪ್ಪಿಗೆ ಸೂಚಿಸಿದ ಬಿಸಿಸಿಐ

ಇದು ನಡೆದಿದ್ದು ಆಸ್ಟ್ರೇಲಿಯಾ ವಿರುದ್ಧ ಇದೇ ವರ್ಷ ನಡೆದಿದ್ದ ಏಕದಿನ ಸರಣಿಯಲ್ಲಿ. ಈ ಘಟನೆಯ ಬಗ್ಗೆ ಸ್ವತಃ ಅಂಪೈರ್ ಮೈಕಲ್ ಗಾಫ್ ಹೇಳಿಕೊಂಡಿದ್ದಾರೆ. 40ರ ಹರೆಯದ ಗಾಫ್ ಈವರೆಗೆ 62 ಏಕದಿನ ಪಂದ್ಯಗಳಿಗೆ ಅಂಪೈರ್ ಆಗಿ ಕರ್ತವ್ಯ ಸಲ್ಲಿಸಿದ್ದಾರೆ. ಅದರಲ್ಲಿ ಈ ವರ್ಷಾರಂಭದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯೂ ಸೇರಿದೆ.

ಸಂದರ್ಶನದಲ್ಲಿ ವಿವರಿಸಿದ ಅಂಪೈರ್

ಸಂದರ್ಶನದಲ್ಲಿ ವಿವರಿಸಿದ ಅಂಪೈರ್

ನಿಯತಕಾಲಿಕೆಯೊಂದಕ್ಕೆ ಮಾತನಾಡಿದ ಅಂಪೈರ್ ಮೈಕಲ್ ಗಾಫ್ ಅಪರೂಪದ ಘಟನೆಯ ಬಗ್ಗೆ ನೆನಪಿಸಿಕೊಂಡಿದ್ದಾರೆ. 'ನನಗೆ ನೆನಪಿದೆ. ಭಾರತ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಈ ಜೋಡಿ ಅದ್ಭುತವಾಗಿ ಆಡುತ್ತಿದ್ದರು. ಸ್ಕ್ವೇರ್ ಲೆಗ್‌ನಲ್ಲಿ ನನ್ನ ಸಮೀಪದಲ್ಲಿ ಆರೋನ್ ಫಿಂಚ್ ಕೂಡ ಫೀಲ್ಡಿಂಗ್‌ಗಾಗಿ ನಿಂತಿದ್ದರು. ಆಗ ಈ ಮಾತುಕತೆ ನಡೆದಿತ್ತು' ಎಂದು ಗಾಫ್ ಹೇಳಿದ್ದಾರೆ.

ಹೇಗೆ ಬೌಲಿಂಗ್ ಮಾಡಲಿ?

ಹೇಗೆ ಬೌಲಿಂಗ್ ಮಾಡಲಿ?

"ನನ್ನ ಬಳಿ ಬಂದ ಫಿಂಚ್ ಹೇಗೆ ನಾನು ಇವರಿಗೆ ಬೌಲಿಂಗ್ ಮಾಡಬಹುದು ಎಂದು ಕೇಳಿದರು, ನಾನು ಅವರನ್ನು ನೋಡಿ 'ನನ್ನ ತಟದಟೆಯಲ್ಲಿ ನನಗೆ ಸಾಕಷ್ಟಿದೆ. ನಿಮಗೂ ನಿಮ್ಮ ತಟ್ಟೆಯಲ್ಲಿ ಇದೆ' ಎಂದು ಹೇಳಿದ್ದಾಗಿ ಅಂಪೈರ್ ಮೈಕಲ್ ಗಾಫ್ ಹೇಳಿಕೆಯನ್ನು ನೀಡಿದ್ದಾರೆ.

ಬೆಂಗಳೂರಿನಲ್ಲೇ ನಡೆದಿತ್ತು ಪಂದ್ಯ

ಬೆಂಗಳೂರಿನಲ್ಲೇ ನಡೆದಿತ್ತು ಪಂದ್ಯ

ಭಾರತ ಮತ್ತು ಆಸ್ಟ್ರೇಲಿಯಾ ಜನವರಿಯಲ್ಲಿ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಬಗ್ಗೆ ಮೈಕಲ್ ಗಾಫ್ ಮಾತನಾಡಿದ್ದರು. ಸರಣಿಯ ಮೂರನೇ ಏಕದಿನ ಪಂದ್ಯವಾಗಿದ್ದ ಅಂದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬೃಹತ್ ಜೊತೆಯಾಟವನ್ನು ನೀಡಿದ್ದರು.

ಶತಕದ ಜೊತೆಯಾಟ

ಶತಕದ ಜೊತೆಯಾಟ

137 ರನ್‌ಗಳ ಜೊತೆಯಾಟವನ್ನು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೋಡಿ ನೀಡಿದ್ದರು. ವಿರಾಟ್ ಕೊಹ್ಲಿ 89 ರನ್ ಸಿಡಿಸಿದ್ದರೆ, ರೋಹಿತ್ ಶರ್ಮಾ 119 ರನ್ ಸಿಡಿಸಿ ಆಸ್ಟ್ರೇಲಿಯಾ ತಂಡಕ್ಕೆ ಬೃಜತ್ ಸವಾಲೊಡ್ಡಲು ಕಾರಣರಾಗಿದ್ದರು. ಇನ್ನು ಅಂಪೈರ್ ಮೈಕಲ್ ಗಾಫ್ ಪ್ರಥಮ ದರ್ಜೆ ಕ್ರಿಕೆಟಿಗನಾಗಿ 67 ಪಂದ್ಯಗಳನ್ನು ಇಂಗ್ಲೆಂಡ್‌ನ ದರ್ಹಮ್ ಪರವಾಗಿ ಆಡಿದ್ದಾರೆ.

Story first published: Thursday, June 11, 2020, 21:42 [IST]
Other articles published on Jun 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X