ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತನನ್ನು ಓಪನಿಂಗ್ ಮಾಡಲು ಹೇಳಿದೆ, ಆದ್ರೆ ಸೆಂಚುರಿಯೇ ಸಿಡಿಸಿಬಿಟ್ಟ ಎಂದ ದಿಲೀಪ್ ವೆಂಗಸರ್ಕಾರ್

Virat kohli

ಮಾಜಿ ನಾಯಕ ವಿರಾಟ್ ಕೊಹ್ಲಿ ಅಂಡರ್-19 ಕ್ರಿಕೆಟ್ ಮೂಲಕ ಬಂದು ಭಾರತೀಯ ಕ್ರಿಕೆಟ್‌ನ ಸೂಪರ್‌ಸ್ಟಾರ್‌ ಆದವರಲ್ಲಿ ಒಬ್ಬರು. ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭದಲ್ಲಿ ಮಾಝಿ ಆಟಗಾರ ಮತ್ತು ಮುಖ್ಯ ಆಯ್ಕೆಗಾರ ದಿಲೀಪ್ ವೆಂಗ್‌ಸರ್ಕರ್ ಅವರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅದ್ರಲ್ಲೂ ವೆಂಗ್‌ಸರ್ಕಾರ್ ಆಯ್ಕೆಗಾರರಾಗಿದ್ದಾಗಲೇ ಕೊಹ್ಲಿ ಹಿರಿಯ ತಂಡಕ್ಕೆ ಆಯ್ಕೆಯಾದರು.

ವಿರಾಟ್‌ ಕೊಹ್ಲಿಯನ್ನ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪರಿಚಯಿಸಿದ್ದಷ್ಟೇ ಅಲ್ಲದೆ ಎಂ.ಎಸ್ ಧೋನಿ ವೃತ್ತಿಜೀವನವನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ದರು. ಧೋನಿ ನಾಯಕತ್ವದಲ್ಲಿ ಕೊಹ್ಲಿ ಹಿರಿಯರ ತಂಡಕ್ಕೆ ಪದಾರ್ಪಣೆ ಮಾಡಿದರು. ನಂತರ ಧೋನಿ ನಾಯಕತ್ವದಿಂದ ಕೆಳಗಿಳಿದಾಗ ಕೊಹ್ಲಿ ನಾಯಕತ್ವ ವಹಿಸಿಕೊಂಡರು. ಭಾರತ ಅಂಡರ್-19 ತಂಡದಲ್ಲಿ ಆಡುವಾಗ ವೆಂಗ್‌ಸರ್ಕರ್ ಅವರು ಕೊಹ್ಲಿಯ ನೆನಪನ್ನು ಹಂಚಿಕೊಂಡಿದ್ದಾರೆ.

 2008ರ ನ್ಯೂಜಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ

2008ರ ನ್ಯೂಜಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ

2008 ರಲ್ಲಿ ನ್ಯೂಜಿಲೆಂಡ್ ಎ ವಿರುದ್ಧದ ಪಂದ್ಯದಲ್ಲಿ ವಿರಾಟ್ ಭಾರತ ಎ ತಂಡದಲ್ಲಿ ಆಡಿದ ಅನುಭವವನ್ನು ದಿಲೀಪ್ ವೆಂಗ್‌ಸರ್ಕರ್ ನೆನಪಿಸಿಕೊಂಡರು. ಆಯ್ಕೆಗಾರರ ​​ದೂರದೃಷ್ಟಿಯೇ ಅಂದು ಯಶಸ್ಸು ಕಂಡಿತು. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನಾನು ಅವರನ್ನು ಓಪನರ್ ಆಗಿ ಕಣಕ್ಕಿಳಿಯಲು ಕೇಳಿದೆ. ಅವರು ಅದಕ್ಕೆ ಒಪ್ಪಿದರು.

ಈ ಪಂದ್ಯದಲ್ಲಿ ಭಾರತ 270 ರನ್‌ಗಳನ್ನು ಬೆನ್ನಟ್ಟಬೇಕಿತ್ತು. ಅಂತಾರಾಷ್ಟ್ರೀಯ ವೇಗದ ಬೌಲರ್‌ಗಳೊಂದಿಗೆ ಕಿವೀಸ್ ಬಲಿಷ್ಠ ಬೌಲಿಂಗ್ ಲೈನ್ ಅಪ್ ಹೊಂದಿತ್ತು. ಈ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ವಿರಾಟ್ ಶತಕ ಬಾರಿಸಿದ್ದರು ಎಂದು ವೆಂಗ್‌ಸರ್ಕರ್ ಹೇಳಿದ್ದಾರೆ.

Ind vs Aus 2nd T20: ಟಾಸ್ ವಿಳಂಬ, ಜೊತೆಯಾದ ಆರ್‌ಸಿಬಿ ಆಟಗಾರರು

ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಭಾಗಿ

ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಭಾಗಿ

ಈ ಶತಕ ಮಾತ್ರವಲ್ಲದೆ ಇತರ ಕೆಲವು ಉತ್ತಮ ಇನ್ನಿಂಗ್ಸ್‌ಗಳನ್ನು ಸಹ, ಆಗಿನ ಆಯ್ಕೆಗಾರ ದಿಲೀಪ್ ವೆಂಗ್‌ಸರ್ಕರ್ ಅವರು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ಭಾರತೀಯ ಹಿರಿಯ ತಂಡದಲ್ಲಿ ವಿರಾಟ್ ಕೊಹ್ಲಿಯನ್ನು ಸೇರಿಸಿಕೊಂಡರು. ಭಾರತವು ಆಗಸ್ಟ್ 2008 ರಲ್ಲಿ ಶ್ರೀಲಂಕಾದಲ್ಲಿ ಏಕದಿನ ಸರಣಿಯನ್ನು ಆಡಿತು. ವಿರಾಟ್‌ಗೆ ಒಡಿಐಗೆ ಪಾದಾರ್ಪಣೆ ಮಾಡಿದರು. ನಾಲ್ಕನೇ ಪಂದ್ಯದಲ್ಲಿ ಅವರು ತಮ್ಮ ಚೊಚ್ಚಲ ಅರ್ಧಶತಕವನ್ನು ಗಳಿಸಿದರು ಮತ್ತು ಐದು ಪಂದ್ಯಗಳಿಂದ 31.80 ಸರಾಸರಿಯಲ್ಲಿ 159 ರನ್ ಗಳಿಸಿದರು. ಈ ಸರಣಿಯು ಕೊಹ್ಲಿಯ ಕನಸಿನ ವೃತ್ತಿಜೀವನಕ್ಕೆ ನಾಂದಿ ಹಾಡಿತು.

ಅನುಮಾನವೇ ಇಲ್ಲ, ಟಿ20 ವಿಶ್ವಕಪ್‌ನಲ್ಲಿ ಭಾರತ ಫೇವರೀಟ್ ಎಂದ ಕ್ರಿಕೆಟ್ ದಿಗ್ಗಜ ಜಾಕ್ ಕ್ಯಾಲೀಸ್

ನ್ಯೂಜಿಲೆಂಡ್ ವಿರುದ್ಧ ಅಜೇಯ ಶತಕ ಸಿಡಿಸಿದ ವಿರಾಟ್

ನ್ಯೂಜಿಲೆಂಡ್ ವಿರುದ್ಧ ಅಜೇಯ ಶತಕ ಸಿಡಿಸಿದ ವಿರಾಟ್

ನ್ಯೂಜಿಲೆಂಡ್ ವಿರುದ್ಧ ಭಾರತ ಎ ಪರ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ರು. ಶತಕ ಬಾರಿಸಿದ ಬಳಿಕ ಭಾರತ ಗೆಲ್ಲಲಿದೆ ಎಂದು ವಿರಾಟ್ ಭರವಸೆ ನೀಡಿದರು. ಅವರು ಔಟಾಗದೆ 123 ರನ್ ಗಳಿಸಿದರು. ಆಗ ವಿರಾಟ್ ಪ್ರಬುದ್ಧನಾಗಿದ್ದಾನೆ ಎಂದು ನನಗೆ ಅರಿವಾಯಿತು.

ನಾನು ಅಂಡರ್-16 ದಿನಗಳಿಂದ ವಿರಾಟ್ ಅವರನ್ನು ನೋಡುತ್ತಿದ್ದೇನೆ. ನಂತರ ನಾನು ಅವರನ್ನು ಭಾರತ ಮತ್ತು 19 ವರ್ಷದೊಳಗಿನವರ ತಂಡದೊಂದಿಗೆ ನೋಡಿದೆ. ಹಾಗಾಗಿಯೇ ಶ್ರೀಲಂಕಾ ಜೊತೆಗಿನ ಸರಣಿಗೆ ವಿರಾಟ್ ತಂಡದಲ್ಲಿರಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಯುವ ತಾರೆಯನ್ನು ಪೋಷಿಸಲು ಇದು ಸೂಕ್ತ ಅವಕಾಶ ಎಂದು ವೆಂಗ್‌ಸರ್ಕರ್ ಅವರು ಅಭಿಪ್ರಾಯಪಟ್ಟಿದ್ದರು. ಇದ್ರಿಂದಾಗಿಯೇ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನ ಅದ್ಭುತ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.

Story first published: Friday, September 23, 2022, 23:15 [IST]
Other articles published on Sep 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X