ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಆಯ್ಕೆಯನ್ನೇ ವಿರೋಧಿಸಿದ್ದ ಧೋನಿ

When Ms Dhoni Didnt Want Virat Kohli To Play For India

ವಿರಾಟ್ ಕೊಹ್ಲಿ ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ಸಾಮ್ರಾಟನಾಗಿ ಮೆರೆಯುತ್ತಿದ್ದಾರೆ. ಅನೇಕ ದಾಖಲೆಗಳನ್ನು ವಿರಾಟ್ ಕೊಹ್ಲಿ ತಮ್ಮ ಹೆಸರಿನಲ್ಲಿ ಬರೆಯುತ್ತಿದ್ದಾರೆ. ಕ್ರಿಕೆಟ್‌ ಲೋಕದಲ್ಲಿ ವಿರಾಟ್ ಕಿಂಗ್ ಕೊಹ್ಲಿ ಎಂದೇ ಖ್ಯಾತರಾಗಿದ್ದಾರೆ.

ನಾಯಕನಾದ ಬಳಿಕ ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿಗೆ ಧೋನಿ ಎಲ್ಲಾ ರೀತಿಯಲ್ಲೂ ಸಹಕಾರವನ್ನು ನೀಡಿರುವುದನ್ನು ಗಮನಿಸಿದ್ದೇವೆ. ಕೊಹ್ಲಿ ನಿರ್ಧಾರವನ್ನು ತೆಗೆದುಕೊಳ್ಳುವಾಗ ಧೋನಿ ಸಲಹೆ ಪಡೆಯುವುದನ್ನೂ ಕಂಡಿದ್ದೇವೆ. ಆದರೆ ವಿರಾಟ್ ಕೊಹ್ಲಿಯ ಆಯ್ಕೆಯನ್ನು ಧೋನಿ ಹಿಂದೆ ವಿರೋಧಿಸಿದ್ದರು ಎಂಬ ವಿಚಾರವನ್ನು ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ದಿಲೀಪ್ ವೆಂಗ್ ಸರ್ಕಾರ್ ಬಹಿರಂಗಪಡಿಸಿದ್ದರು.

"ಗಂಗೂಲಿ ಬೆಂಬಲಿಸಿದರು, ಆದರೆ ಧೋನಿ, ಕೊಹ್ಲಿ...": ಕಡೆಗೂ ಮೌನಮುರಿದ ಯುವಿ

ದಿಲೀಪ್ ವೆಂಗ್‌ ಸರ್ಕಾರ್ ಕೊಹ್ಲಿ ಆಯ್ಕೆಯ ಹಿಂದಿನ ರೋಚಕ ಬೆಳವಣಿಗೆಯ ಬಗ್ಗೆ ಏನು ಹೇಳಿದ್ದರು ಮುಂದೆ ಓದಿ..

ಅಂಡರ್‌ 19 ವಿಶ್ವಕಪ್ ಜಯಿಸಿದ್ದ ಕೊಹ್ಲಿ

ಅಂಡರ್‌ 19 ವಿಶ್ವಕಪ್ ಜಯಿಸಿದ್ದ ಕೊಹ್ಲಿ

2008 ರಲ್ಲಿ ನಡೆದ ಐಸಿಸಿ ಅಂಡರ್ -19 ವಿಶ್ವಕಪ್‌ನಲ್ಲಿ ಭಾರತದ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಲ್ಲಿ ಕೊಹ್ಲಿ ನೀಡಿದ ಪ್ರದರ್ಶನ ಮತ್ತು ಮುನ್ನಡೆಸಿದ ರೀತಿಯಿಂದ ಮೊದಲ ಬಾರಿಗೆ ಚರ್ಚೆಯ ಕೇಂದ್ರಬಿಂದುವಾಗಿದ್ದರು ಕೊಹ್ಲಿ. ಇದು ಟೀಮ್ ಇಂಡಿಯಾಗೆ ಕೊಹ್ಲಿ ಕದತಟ್ಟಲು ಕಾರಣವಾಗಿತ್ತು.

ಕೊಹ್ಲಿ ಆಯ್ಕೆ ಬಯಸಿದ್ದ ವೆಂಗ್‌ಸರ್ಕಾರ್

ಕೊಹ್ಲಿ ಆಯ್ಕೆ ಬಯಸಿದ್ದ ವೆಂಗ್‌ಸರ್ಕಾರ್

2008 ರಲ್ಲಿ ತಂಡದ ಆಯ್ಕೆ ಸಂಬಂಧಿತ ಸಭೆಯಲ್ಲಿ ಅಂದಿನ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ದಿಲೀಪ್ ವೆಂಗ್‌ಸರ್ಕಾರ್ ಕೊಹ್ಲಿ ಹೆಸರನ್ನು ಪ್ರಸ್ತಾಪಿಸಿದ್ದರು. ಆದರೆ ಯುವ ಆಟಗಾರನ ಬದಲಿಗೆ ಅಂದಿನ ನಾಯಕ ಧೋನಿ ಮತ್ತು ಆಗಿನ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರು ಸುಬ್ರಮಣ್ಯಂ ಬದ್ರಿನಾಥ್ ಅವರನ್ನು ಆಯ್ಕೆ ಮಾಡಲು ಉತ್ಸುಕರಾಗಿದ್ದರು. 2018ರಲ್ಲಿ ಈ ಬಗ್ಗೆ ಸ್ವತಃ ದಿಲೀಪ್ ಬೆಂಗ್ ಸರ್ಕಾರ್ ಹೇಳಿಕೊಂಡಿದ್ದಾರೆ.

ಕೋಚ್‌ಗೂ ಕೊಹ್ಲಿ ಆಯ್ಕೆ ಇಷ್ಟವಿರಲಿಲ್ಲ

ಕೋಚ್‌ಗೂ ಕೊಹ್ಲಿ ಆಯ್ಕೆ ಇಷ್ಟವಿರಲಿಲ್ಲ

ಟೀಮ್ ಇಂಡಿಯಾ ನಾಯಕ ಧೋನಿಯ ಜೊತೆಗೆ ಅಂದಿನ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ಕೂಡ ವಿರಾಟ್ ಕೊಹ್ಲಿ ಆಯ್ಕೆಯನ್ನು ಬಯಸಿರಲಿಲ್ಲ. ಉತ್ತಮ ಪ್ರದರ್ಶನ ಹೊರತಾಗಿಯೂ ಯುವ ಕ್ರಿಕೆಟಿಗನಿಗೆ ಸ್ಥಾನವನ್ನು ನೀಡುವುದು ಅವರಿಗೆ ಇಷ್ಟವಿರಲಿಲ್ಲ.

ವಿರೋಧದ ಮಧ್ಯೆ ಕೊಹ್ಲಿ ಆಯ್ಕೆ

ವಿರೋಧದ ಮಧ್ಯೆ ಕೊಹ್ಲಿ ಆಯ್ಕೆ

ಕೊಹ್ಲಿ ಆಯ್ಕೆಯ ಬಗ್ಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿರೊಧಕ್ಕೆ ಕಾರಣವಾಗಿದ್ದು ಬಿಸಿಸಿಐ ಅಧ್ಯಕ್ಷರಾಗಿದ್ದ ತಮಿಳುನಾಡು ಮೂಲದ ಎಸ್. ಬದ್ರಿನಾಥ್ ಅವರಿಗೆ ಸ್ಥಾನ ಸಿಗಬೇಕು ಎಂಬುದಾಗಿತ್ತು. ಆದರೆ ದಿಲೀಪ್ ವೆಂಗ್‌ ಸರ್ಕಾರ್ ಶ್ರೀಲಂಕಾ ವಿರುದ್ಧದ ಸರಣಿಗೆ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿಯೇ ಬಿಟ್ಟಿದ್ದರು.

ದೊಡ್ಡ ಬೆಲೆತೆತ್ತ ವೆಂಗ್‌ಸರ್ಕಾರ್

ದೊಡ್ಡ ಬೆಲೆತೆತ್ತ ವೆಂಗ್‌ಸರ್ಕಾರ್

ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿಯನ್ನು ವಿರೋಧದ ಮಧ್ಯೆಯೂ ಆಯ್ಕೆ ಮಾಡಿದ ಕಾರಣಕ್ಕೆ ತಾನು ದೊಡ್ಡ ಬೆಲೆ ತೆರಬೇಕಾಯಿತು ಎಂದು ವೆಂಗ್‌ಸರ್ಕಾರ್ ಹೇಳಿಕೊಂಡಿದ್ದಾರೆ. ಆಯ್ಕೆದಾರನಾಗಿ ವೆಂಗ್ ಸರ್ಕಾರವನ್ನು ಎರಡೇ ವರ್ಷಕ್ಕೆ ವಜಾ ಮಾಡಿ ಕೆ.ಶ್ರೀಕಾಂತ್ ಅವರನ್ನು ಮುಖ್ಯ ಆಯ್ಕೆದಾರನನ್ನಾಗಿ ನೇಮಕ ಮಾಡಲಾಯಿತು ಎಂದು ವೆಂಗ್‌ಸರ್ಕಾರ್ ಹೇಳಿಕೊಂಡಿದ್ದರು.

Story first published: Thursday, April 2, 2020, 19:56 [IST]
Other articles published on Apr 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X