ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ ಆಟಗಾರನ ಅವತಾರ ಕಂಡು ಸಿಟ್ಟಾದ ಸುನಿಲ್ ಗವಾಸ್ಕರ್‌

When Zamans Rapper Style, Karthiks nickname caught Gavaskars attention

ದುಬೈ, ಸೆಪ್ಟೆಂಬರ್ 20: ಹಿರಿಯ ಕ್ರಿಕೆಟ್‌ ಆಟಗಾರ, ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ಅವರದ್ದು ಸದಾ ನೇರ ನುಡಿ, ಕ್ರಿಕೆಟ್ ವಿಷಯ ಬಂದರಂತೂ ಬಹು ನಿಷ್ಠುರವಾದಿ. ಅವರ ನಿಷ್ಠುರವಾದಿತನಕ್ಕೆ ನಿನ್ನೆಯೊಂದು ಘಟನೆ ಸಾಕ್ಷಿಯಾಗಿದೆ.

ಪಾಕಿಸ್ತಾನದ ಆಟಗಾರ ಫಕ್ಹಾರ್ ಜಮಾನ್ ತಮ್ಮ ಟೋಪಿಯನ್ನು ಹಿಂದೆ ತಿರುಗಿಸಿ ಸ್ಟೈಲ್‌ ಆಗಿ Rapperನಂತೆ ತೊಟ್ಟುಕೊಂಡು ಬೌಲಿಂಗ್ ಮಾಡುತ್ತಿದ್ದರು. ಇದು ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿದ್ದ ಸುನಿಲ್ ಗವಾಸ್ಕರ್ ಅವರನ್ನು ಕೆರಳಿಸಿತು.

'ಆತ ತೊಟ್ಟಿರುವುದು ರಾಷ್ಟ್ರದ ಚಿಹ್ನೆ ಇರುವ ಟೋಪಿ ಎಂದು ಹೇಳಿ' ನಾಯಕನಾದರೂ ಅವನಿಗೆ ಬುದ್ದಿ ಹೇಳಬೇಕು' ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. 'ಆತ ಈ ರೀತಿಯ ಸ್ಟೈಲ್‌ಗಳನ್ನು ಪಿಎಸ್‌ಎಲ್‌ (ಪಾಕಿಸ್ತಾನ ಪ್ರೀಮಿಯರ್ ಲೀಗ್‌)ನಲ್ಲಿ ಬೇಕಾದರೆ ಮಾಡಿಕೊಳ್ಳಲಿ, ಇದೊಂದು ಅಂತರರಾಷ್ಟ್ರೀಯ ಎಂದು ಕಟುವಾಗಿ ಹೇಳಿದರು.

ಚಿಕ್ಕಪ್ಪ ಹೇಳಿದ್ದ ಮಾತು ನೆನಪಿಸಿಕೊಂಡ ಗವಾಸ್ಕರ್

ಚಿಕ್ಕಪ್ಪ ಹೇಳಿದ್ದ ಮಾತು ನೆನಪಿಸಿಕೊಂಡ ಗವಾಸ್ಕರ್

ಇದೇ ಸಂದರ್ಭದಲ್ಲಿ ಒಂದು ತಮ್ಮದೇ ಅನುಭವವೊಂದನ್ನು ಗವಾಸ್ಕರ್ ಹೇಳಿದರು. ತಮ್ಮ ಚಿಕ್ಕಪ್ಪ ತಮಗೆ ಹೇಳಿದ್ದ ಮಾತೊಂದನ್ನು ಅವರು ನೆನಪಿಸಿಕೊಂಡರು. ನೀವು ಕ್ರಿಕೆಟ್ ಆಗದಿದ್ದರೂ ಸರಿ ಅವರಂತೆ ಉಡುಪು ಧರಿಸುವುದಾದರೂ ಕಲಿ ಎಂದಿದ್ದರು ಎಂದು ಅವರು ಹೇಳಿದರು.

ಕ್ರಿಕೆಟ್ ಜರ್ಸಿ ಮೇಲೆ ಗೌರವ ಹೊಂದಿದ್ದ ಗವಾಸ್ಕರ್

ಕ್ರಿಕೆಟ್ ಜರ್ಸಿ ಮೇಲೆ ಗೌರವ ಹೊಂದಿದ್ದ ಗವಾಸ್ಕರ್

ತಮಗೆ ಕ್ರಿಕೆಟ್‌ ಜರ್ಸಿ ಮೇಲೆ ಅಪಾರ ಒಲವು ಇತ್ತು ಎಂದು ನೆನಪಿಸಿಕೊಂಡ ಸುನೀಲ್ ಗವಾಸ್ಕರ್, ಅವರು ತೊಟ್ಟ ಜರ್ಸಿಗಳನ್ನು ನಾನು ತೊಡಲು ಕಾಯುತ್ತಿರುತ್ತಿದೆ. ಆದರೆ ನನ್ನ ಚಿಕ್ಕಪ್ಪ ಹೇಳಿದರು ಅದನ್ನು ಕೊಳ್ಳಲು ಸಾಧ್ಯವಿಲ್ಲ ಸಂಪಾದನೆ ಮಾಡಬೇಕು ಎಂದಿದ್ದರು ಎಂದು ಅವರು ಹಳೆಯ ನೆನಪುಗಳಿಗೆ ಜಾರಿದರು.

ಹೊಸ ತಲೆಮಾರಿಸ ಅಸಡ್ಡೆ

ಹೊಸ ತಲೆಮಾರಿಸ ಅಸಡ್ಡೆ

ಹೊಸ ತಲೆಮಾರಿನ ಆಟಗಾರರು ಆಟದ ಪ್ರತಿ ಅಸಡ್ಡೆಯಾಗಿದ್ದಾರೆ ತಮ್ಮ ಸಮಯದ ಆಟಗಾರರು ಆಟಕ್ಕೆ ಎಷ್ಟು ಗೌರವ ನೀಡುತ್ತಿದ್ದೆವು, ಎಷ್ಟು ಶಿಸ್ತಾಗಿರುತ್ತಿದ್ದೆವು ಎಂಬುದು ಅವರ ಮಾತಿನಲ್ಲಿ ಇಣುಕುತ್ತಿತ್ತು.

ದಿನೇಶ್ ಕಾರ್ತಿಕ್ ಉಡುಪಿನ ಬಗ್ಗೆ ಅಸಮಾಧಾನ

ದಿನೇಶ್ ಕಾರ್ತಿಕ್ ಉಡುಪಿನ ಬಗ್ಗೆ ಅಸಮಾಧಾನ

ಪಾಕಿಸ್ತಾನದ ಆಟಗಾರನ ಬಗ್ಗೆ ಮಾತ್ರವಲ್ಲ ದಿನೇಶ್ ಕಾರ್ತಿಕ್ ಅವರ ಉಡುಪಿನ ಬಗ್ಗೆಯೂ ಸುನಿಲ್ ಗವಾಸ್ಕರ್ ಆಕ್ಷೇಪ ವ್ಯಕ್ತಪಡಿಸಿದರು. ದಿನೇಶ್ ಕಾರ್ತಿಕ್ ಅವರ ಧಿರಿಸಿನ ಹಿಂದೆ ಅವರ ಹೆಸರಿನ ಬದಲಿಗೆ ಅವರ ಇನ್ಶಿಯನ್ 'DK' ಎಂದಿದೆ. ಇದು ಸಹ ಸುನಿಲ್ ಅವರಿಗೆ ಅಸಮಾಧಾನ ತರಿಸಿತು.

ಡಿಕೆ ಎಂದು ಇನ್ಶಿಯಲ್ ಹಾಕಿಸಿಕೊಂಡಿರುವ ದಿನೇಶ್

ಡಿಕೆ ಎಂದು ಇನ್ಶಿಯಲ್ ಹಾಕಿಸಿಕೊಂಡಿರುವ ದಿನೇಶ್

ಎಲ್ಲ ಆಟಗಾರರು ಸಮಾನರು, ಎಲ್ಲ ಆಟಗಾರರ ಹೆಸರು ಜರ್ಸಿ ಮೇಲೆ ಇದೆ ಹಾಗಿದ್ದಮೇಲೆ ದಿನೇಶ್ ಕಾರ್ತಿಕ್ ಹೆಸರೂ ಜರ್ಸಿ ಮೇಲೆ ಇರಬೇಕು. ಅವರು ಬೇಕಿದ್ದರೆ ಹೆಸರಿನ ಕೆಳಗೆ ತಮ್ಮ ಇನ್ಶಿಯನ್ 'DK'ಎಂದು ಬೇಕಿದ್ದರೆ ಬರೆಸಿಕೊಳ್ಳಲಿ ಎಂದು ಸಲಹೆ ನೀಡಿದರು.

ಮುಂದಿನ ಓವರ್‌ನಲ್ಲಿ ಸರಿಹೋದ ಫಕ್ಹಾರ್‌

ಮುಂದಿನ ಓವರ್‌ನಲ್ಲಿ ಸರಿಹೋದ ಫಕ್ಹಾರ್‌

ಸುನಿಲ್ ಗವಾಸ್ಕರ್ ಅವರ ಮಾತು ಫಕ್ಹಾರ್‌ ಜಮಾನ್ ಅವರಿಗೆ ಯಾರಾದರೂ ಹೇಳಿದರೋ ಏನೋ ಮುಂದಿನ ಓವರ್‌ ಬೌಲಿಂಗ್‌ಗೆ ಬಂದಾಗ ಅವರು ತಮ್ಮ ಟೋಪಿಯನ್ನು ಅಂಪೈರ್‌ ಕೈಗೆ ನೀಡಿದರು.

Story first published: Thursday, September 20, 2018, 16:21 [IST]
Other articles published on Sep 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X