ಡೆಲ್ಲಿ ಹಿಂದಿಕ್ಕಿ ದಾಖಲೆ ಬರೆದ ಕಿಂಗ್ಸ್ ಎಲೆವನ್ ''ಕ್ಯಾಪ್ಟನ್''

By ಕ್ರೀಡಾ ಡೆಸ್ಕ್

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2020ರ ಎರಡನೇ ಪಂದ್ಯದಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೂಪರ್ ಜಯ ದಾಖಲಿಸಿದೆ ನಿಜ. ಆದರೆ, ಪಂದ್ಯ ಆರಂಭಕ್ಕೂ ಮುನ್ನವೇ ಇಂದು ಪಂಜಾಬ್ ತಂಡದ ಹೊಸ ನಾಯಕರಾಗಿ ಕಣಕ್ಕಿಳಿದ ಕನ್ನಡಿಗ ಲೋಕೇಶ್ ರಾಹುಲ್ ಅವರು ಡೆಲ್ಲಿಯನ್ನು ಸೋಲಿಸಿದರು.

ಹೌದು, ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಕ್ಯಾಪ್ಟನ್ ಬದಲಾಯಿಸಿದ ಕೀರ್ತಿ/ ಅಪಕೀರ್ತಿ ದಾಖಲೆ ಪಂಜಾಬ್ ತಂಡಕ್ಕಿದೆ. ಪ್ರೀತಿ ಜಿಂಟಾ ಸಹ ಮಾಲೀಕತ್ವದ ಈ ತಂಡಕ್ಕೆ ಹೊಸ ಹೊಸ ನಾಯಕರು ಬಂದರೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ, ಲಕ್ ಕೂಡಾ ಬದಲಾಗಿಲ್ಲ. ಇಂದಿನ ಪಂದ್ಯದಲ್ಲಿ ನಾಯಕನ ಕ್ಯಾಪ್ ಧರಿಸಿದ ರಾಹುಲ್ ಕ್ಯಾಪ್ಟನ್ ನಂಬರ್ 12.

ಐಪಿಎಲ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ರಾಹುಲ್

ಪಂಜಾಬ್ ತಂಡಕ್ಕೂ ಮುನ್ನ ಅಥವಾ ಈ ಪಂದ್ಯಕ್ಕೂ ಮುನ್ನ ಡೆಲ್ಲಿ ತಂಡ ಈ ಅಪಕೀರ್ತಿ ದಾಖಲೆ ಹೊಂದಿತ್ತು. ಡೆಲ್ಲಿ ಡೇರ್ ಡೆವಿಲ್ಸ್ ಈಗಿನ ಡೆಲ್ಲಿ ಕ್ಯಾಪಿಟಲ್ಸ್ ತಂಡ 11 ಬಾರಿ ನಾಯಕನನ್ನು ಬದಲಾವಣೆ ಮಾಡಿದೆ. ಈ ದಾಖಲೆಯನ್ನು ಇಂದು ರಾಹುಲ್ ಅಳಿಸಿ ಹಾಕಿದರು. ಪಂಜಾಬ್ 12 ಬಾರಿ ನಾಯಕನನ್ನು ಬದಲಾಯಿಸಿದೆ.

ಅತಿ ಹೆಚ್ಚು ನಾಯಕನನ್ನು ಬದಲಾಯಿಸಿದ ಐಪಿಎಲ್ ತಂಡಗಳ ವಿವರ ಮುಂದಿದೆ..

ನಾಯಕನನ್ನು ಬದಲಾಯಿಸಿದ ಐಪಿಎಲ್ ತಂಡಗಳು

ನಾಯಕನನ್ನು ಬದಲಾಯಿಸಿದ ಐಪಿಎಲ್ ತಂಡಗಳು

ಅತಿ ಹೆಚ್ಚು ನಾಯಕನನ್ನು ಬದಲಾಯಿಸಿದ ಐಪಿಎಲ್ ತಂಡಗಳು

12: ಪಂಜಾಬ್

11: ಡೆಲ್ಲಿ

7: ಮುಂಬೈ

6: ಪುಣೆ

6: ಬೆಂಗಳೂರು

5: ರಾಜಸ್ಥಾನ

4: ಹೈದರಾಬಾದ್

2: ಚೆನ್ನೈ

2: ಕೋಲ್ಕತಾ

ನಾಯಕನ ಬದಲಾವಣೆಗೆ ವಿವಿಧ ಕಾರಣಗಳಿವೆ. ನಾಯಕನಾಗಿ ಸಂಪೂರ್ಣ ವೈಫಲ್ಯ, ಮ್ಯಾನೇಜ್ಮೆಂಟ್ ಜೊತೆ ವೈಮನಸ್ಯ, ಕಿತ್ತಾಟ, ಮಾನೇಜ್ಮೆಂಟ್ ಒತ್ತಡ, ಹರಾಜಿನಲ್ಲಿ ಬದಲಾವಣೆ, ನಿವೃತ್ತಿ, ಬಡ್ತಿ ಮುಂತಾದ ಕಾರಣಗಳನ್ನು ಹೆಸರಿಸಬಹುದು. ಕೆಲ ತಂಡಗಳಲ್ಲಿ ಕೆಲವರು ಹಂಗಾಮಿ ನಾಯಕರಾಗಿದ್ದರು. ಚೆನ್ನೈ ತಂಡ ಎಂದರೆ ಧೋನಿ ಬಿಟ್ಟರೆ ರೈನಾ ಎಂದೇ ಎಲ್ಲರಿಗೂ ನೆನಪಾಗುತ್ತದೆ .

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

ಡೆಲ್ಲಿ ಹಿಂದಿಕ್ಕಿದ ಪಂಜಾಬ್

ಡೆಲ್ಲಿ ಹಿಂದಿಕ್ಕಿದ ಪಂಜಾಬ್

ಡೆಲ್ಲಿ ಡೇರ್ ಡೆವಿಲ್ಸ್/ ಡೆಲ್ಲಿ ಕ್ಯಾಪಿಟಲ್ಸ್-11- ವೀರೇಂದ್ರ ಸೆಹ್ವಾಗ್, ಶ್ರೇಯಸ್ ಐಯ್ಯರ್, ಜಹೀರ್ ಖಾನ್, ಗೌತಮ್ ಗಂಭೀರ್, ಜೆಪಿ ಡುಮಿನಿ, ಮಹೇಲ ಜಯವರ್ದನೆ, ಕೆವಿನ್ ಪೀಟರ್ಸನ್, ದಿನೇಶ್ ಕಾರ್ತಿಕ್, ಜೇಮ್ಸ್ ಹೋಪ್ಸ್, ಕರುಣ್ ನಾಯರ್, ಡೇವಿಡ್ ವಾರ್ನರ್.

ಕಿಂಗ್ಸ್ ಎಲನ್ ಪಂಜಾಬ್- 12: ಆಡಂ ಗಿಲ್ ಕ್ರಿಸ್ಟ್, ಜಾರ್ಜ್ ಬೈಲಿ, ಯುವರಾಜ್ ಸಿಂಗ್, ರವಿಚಂದ್ರನ್ ಅಶ್ವಿನ್, ಗ್ಲೆನ್ ಮ್ಯಾಕ್ಸ್ ವೆಲ್, ಕುಮಾರ್ ಸಂಗಕ್ಕಾರ, ಡೇವಿಡ್ ಹಸ್ಸಿ, ಮುರಳಿ ವಿಜಯ್, ಡೇವಿಡ್ ಮಿಲ್ಲರ್, ಮಹೇಲ ಜಯವರ್ದನೆ, ವೀರೇಂದ್ರ ಸೆಹ್ವಾಗ್, ಕೆಎಲ್ ರಾಹುಲ್

ಮುಂಬೈ ಹಾಗೂ ಹೈದರಾಬಾದ್ ತಲಾ 7

ಮುಂಬೈ ಹಾಗೂ ಹೈದರಾಬಾದ್ ತಲಾ 7

ಮುಂಬೈ ಇಂಡಿಯನ್ಸ್ (7): ರೋಹಿತ್ ಶರ್ಮ, ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ರಿಕಿ ಪಾಂಟಿಂಗ್, ಶಾನ್ ಪೊಲ್ಲಾಕ್, ಡರೇನ್ ಬ್ರಾವೋ, ಕಿರನ್ ಪೊಲ್ಲಾರ್ಡ್.

ಸನ್ ರೈಸರ್ಸ್ ಹೈದರಾಬಾದ್ (7): ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಶಿಖರ್ ಧವನ್, ಕುಮಾರ್ ಸಂಗಕ್ಕಾರ, ಕೆಮರೂನ್ ವೈಟ್, ಭುವನೇಶ್ವರ್ ಕುಮಾರ್, ಡರೇನ್ ಸಾಮಿ

ಪುಣೆ, ಆರ್ ಸಿಬಿ, ಆರ್ ಆರ್

ಪುಣೆ, ಆರ್ ಸಿಬಿ, ಆರ್ ಆರ್

ಪುಣೆ ವಾರಿಯರ್ಸ್ ಇಂಡಿಯಾ (6): ಸೌರವ್ ಗಂಗೂಲಿ, ಯುವರಾಜ್ ಸಿಂಗ್, ಅರೋನ್ ಫಿಂಚ್, ಸ್ಟೀವ್ ಸ್ಮಿತ್, ರಾಸ್ ಟೇಲರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (6): ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ, ಡೇನಿಯಲ್ ವೆಟ್ಟೋರಿ, ರಾಹುಲ್ ದ್ರಾವಿಡ್, ಕೆವಿನ್ ಪೀಟರ್ಸನ್, ಶೇನ್ ವಾಟ್ಸನ್.

ರಾಜಸ್ಥಾನ್ ರಾಯಲ್ಸ್ (5): ಶೇನ್ ವಾರ್ನ್, ರಾಹುಲ್ ದ್ರಾವಿಡ್, ಅಜಿಂಕ್ಯ ರಹಾನೆ, ಶೇನ್ ವಾಟ್ಸನ್, ಸ್ಟೀವ್ ಸ್ಮಿತ್

ಕೆಕೆಅರ್ ಇನ್ನಿತರ ತಂಡಗಳು

ಕೆಕೆಅರ್ ಇನ್ನಿತರ ತಂಡಗಳು

ಕೋಲ್ಕತ್ತಾ ನೈಟ್ ರೈಡರ್ಸ್ (4): ಗೌತಮ್ ಗಂಭೀರ್, ದಿನೇಶ್ ಕಾರ್ತಿಕ್, ಸೌರವ್ ಗಂಗೂಲಿ, ಬ್ರೆಂಡನ್ ಮೆಕಲಮ್

ಡೆಕ್ಕನ್ ಚಾರ್ಜಸ್ (4): ಆಡಂ ಗಿಲ್ ಕ್ರಿಸ್ಟ್, ಕುಮಾರ್ ಸಂಗಕ್ಕಾರ, ವಿವಿಎಸ್ ಲಕ್ಷ್ಮಣ್, ಕೆಮರೂನ್ ವೈಟ್

ಚೆನ್ನೈ ಸೂಪರ್ ಕಿಂಗ್ಸ್ (2): ಎಂಎಸ್ ಧೋನಿ, ಸುರೇಶ್ ರೈನಾ.

ಗುಜರಾತ್ ಲಯನ್ಸ್ : ಸುರೇಶ್ ರೈನಾ, ಬ್ರೆಂಡನ್ ಮೆಕಲಮ್

ಕೊಚ್ಚಿ ಟಸ್ಕರ್ಸ್ ಕೇರಳ: ಮಹೇಲ್ ಜಯವರ್ದನೆ, ಪಾರ್ಥೀ ಪಟೇಲ್

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, September 21, 2020, 0:44 [IST]
Other articles published on Sep 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X